ಬ್ರೇಕಿಂಗ್ ನ್ಯೂಸ್
17-08-26 10:04 pm HK News Staffer ಕ್ರೈಂ
ಬೆಳಗಾವಿ, ಆ 17: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಆತಂಕ ಸೃಷ್ಟಿಸಿದ್ದು, ವಯೋವೃದ್ಧರೊಬ್ಬರ ಮೇಲೆ ನಾಯಿ ಭೀಕರವಾಗಿ ದಾಳಿ ನಡೆಸಿರುವ ಘಟನೆ ಮಹಾಂತೇಶ ನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ. ನಾಯಿಯೊಂದಿಗೆ ಸೆಣಸಾಡಿ ವೃದ್ಧರು ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಡೆದಿದ್ದೇನು?
ಭಾನುವಾರ ಬೆಳಗ್ಗೆ ವಯೋವೃದ್ಧರೊಬ್ಬರು ತಮ್ಮ ಪಾಡಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿಯೊಂದು ಅವರ ಮೇಲೆ ದಾಳಿ ನಡೆಸಿದೆ. ನಾಯಿಯ ದಾಳಿಯಿಂದ ಅವರು ನೆಲಕ್ಕೆ ಬಿದ್ದಿದ್ದು, ಬಳಿಕ ನಾಯಿ ಅವರನ್ನು ಮನಬಂದಂತೆ ಕಚ್ಚಲು ಮುಂದಾಗಿದೆ. ಕೊನೆಗೆ ಧೈರ್ಯದಿಂದ ನಾಯಿಯೊಂದಿಗೆ ಸೆಣಸಾಡಿದ ವೃದ್ಧರು ಅದನ್ನು ಜಾಡಿಸಿ ಒದ್ದಿದ್ದಾರೆ. ಇದರಿಂದ ನಾಯಿ ಅಲ್ಲಿಂದ ಓಡಿಹೋಗಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲೂ ಗಮನ ಸೆಳೆಯುತ್ತಿದೆ.
ಮಕ್ಕಳು, ವೃದ್ಧರು ಹೊರಬರಲು ಭಯ!
ಬೆಳಗಾವಿ ನಗರದ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಗೆ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಜುಲೈ ಅಂತ್ಯದವರೆಗೆ 16,269 ನಾಯಿ ಕಡಿತ ಪ್ರಕರಣ!
ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, 2026ರ ಜುಲೈ ಅಂತ್ಯದವರೆಗೆ ಬೆಳಗಾವಿ ಜಿಲ್ಲೆಯಲ್ಲಿ 16,269 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು 2025ರಲ್ಲಿ ಜಿಲ್ಲೆಯಲ್ಲಿ ಒಟ್ಟು 21,703 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದರು. ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಮುಂದುವರಿದಿರುವುದು ನಗರ ಹಾಗೂ ಜಿಲ್ಲೆಯ ಜನರಲ್ಲಿ ಕಳವಳಕ್ಕೆ ಕಾರಣವಾಗಿದೆ.
ನಗರ-ಪಟ್ಟಣಗಳಲ್ಲೇ ಹೆಚ್ಚು ಆತಂಕ
ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ನಗರವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಆಕ್ರಮಣಕಾರಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಆಕ್ರಮಣಕಾರಿ ನಾಯಿಗಳನ್ನು ಸ್ಥಳಾಂತರಿಸುತ್ತೇವೆ’
ನಗರದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಯಿಗಳ ದಾಳಿ ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ತಾಲೂಕಿನ ಸಾವಗಾಂವದಲ್ಲಿ ನಾಯಿಗಳ ವಸತಿ ಕೇಂದ್ರ ತೆರೆಯಲು ಜಾಗ ಗುರುತಿಸಲಾಗಿದ್ದು, ಆಕ್ರಮಣಕಾರಿ ನಾಯಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಲ್ಲೂ ಬಾಲಕನಿಗೆ ನಾಯಿ ದಾಳಿ;
ನಾಯಿ ದಾಳಿಯ ಆತಂಕ ಬೆಳಗಾವಿಗೆ ಮಾತ್ರ ಸೀಮಿತವಾಗಿಲ್ಲ. ಕಳೆದ ಜೂನ್‌ನಲ್ಲಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಹೇಶ್ವರಿ ನಗರದ 2ನೇ ಕ್ರಾಸ್‌ನಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ 12 ವರ್ಷದ ಬಾಲಕನ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿತ್ತು.
ಜೂನ್ 13ರಂದು ನಡೆದ ಘಟನೆಯಲ್ಲಿ ಶ್ಯಾಮ್ ಎಂಬುವರು ಸಾಕಿದ್ದ ರಾಟ್‌ವೀಲರ್ ತಳಿಯ ನಾಯಿ, ರಸ್ತೆಯಲ್ಲಿ ಸೈಕಲ್‌ನಲ್ಲಿ ಸಾಗುತ್ತಿದ್ದ ಸೋನಿ ಮೋನ್ (12) ಎಂಬ ಬಾಲಕನ ಹಿಂಭಾಗಕ್ಕೆ ಕಚ್ಚಿ ಗಾಯಗೊಳಿಸಿತ್ತು. ಈ ಘಟನೆಯೂ ನಗರ ಪ್ರದೇಶಗಳಲ್ಲಿ ಸಾಕು ಹಾಗೂ ಬೀದಿ ನಾಯಿಗಳ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
17-08-26 02:26 pm
HK News Staffer
ಜಮೀರ್ ಹಲ್ಲು ಕಿತ್ತ ಹಾವು, ನೆಪಕ್ಕಷ್ಟೇ ಸಚಿವ ಸ್ಥಾನ...
14-08-26 08:42 pm
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
18-08-26 02:42 pm
HK News Staffer
ನಿತಿನ್ ನಬಿನ್ ಸಾರಥ್ಯದಲ್ಲಿ ಬಿಜೆಪಿಗೆ ಹೊಸ ಟೀಮ್ ;...
17-08-26 09:45 pm
ಪ್ರಧಾನಿ ‘ದಿಮಾಗಿ ನಕ್ಸಲರು’ ಹೇಳಿಕೆಗೆ ರಿಜಿಜು ಅರ್ಥ...
17-08-26 05:38 pm
ನೀಟ್ ಪರೀಕ್ಷೆ ರದ್ದುಗೊಳಿಸಲು ತಮಿಳುನಾಡು ವಿಧಾನಸಭೆಯ...
11-08-26 10:25 pm
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
17-08-26 05:07 pm
HK News Staffer
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
18-08-26 03:00 pm
HK News Staffer
ಬೆಳಗಾವಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ; ವೃದ್ಧನ ಮೇಲ...
17-08-26 10:04 pm
ದಾಂಡೇಲಿ ವೈಲ್ಡರ್ ನೆಸ್ಟ್ ರೆಸಾರ್ಟ್ಗೆ ನುಗ್ಗಿದ ಬ್...
17-08-26 10:02 pm
ಮೊಮ್ಮಗನಿಂದಲೇ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಅ...
17-08-26 09:39 pm
ಚಾಮರಾಜನಗರ ಶೂಟೌಟ್ ಪ್ರಕರಣ ; ರಾಜ್ಯದಲ್ಲಿ 13 ಲಕ್ಷ...
17-08-26 05:02 pm