ಬ್ರೇಕಿಂಗ್ ನ್ಯೂಸ್
23-01-26 03:34 pm Mangalore Correspondent ಕ್ರೈಂ
ಮಂಗಳೂರು, ಜ.23 : ನಗರದ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಸ್ಥೆಯಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 14.89 ಲಕ್ಷ ರೂ. ಸಾಲ ಪಡೆದ ಒಂದೇ ಕುಟುಂಬದ ನಾಲ್ವರು ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್. ದಿಲ್ಶಾದ್ ಮತ್ತು ಸೈನಾಝ್ ನಕಲಿ ಚಿನ್ನ ಅಡವಿಟ್ಟು ವಂಚನೆ ಮಾಡಿದ ಆರೋಪಿಗಳು.
2024ರ ಜೂ.24ರಂದು ಮೊಹಮ್ಮದ್ ನಝೀರ್ 49.200 ಗ್ರಾಂ ತೂಕದ ಆರು ಬಳೆ, ಜು.30ರಂದು 49.200 ಗ್ರಾಂ ತೂಕದ ಆರು ಬಳೆ, ನ.5ರಂದು 41.300 ಗ್ರಾಂ ತೂಕದ ಐದು ಬಳೆ, 2025ರ ಮಾ.7ರಂದು 31.500 ಗ್ರಾಂ ತೂಕದ ನಾಲ್ಕು ಬಳೆಗಳನ್ನು ಅಡವಿಟ್ಟು ಒಟ್ಟು 8.99 ಲಕ್ಷ ರೂ. ಸಾಲ ಪಡೆದಿದ್ದ. 2024ರ ಆ.14ರಂದು ದಿಲ್‌ಶಾದ್ ಎಂಬಾಕೆ ಬಂದು 48.100 ಗ್ರಾಂ ತೂಕದ ಆರು ಬಳೆಗಳನ್ನು ಅಡವಿಟ್ಟು 2.40 ಲಕ್ಷ ರೂ. ಸಾಲ ಪಡೆದಿದ್ದಳು. 2024ರ ಅ.5ರಂದು ಜಮಾಲುದ್ದೀನ್ ಎಂಬಾತ 63.900 ಗ್ರಾಂ ತೂಕದ ಎಂಟು ಬಳೆಗಳನ್ನು ಅಡವಿಟ್ಟು 3.50 ಲಕ್ಷ ರೂ. ಸಾಲ ಪಡೆದಿದ್ದ. ಬ್ಯಾಂಕಿನ ಚಿನ್ನಾಭರಣ ಪರೀಕ್ಷಕರು ದೃಢೀಕರಿಸಿದ ಬಳಿಕ ಚಿನ್ನಾಭರಣದ ಪರೀಕ್ಷಕರು ನೀಡಿದ ಆಧಾರದ ಮೇಲೆಯೇ ಸಾಲ ನೀಡಲಾಗಿತ್ತು.
2025ರ ಜು.7ರಂದು ಸದಸ್ಯರು ಅಡವಿಟ್ಟ ಚಿನ್ನವನ್ನು ವಾರ್ಷಿಕವಾಗಿ ಪರೀಕ್ಷಿಸಲು ಹೆಚ್ಚುವರಿ ಪರೀಕ್ಷಕರನ್ನು ಕರೆಸಿದಾಗ ಮೊಹಮ್ಮದ್ ನಝೀರ್, ಜಮಾಲುದ್ದೀನ್ ಹಾಗೂ ದಿಲ್ ಶಾದ್ ಅಡವಿಟ್ಟ ಬಳೆಗಳೆಲ್ಲವೂ ನಕಲಿ ಎಂದು ತಿಳಿದುಬಂದಿದೆ. ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ ತಾವು ಪಡೆದ ಹಣವನ್ನು ಬ್ಯಾಂಕಿಗೆ ಕಟ್ಟುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಹಣ ಕಟ್ಟದೆ ಮೋಸ ಮಾಡಿದ್ದಾರೆ. ಇದೀಗ ಜ.21ರಂದು ಸೈನಾಝ್ ಎಂಬಾಕೆ ಐದು ಚಿನ್ನದ ಬಳೆಗಳನ್ನು ಮತ್ತೆ ಬ್ಯಾಂಕಿಗೆ ತಂದು ಅಡವಿರಿಸಿ ಹಣ ನೀಡುವಂತೆ ಕೇಳಿದ್ದು ಪರೀಕ್ಷಕರು ತಪಾಸಣೆ ನಡೆಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಆಕೆಯನ್ನು ವಿಚಾರಿಸಿದಾಗ ಅಣ್ಣ ನಝೀರ್ ತನಗೆ ಬಳೆಗಳನ್ನು ಕೊಟ್ಟು ಅಡವಿಟ್ಟು ಹಣ ತರುವಂತೆ ಕಳುಹಿಸಿರುವುದಾಗಿ ತಿಳಿಸಿದ್ದಾಳೆ.
ಪ್ರಕರಣದಲ್ಲಿ ಆರೋಪಿಗಳಾದ ಮೊಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್., ದಿಲ್‌ಶಾದ್ ಹಾಗೂ ನಕಲಿ ಚಿನ್ನ ಅಡಮಾನ ಇರಿಸಲು ಬಂದಿದ್ದ ಸೈನಾಝ್ ವಿರುದ್ದ ಕ್ರಮ ಕೈಗೊಳ್ಳುವಂತೆ ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನೂ ಬಂಧಿಸಿದ್ದು ನಕಲಿ ಬಳೆ ಎಲ್ಲಿಂದ ಪಡೆದಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.
A case has been registered at Kavoor police station after a family of four allegedly pledged fake gold bangles at the Kavoor Vyavasaya Seva Sahakari Bank and fraudulently obtained loans worth ₹14.89 lakh. The scam came to light during a re-inspection of pledged gold, following which three accused were arrested.
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm