Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವಿಜಯಪುರದಲ್ಲಿ ಮತ್ತೆ ಭಾರೀ ಪ್ರಮಾಣದ ಬ್ಯಾಂಕ್ ರಾಬರಿ ; ಬ್ಯಾಂಕ್ ಸಿಬಂದಿ ಕಟ್ಟಿಹಾಕಿ 8 ಕೋಟಿ ನಗದು, 50 ಕೇಜಿ ಚಿನ್ನಾಭರಣ ಲೂಟಿ, ಜನನಿಬಿಡ ಪ್ರದೇಶದಲ್ಲೇ ಮುಸುಕುಧಾರಿಗಳ ಕೃತ್ಯ ! 

16-09-25 10:40 pm       HK News Desk   ಕ್ರೈಂ

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್ ಬಿಐ ಬ್ಯಾಂಕಿಗೆ ನುಗ್ಗಿದ ಮುಸುಕುಧಾರಿಗಳು ಬ್ಯಾಂಕ್ ಸಿಬಂದಿಯನ್ನು ಕಟ್ಟಿ ಹಾಕಿ ಭಾರೀ ಪ್ರಮಾಣದ ದರೋಡೆ ನಡೆಸಿದ್ದಾರೆ. ಸಂಜೆ 7 ಗಂಟೆಗೆ ಏಳೆಂಟು ಮುಸುಕುಧಾರಿ ದರೋಡೆಕೋರರು ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಮತ್ತೊಮ್ಮೆ ಭಾರೀ ದೊಡ್ಡ ದರೋಡೆ ಮಾಡಿದ್ದಾರೆ.

ವಿಜಯಪುರ, ಸೆ.16 : ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್ ಬಿಐ ಬ್ಯಾಂಕಿಗೆ ನುಗ್ಗಿದ ಮುಸುಕುಧಾರಿಗಳು ಬ್ಯಾಂಕ್ ಸಿಬಂದಿಯನ್ನು ಕಟ್ಟಿ ಹಾಕಿ ಭಾರೀ ಪ್ರಮಾಣದ ದರೋಡೆ ನಡೆಸಿದ್ದಾರೆ. ಸಂಜೆ 7 ಗಂಟೆಗೆ ಏಳೆಂಟು ಮುಸುಕುಧಾರಿ ದರೋಡೆಕೋರರು ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಮತ್ತೊಮ್ಮೆ ಭಾರೀ ದೊಡ್ಡ ದರೋಡೆ ಮಾಡಿದ್ದಾರೆ.

ಮುಸುಕುಧಾರಿಗಳು ಅಂದಾಜು 8 ಕೋಟಿ ರೂಪಾಯಿ ನಗದು ಮತ್ತು 50 ಕೆಜಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ್ ನಿಂಬರಗಿ ಆಗಮಿಸಿದ್ದು ಕಳವಾದ ಒಟ್ಟು ಮೊತ್ತ ಎಷ್ಟು, ಚಿನ್ನಾಭರಣ ಎಷ್ಟು ಎಂದು ಬ್ಯಾಂಕ್ ಸಿಬಂದಿ ಲೆಕ್ಕ ಹಾಕಿದ ಬಳಿಕವೇ ತಿಳಿಯಬೇಕು ಎಂದಿದ್ದಾರೆ. 

ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯ ಜನನಿಬಿಡ ಪ್ರದೇಶದಲ್ಲೇ ಘಟನೆ ನಡೆದಿದೆ. ಎಸ್‌ಬಿಐ ಶಾಖೆಯ ಸಿಬ್ಬಂದಿ ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು  ರೆಡಿಯಾಗುತ್ತಿದ್ದಾಗಲೇ ಮಿಲಿಟರಿ ಬಣ್ಣದ ಬಟ್ಟೆ ಧರಿಸಿದ್ದ ದರೋಡೆಕೋರರು ಬ್ಯಾಂಕಿನ ನುಗ್ಗಿದ್ದಾರೆ. ನಾಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ ಅವರನ್ನು ಅಲ್ಲಿಯೇ ಕಟ್ಟಿ ಹಾಕಿದ್ದು, ಅವರಿಂದ ಕಪಾಟು ಕೀ ಪಡೆದು ದರೋಡೆ ಮಾಡಿದ್ದಾರೆ.

ಘಟನೆ ಬಳಿಕ ಕದ್ದ ಚಿನ್ನಾಭರಣವನ್ನು ವಾಹನಗಳಲ್ಲಿ ಹೇರಿಕೊಂಡು ಮಹಾರಾಷ್ಟ್ರದತ್ತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ದರೋಡೆ ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಜನ ಬ್ಯಾಂಕ್‌ ಎದುರು ಜಮಾಯಿಸಿದ್ದಾರೆ.

In a shocking incident, a group of armed masked robbers stormed into the State Bank of India (SBI) branch in Chadchan, a town in Vijayapura district bordering Maharashtra, and looted ₹8 crore in cash and 50 kilograms of gold ornaments. The daring robbery occurred around 7 PM on Tuesday evening, when 7–8 men, dressed in military-style clothing, entered the bank armed with country-made pistols and deadly weapons. The robbers tied up the bank staff at gunpoint, obtained the vault keys, and looted the cash and valuables before fleeing the scene.