ಬ್ರೇಕಿಂಗ್ ನ್ಯೂಸ್
17-09-25 03:19 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.17 : ಧರ್ಮಸ್ಥಳ ಹೆಣ ಹೂತ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ವಿಠಲ ಗೌಡ ತೋರಿಸಿದ ಜಾಗದಲ್ಲಿ ಮೂಳೆಗಳ ಸಂಗ್ರಹ ಆರಂಭಿಸಿದ್ದು, ಆ ಜಾಗದಲ್ಲಿ ಬಹಳಷ್ಟು ಮನುಷ್ಯನ ಮೂಳೆಗಳು ಪತ್ತೆಯಾಗಿವೆ ಎನ್ನುವ ಮಾಹಿತಿ ಲಭಿಸಿದೆ.
ಎರಡು ದಿನಗಳ ಹಿಂದಷ್ಟೇ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿಗೆ ಬಂದು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಆನಂತರ, ತುರ್ತಾಗಿ ತೆರಳಿದ್ದ ಮೊಹಂತಿಯವರು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಇದರ ಬೆನ್ನಲ್ಲೇ ಬುಧವಾರ (ಇಂದು) ಬಂಗ್ಲೆಗುಡ್ಡೆ ಕಾಡಿನಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕಾರಿಗಳು ಎರಡು ತಂಡಗಳಲ್ಲಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆಂಬ ಮಾಹಿತಿ ಇದೆ.
ವಿಶೇಷ ಅಂದ್ರೆ, ಸ್ಥಳಕ್ಕೆ ಪುತ್ತೂರು ವಿಭಾಗಾಧಿಕಾರಿಯಾಗಲೀ, ತಹಸೀಲ್ದಾರ್ ಆಗಲೀ ಬಂದಿಲ್ಲ. ಈ ಹಿಂದೆ ನೆಲ ಅಗೆದು ಶವ ಶೋಧ ನಡೆಸಿದ್ದಾಗ ಸ್ಥಳದಲ್ಲಿ ತಹಸೀಲ್ದಾರ್ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿ ಇದ್ದರು. ಈ ಬಾರಿ 50 ಮಂದಿಯಷ್ಟು ಎಸ್ಐಟಿ ಮತ್ತು ಎಫ್ಎಸ್ಎಲ್ ತಂಡದವರೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲದೆ, ವಿಠಲ ಗೌಡರನ್ನೂ ಸ್ಥಳಕ್ಕೆ ಕರೆದೊಯ್ದಿಲ್ಲ. ದೂರುದಾರ ಚಿನ್ನಯ್ಯ ಬಂಗ್ಲೆಗುಡ್ಡೆ ಕಾಡಿನಿಂದಲೇ ತಲೆಬುರುಡೆಯನ್ನು ಕೊಂಡೊಯ್ದಿದ್ದ ಎನ್ನುವ ಮಾಹಿತಿ ಆಧರಿಸಿ ಸೌಜನ್ಯಾ ಮಾವ ವಿಠಲ ಗೌಡರನ್ನು ವಾರದ ಹಿಂದೆ ವಿಚಾರಣೆ ನಡೆಸಲಾಗಿತ್ತು. ಆನಂತರ, ಬುರುಡೆ ಬೆನ್ನು ಬಿದ್ದ ಅಧಿಕಾರಿಗಳು ವಿಠಲ ಗೌಡರನ್ನು ಸ್ಥಳಕ್ಕೆ ಕರೆದೊಯ್ದು ಮಹಜರನ್ನೂ ನಡೆಸಿದ್ದರು. ಇದೇ ವೇಳೆ, ಆ ಜಾಗದ ಆಸುಪಾಸಿನಲ್ಲಿ ಬಹಳಷ್ಟು ಮನುಷ್ಯನ ಮೂಳೆ ಮತ್ತು ಬುರುಡೆಗಳು ಕಾಣಸಿಕ್ಕಿದೆ ಎಂದು ವಿಠಲ ಗೌಡ ನೀಡಿದ್ದ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ಹೀಗಾಗಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯಾಚರಣೆ ಆಗಬೇಕು ಎನ್ನುವ ಆಗ್ರಹವೂ ವ್ಯಕ್ತವಾಗಿತ್ತು. ಐದಾರು ಶವಗಳ ಮೂಳೆಗಳು ಒಂದೇ ಕಡೆ, ಅದರಲ್ಲೂ ನೆಲದ ಮೇಲ್ಗಡೆಯೇ ಇರುವುದು ಹೇಗೆ ಎನ್ನುವ ಕುತೂಹಲವೂ ವ್ಯಕ್ತವಾಗಿತ್ತು. ಅಲ್ಲದೆ, ಆ ಜಾಗದಲ್ಲಿ ವಾಮಾಚಾರ ನಡೆಸಿರುವ ಕುರುಹು ಇತ್ತೆಂದು ವಿಠಲ ಗೌಡ ಹೇಳಿಕೆಯಲ್ಲಿ ತಿಳಿಸಿದ್ದರು. ಆನಂತರ ಬೆಳ್ತಂಗಡಿಗೆ ಬಂದಿದ್ದ ಎಸ್ಐಟಿ ಮುಖ್ಯಸ್ಥ ಮೊಹಾಂತಿ, ಬಂಗ್ಲೆಗುಡ್ಡೆ ಕಾಡಿನಲ್ಲಿ ಪೂರ್ತಿಯಾಗಿ ಶೋಧ ಕಾರ್ಯ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನೆಲ ಅಗೆಯುವುದಕ್ಕಿಂತಲೂ ಮೇಲ್ಭಾಗದಲ್ಲಿ ಇರುವ ಶವಗಳ ಮೂಳೆಗಳನ್ನು ಸಂಗ್ರಹಿಸಿ, ಅವೆಲ್ಲವೂ ಮನುಷ್ಯನದ್ದೇ ಎನ್ನುವ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ. ಕಾಡಿನ ಮಧ್ಯೆ ಇಷ್ಟೊಂದು ಮೂಳೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನೂ ಎಸ್ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಇದೀಗ ಶೋಧ ಕಾರ್ಯ ಸಂದರ್ಭದಲ್ಲಿ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳದಲ್ಲಿ ಮನುಷ್ಯರನ್ನು ಕೊಲ್ಲಲಾಗಿದೆಯೇ, ವಾಮಾಚಾರಕ್ಕೆ ಬಳಸಲಾಗಿದೆಯೇ ಅಥವಾ ಹೂತ ಹೆಣಗಳ ಮೂಳೆಗಳೇ ಎಂಬ ಬಗ್ಗೆ ತನಿಖೆಯ ನಂತರವೇ ತಿಳಿಯಬೇಕು.
In a fresh twist to the Dharmasthala buried bodies case, the Special Investigation Team (SIT) has launched an intensive search operation in the Banglegudde forest, where a large number of human bones have reportedly been found. The operation was carried out at a location identified by accused Vithal Gowda, where skeletal remains were spotted. Sources indicate that several human bones and skulls have been recovered from the site, once again sparking curiosity and suspicion about the mysterious forest trail.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 03:19 pm
Mangalore Correspondent
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
17-09-25 06:04 pm
Mangalore Correspondent
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm