ಬ್ರೇಕಿಂಗ್ ನ್ಯೂಸ್
14-09-25 07:31 pm HK News Desk ದೇಶ - ವಿದೇಶ
ಗುವಾಹಟಿ, ಸೆ.14 : ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಭೂಕಂಪ ಸಂಭವಿಸಿದ್ದು, ಪಕ್ಕದ ಉತ್ತರ ಬಂಗಾಳ ಮತ್ತು ಭೂತಾನ್ ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಭಾನುವಾರ ಸಂಜೆ 4.41ರ ಸುಮಾರಿಗೆ ಗುವಾಹತಿಯಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8ರ ತೀವ್ರತೆ ದಾಖಲಾಗಿದೆ. ಇದುವರೆಗೆ ಯಾವುದೇ ಜೀವಹಾನಿ ಹಾಗೂ ಆಸ್ತಿ ನಷ್ಟದ ವರದಿಯಾಗಿಲ್ಲ.
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಭೂಕಂಪನದ ಅನುಭವ ಆಗಿದೆ. ಗುವಾಹಟಿ ಬಳಿಯ ಉದೈಗುರಿ ಎಂಬಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಮತ್ತು 5 ಕಿಮೀ ಆಳದಲ್ಲಿತ್ತು ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ. ಯಾವುದೇ ದೊಡ್ಡ ಅನಾಹುತ ಆಗಿಲ್ಲ. ಪರಿಸ್ಥಿತಿಯ ಬಗ್ಗೆ ನಿಗಾ ಇರಿಸಿದ್ದೇವೆ ಎಂದು ಅಸ್ಸಾಂ ಸಿಎಂ ಹಿಮಾಂತ ಶರ್ಮಾ ತಿಳಿಸಿದ್ದಾರೆ.
ಅಸ್ಸಾಂ ಭೂಕಂಪ ತೀವ್ರತೆಯ ಪ್ರದೇಶವಾಗಿದ್ದು, ಹಿಮಾಲಯದ ತಪ್ಪಲು ಪ್ರದೇಶವಾಗಿರುವ ಕಾರಣ ಭೂಕಂಪದಂತ ಪ್ರಕೃತಿ ವಿಕೋಪಗಳು ಇಲ್ಲಿ ವರದಿಯಾಗುತ್ತಿರುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದೇ ಸೆ.2ರಂದು ಅಸ್ಸಾಂ ರಾಜ್ಯದ ಸೋನಿತ್ ಪುರ್ ಜಿಲ್ಲೆಯಲ್ಲಿ 3.5 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪದೇ ಪದೇ ಲಘು ಕಂಪನ ಆಗುತ್ತಿರುವುದು ದೊಡ್ಡ ಘಟನೆಯ ಮುನ್ಸೂಚನೆಯೇ ಎನ್ನುವ ಆತಂಕ ಇದೆ. ಇತ್ತೀಚೆಗಷ್ಟೇ ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ ಉಂಟಾಗಿ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
A 5.8 magnitude earthquake jolted Assam's Guwahati at 4:41 pm, with tremors felt as far as North Bengal and neighbouring Bhutan. The quake had a depth of 5 kilometers and its epicenter was in the town of Udalguri, according to India's National Center for Seismology. Terrified residents rushed outside their homes in Guwahati. No reports of injury or damage to property have been received so far.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 12:58 pm
HK News Staffer
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 01:23 pm
HK News Staffer
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am