ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ ಕೋಲಾರ ಮೂಲದ ಆರೋಪಿ ಸೆರೆ, ಐದು ದ್ವಿಚಕ್ರ ವಾಹನ ಪೊಲೀಸರ ವಶಕ್ಕೆ

31-12-25 07:05 pm       Udupi Correspondent   ಕ್ರೈಂ

ವಿದ್ಯಾರ್ಥಿಯೊಬ್ಬ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಿರ್ವ ಪೊಲೀಸರು ಕೋಲಾರ ಮೂಲದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಓಂ ಕೋಲಾರ ಎಂಬಾತ ಆರೋಪಿಯಾಗಿದ್ದು ವಿಚಾರಣೆ ನಡೆಸಿದಾಗ ಅಂತರ್ ಜಿಲ್ಲಾ ಬೈಕ್ ಕಳ್ಳ ಎಂಬುದು ತಿಳಿದುಬಂದಿದೆ. ಬಂಧಿತನಿಂದ ಬೇರೆ ಬೇರೆ ಕಡೆಗಳಲ್ಲಿ ಕದ್ದಿರುವ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಲಾಗಿದೆ. 

ಉಡುಪಿ, ಡಿ.31 : ವಿದ್ಯಾರ್ಥಿಯೊಬ್ಬ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಿರ್ವ ಪೊಲೀಸರು ಕೋಲಾರ ಮೂಲದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಓಂ ಕೋಲಾರ ಎಂಬಾತ ಆರೋಪಿಯಾಗಿದ್ದು ವಿಚಾರಣೆ ನಡೆಸಿದಾಗ ಅಂತರ್ ಜಿಲ್ಲಾ ಬೈಕ್ ಕಳ್ಳ ಎಂಬುದು ತಿಳಿದುಬಂದಿದೆ. ಬಂಧಿತನಿಂದ ಬೇರೆ ಬೇರೆ ಕಡೆಗಳಲ್ಲಿ ಕದ್ದಿರುವ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಲಾಗಿದೆ. 

ಡಿಸೆಂಬರ್ 5 ರಂದು ವಿದ್ಯಾರ್ಥಿ ಕೌಶಿಕ್ ಎಂಬಾತ ತನ್ನ ಹೊಂಡಾ ಆಕ್ಟಿವಾ ಸ್ಕೂಟರ್‌ ಅನ್ನು ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕ್ ಮಾಡಿದ್ದ. ಮಧ್ಯಾಹ್ನ ವೇಳೆ ಸ್ಕೂಟರ್ ನಿಲ್ಲಿಸಿ ಊಟ ಮುಗಿಸಿ ಬಂದಾಗ ಸ್ಕೂಟರ್ ಕಳವಾಗಿತ್ತು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಉಡುಪಿ, ಮಲ್ಪೆ, ಕಾರ್ಕಳ ಹಾಗೂ ಧರ್ಮಸ್ಥಳ ಸೇರಿದಂತೆ ವಿವಿಧ ಭಾಗಗಳಲ್ಲಿ ಜಾಲ ಬೀಸಿದ್ದ ತಂಡವು ಕೊನೆಗೆ ಓಂ ಕೋಲಾರ ಎಂಬ ಆರೋಪಿಯನ್ನು ಬಂಧಿಸಿದೆ. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಶಿರ್ವ ಮಾತ್ರವಲ್ಲದೆ, ಕಾಪು ಮತ್ತು ಬೆಂಗಳೂರು ನಗರದ ವಿವಿಧೆಡೆ ಬೈಕ್ ಕಳವು ಮಾಡಿರುವುದು ಪತ್ತೆಯಾಗಿದೆ. ಬಂಧಿತನಿಂದ ಶಿರ್ವ ಠಾಣೆಗೆ ಸಂಬಂಧಿಸಿದ ಒಂದು ಬೈಕ್ ಹಾಗೂ ಕಾಪು ಮತ್ತು ಬೆಂಗಳೂರಿನಲ್ಲಿ ಕಳವು ಮಾಡಿದ್ದ ನಾಲ್ಕು ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Shirva Police have arrested an inter-district bike thief from Kolar in connection with the theft of a scooter belonging to a student. The accused, identified as Om Kolar, was taken into custody, and investigation revealed that he was involved in multiple two-wheeler thefts across different districts. Police have recovered five stolen bikes from him.