Vijayapura Bank Robbery: SBI ಬ್ಯಾಂಕ್ ದರೋಡೆ ; ಚಿನ್ನಾಭರಣ ಸೇರಿ ಒಟ್ಟು 21 ಕೋಟಿ  ರೂ.ಲೂಟಿ, ಪೊಲೀಸರಿಗೆ ಫುಲ್ ಡ್ಯೂಟಿ, ಭೀಮಾತೀರದಲ್ಲಿ ಕಳ್ಳರ ಹಾವಳಿ ! 

17-09-25 09:44 pm       HK News Desk   ಕ್ರೈಂ

1 ಕೋಟಿ ರೂ. ನಗದು, 20 ಕೆಜಿ ಚಿನ್ನಾಭರಣ ಸೇರಿ ಒಟ್ಟು 21 ಕೋಟಿ ದರೋಡೆಯಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ವಿಜಯಪುರ, ಸೆ 17 : 1 ಕೋಟಿ ರೂ. ನಗದು, 20 ಕೆಜಿ ಚಿನ್ನಾಭರಣ ಸೇರಿ ಒಟ್ಟು 21 ಕೋಟಿ ದರೋಡೆಯಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ದರೋಡೆಗೆ 5 ಜನರು ಬಂದಿದ್ದರು. 6 ಜನ ಬ್ಯಾಂಕ್ ಸಿಬ್ಬಂದಿ ಹಾಗೂ 4 ಜನ ಗ್ರಾಹಕರನ್ನು ದರೋಡೆಕೋರರು ಲಾಕ್ ಮಾಡಿದ್ದಾರೆ. ಕೋಣೆಯಲ್ಲಿ ಕೂಡಿ ಹಾಕಿ, ಪ್ಲಾಸ್ಟಿಕ್ ಬ್ಯಾಂಡ್‌ಗಳಿಂದ ಕೈ, ಕಾಲು ಕಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಪಂಡರಾಪುರ ಕಡೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ 1 ಕೋಟಿ ರೂ. ನಗದು, ಅಂದಾಜು 20 ಕೆಜಿ ಚಿನ್ನಾಭರಣ ಸೇರಿದಂತೆ 21 ಕೋಟಿ ರೂ. ಮೌಲ್ಯದ ನಗದು ಚಿನ್ನಾಭರಣ ದರೋಡೆಯಾಗಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ (ಸೆ.17) ಸಂಜೆ 6:30 ರಿಂದ 7:30ರ ನಡುವೆ ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ದರೋಡೆ ನಡೆದಿದೆ. ದರೋಡೆಕೋರರ ಪೈಕಿ ಒಬ್ಬ ವ್ಯಕ್ತಿ ಮೊದಲೇ ಒಳಗೆ ಬಂದು ಕುಳಿತಿದ್ದ. ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ಲಾಕರ್ ಓಪನ್ ಇತ್ತು. ಆಗ ಬಂದೂಕಿನಿಂದ ಬೆದರಿಸಿ, ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ಒಟ್ಟು 398 ಪ್ಯಾಕ್ ಚಿನ್ನ ಅಂದರೆ 21 ಕೋಟಿ ರೂ. ಮೌಲ್ಯದ ಚಿನ್ನ, ನಗದು ದರೋಡೆಯಾಗಿದೆ ಎಂದಿದ್ದಾರೆ.

ಸದ್ಯ 8 ತನಿಖಾ ತಂಡಗಳ ನೇಮಕ ಮಾಡಿ, ದರೋಡೆಕೋರರ ಸೆರೆಗೆ ಜಾಲ ಬೀಸಲಾಗಿದೆ. ಈಗಾಗಲೇ ಹುಲಜಂತಿಯಲ್ಲಿ ದರೋಡೆಗೆ ಬಳಸಿದ ವಾಹನ ಪತ್ತೆಯಾಗಿದ್ದು, ಸ್ವಲ್ಪ ದುಡ್ಡು, ಬಂಗಾರದ ಪ್ಯಾಕೇಟ್ ಸಿಕ್ಕಿದೆ. ಆದರೆ ವಾಹನ ನಕಲಿ ನಾಮಫಲಕ ಹೊಂದಿದೆ. ಆದಷ್ಟು ಬೇಗ ದರೋಡೆಕೋರರನ್ನ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಬೀದರ್‌, ಮಂಗಳೂರು ಬ್ಯಾಂಕ್‌ ದರೋಡೆ

ಕಳೆದ ಕೆಲವು ತಿಂಗಳುಗಳ ಹಿಂದೆ ಬೀದರ್‌ನ ಶಿವಾಜಿ ವೃತ್ತದ ಬಳಿ ಇರುವ SBI ಬ್ಯಾಂಕ್ ಎದುರು, ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿಯ ಮೇಲೆ ಇಬ್ಬರು ದರೋಡೆಕೋರರು ಗುಂಡು ಹಾರಿಸಿ ಸುಮಾರು 93 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿದ ಘಟನೆ ನಡೆದಿತ್ತು.

2025 ಜನವರಿ 17 ರಂದು ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆಕೋರರು ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 5 ಲಕ್ಷ ರೂಪಾಯಿ ನಗದು ದೋಚಿಕೊಂಡು ಹೋಗಿದ್ದಾರೆ.

In a major security breach, a gang of armed robbers looted an estimated ₹21 crore, including ₹1 crore in cash and 20 kg of gold ornaments, from a branch of the State Bank of India (SBI) in Vijayapura. The shocking incident occurred on Tuesday evening during closing hours between 6:30 PM and 7:30 PM, according to SP Laxman Nimbargi.