Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕರೆದು ಕಲ್ಲು ಎತ್ತಿಹಾಕಿ ಕೊಲೆ ; ಶವದ ಮುಂದೆ ಸೆಲ್ಫಿ ವಿಡಿಯೋ ಮಾಡಿದ್ದ ಸೈಕೋ ಕಿಲ್ಲರ್, ಬೆಂಗಳೂರಿನಲ್ಲಿ ತಲೆಮರೆಸಿದ್ದ ಆರೋಪಿ ಸೆರೆ 

11-12-25 09:53 pm       HK News Desk   ಕ್ರೈಂ

ಕೊಲೆ ಮಾಡಿ ಶವದೆದುರು ಸೆಲ್ಪಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಆರೋಪಿಯನ್ನು ಹಾಸನ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.‌ ಪ್ರಕರಣ ಬೆಳಕಿಗೆ ಬಂದು 24 ಗಂಟೆಯಲ್ಲಿ ಆರೋಪಿ ಉಲ್ಲಾಸ್ವ ಕ್ಯಾತೆ ಸೆರೆಯಾಗಿದ್ದಾನೆ.‌

ಹಾಸನ, ಡಿ.11 : ಕೊಲೆ ಮಾಡಿ ಶವದೆದುರು ಸೆಲ್ಪಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಆರೋಪಿಯನ್ನು ಹಾಸನ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.‌ ಪ್ರಕರಣ ಬೆಳಕಿಗೆ ಬಂದು 24 ಗಂಟೆಯಲ್ಲಿ ಆರೋಪಿ ಉಲ್ಲಾಸ್ವ ಕ್ಯಾತೆ ಸೆರೆಯಾಗಿದ್ದಾನೆ.‌

ಆರೋಪಿಗಳ ಸೆರೆಗೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಐದು ತಂಡಗಳನ್ನು ರಚಿಸಿದ್ದರು.‌ ಕೀರ್ತಿ ಎಂಬಾತನ ಕೊಲೆ ನಂತರ ಉಲ್ಲಾಸ್ ಶವದೆದುರು ಸೆಲ್ಫಿ ವಿಡಿಯೋ ಮಾಡಿ ಹಂಚಿಕೊಂಡಿದ್ದ. ಮರ್ಡರ್ ಆಯ್ತು.. ಹೊಡೆದಿದ್ದೀವಿ,  ಹೊಡೆದಿದ್ದೀವಿ.. ಮರ್ಡರ್ ಎಂದು ಕೂಗುತ್ತಾ ಸೆಲ್ಪಿ ವಿಡಿಯೋ ಮಾಡಿದ್ದ.  ಡಿ.9 ರಂದು ಬಿಟ್ಟಗೌಡನಹಳ್ಳಿಯಲ್ಲಿ ಹಾಸನ ತಾಲ್ಲೂಕಿನ ಹೂವಿನಹಳ್ಳಿ ಯುವಕ ಆಟೋ ಚಾಲಕ ಕೀರ್ತಿ ಎಂಬ ಯುವಕನ ಕೊಲೆಯಾಗಿತ್ತು.‌

ಉಲ್ಲಾಸ್ ಮತ್ತು ಸ್ನೇಹಿತರು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.‌ ನಂತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು ಸ್ಥಳ ಮಹಜರು ವೇಳೆ ಕೃತ್ಯಕ್ಕೆ ಬಳಸಿದ್ದ ಕಲ್ಲು, ಕೊಲೆ ಮಾಡಿದ ಜಾಗ ತೋರಿಸಿದ್ದಾನೆ. 

ಕುಡಿದು ಗಲಾಟೆ ಮಾಡಿ ಉಲ್ಲಾಸ್ ಮೇಲೆ ಕೀರ್ತಿ ಹಲ್ಲೆ ಮಾಡಿದ್ದ.‌ ಇದರ ಸೇಡು ತೀರಿಸಿಕೊಳ್ಳಲು ಎಣ್ಣೆ ಪಾರ್ಟಿ ನೆಪದಲ್ಲಿ ಉಲ್ಲಾಸ್ ಮತ್ತು ಸ್ನೇಹಿತರು ಕೀರ್ತಿಯನ್ನು ಕರೆದೊಯ್ದಿದ್ದು ಕೊಲೆ ಮಾಡಿದ್ದರು. ಡಿ.7ರಂದು ಹೊಡೆದಿದ್ದು ಮರುದಿನ ಸ್ನೇಹಿತರ ಜೊತೆ ಬಂದು ಕೀರ್ತಿಯನ್ನು ಎಣ್ಣೆ ಪಾರ್ಟಿಗೆ ಕರೆದೊಯ್ದಿದ್ದ. ಕುಡಿದ ಮತ್ತಿನಲ್ಲಿ ಕೀರ್ತಿಗೆ ಹಲ್ಲೆಗೈದು ನಂತರ ಎದೆ ಭಾಗಕ್ಕೆ ಕಲ್ಲು ಎತ್ತಿ ಹಾಕಿ ಕೀರ್ತಿಯನ್ನು ಕೊಂದಿದ್ದರು. ಪ್ರಮುಖ ಆರೋಪಿ ಸೈಕೋ ಕಿಲ್ಲರ್ ಉಲ್ಲಾಸ್ ಬಂಧನವಾಗುತ್ತಲೇ ಕೊಲೆಯ ಕಾರಣವೂ ಬಯಲಾಗಿದೆ.

In a shocking case where the killer filmed a selfie video beside the victim’s body, Hassan police have arrested the prime accused, Ullas, from Bengaluru within 24 hours of the incident coming to light.