ಬ್ರೇಕಿಂಗ್ ನ್ಯೂಸ್
18-07-25 11:36 am Mangalore Correspondent ಕ್ರೈಂ
ಮಂಗಳೂರು, ಜುಲೈ 18 : ಹೆಬ್ಬಾವು ಮರಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಜಾಲ ಹೆಣೆಯುತ್ತಿದ್ದ ಒಬ್ಬ ಅಪ್ರಾಪ್ತ ಸೇರಿ ನಾಲ್ವರು ಯುವಕರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಡಗ ಉಳಿಪಾಡಿ ನಿವಾಸಿ ವಿಶಾಲ್ ಎಚ್. ಶೆಟ್ಟಿ(18), ಅದೇ ಪರಿಸರದ ನಿವಾಸಿ, ನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ 16 ವರ್ಷದ ಮುಸ್ಲಿಂ ಹುಡುಗ ಮತ್ತು ಸ್ಟೇಟ್ ಬ್ಯಾಂಕ್ ಬಳಿಯ ಪೆಟ್ ಝೋನ್ ಎಂಬ ಅಂಗಡಿಯ ಮಾಲಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬಂದಿ ಮಹಮ್ಮದ್ ಮುಸ್ತಫ(22) ಬಂಧಿತ ಆರೋಪಿಗಳು.
ಹೆಬ್ಬಾವು ಮಾರಾಟದ ಬಗ್ಗೆ ಮಾಹಿತಿ ಅರಿತ ಮಂಗಳೂರು ಅರಣ್ಯ ವಲಯಾಧಿಕಾರಿ ರಾಜೇಶ್ ಬಳಿಗಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ. ಮೊದಲಿಗೆ ಇಬ್ಬರನ್ನು ಹೆಬ್ಬಾವು ಖರೀದಿಸುವ ಸೋಗಿನಲ್ಲಿ ಆರೋಪಿಗಳ ಬಳಿ ಕಳುಹಿಸಿತ್ತು. ನಗರದ ಕದ್ರಿಯ ಅಶ್ವತ್ಥ ಕಟ್ಟೆ ಬಳಿಯಿದ್ದ ಆರೋಪಿ ವಿಶಾಲ್ ಶೆಟ್ಟಿಯನ್ನು ಸಂಪರ್ಕಿಸಿದ ಅರಣ್ಯ ಇಲಾಖೆ ಸಿಬಂದಿ, ಹೆಬ್ಬಾವು ಮರಿ ಕೇಳಿದ್ದಾರೆ. ಹಾವು ತೋರಿಸಿದ ಯುವಕ 45 ಸಾವಿರ ಹಣ ಕೇಳಿದ್ದಾನೆ. ವ್ಯವಹಾರ ಓಕೆ ಆಗುತ್ತಿದ್ದಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಇದರಿಂದ ಭಯಗೊಂಡ ವಿಶಾಲ್, ಹಾವು ತನ್ನದಲ್ಲ, ನನ್ನ ಗೆಳೆಯನದ್ದೆಂದು ಅಪ್ರಾಪ್ತನ ಹೆಸರು ಹೇಳಿ ಆತನೇ ನನಗೆ ಮಾರಲು ನೀಡಿದ್ದು ಎಂದು ಹೇಳಿದ್ದಾನೆ. ತಕ್ಷಣ ಉಪಾಯದಿಂದ ಮಾಲ್ ಒಂದರ ಬಳಿಗೆ ಆತನನ್ನು ಬರುವಂತೆ ಹೇಳಿ, ಅಲ್ಲಿಂದಲೇ ಹುಡುಗನನ್ನು ಬಂಧಿಸಿದ್ದಾರೆ. ಹಾವು ಮಾರಾಟದ ಬಗ್ಗೆ ಸ್ಟೇಟ್ ಬ್ಯಾಂಕ್ ಪರಿಸರದ ಪೆಟ್ ಝೋನ್ ಅಂಗಡಿಯ ಮೇಲೂ ಕಣ್ಣಿರಿಸಲಾಗಿತ್ತು. ಅಲ್ಲಿಗೆ ತೆರಳಿದ್ದ ಅರಣ್ಯ ಸಿಬಂದಿ ಹಾವು ಖರೀದಿ ಬಗ್ಗೆ ವಿಚಾರಿಸಿದ್ದಾರೆ. ಇದೇ ವೇಳೆ, ಅಲ್ಲಿನ ಸಿಬಂದಿ ಆರೋಪಿ ವಿಶಾಲ್ ಗೆ ಕರೆ ಮಾಡಿದ್ದು, ಅಷ್ಟರಲ್ಲಿ ಅಧಿಕಾರಿಗಳು ದಾಳಿ ನಡೆಸಿ ಸಿಬಂದಿ ಮತ್ತು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಈ ವೇಳೆ ಪೆಟ್ ಝೋನ್ ಅಂಗಡಿಯಲ್ಲಿ ನಕ್ಷತ್ರ ಆಮೆಗಳೂ ಸಿಕ್ಕಿದ್ದು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಸಾಮಾನ್ಯವಾಗಿ ಕಾಡಿನಲ್ಲಿ ಸಿಗುವ ಹೆಬ್ಬಾವನ್ನು (ಇಂಡಿಯನ್ ರಾಕ್ ಪೈಥಾನ್) ವಿದೇಶದಿಂದ ತರಿಸಿರುವ ಬರ್ಮಿಸ್ ಬಾಲ್ ಪೈಥಾನ್ ಎಂದು ಮಾರುತ್ತಿದ್ದರು. ಇದನ್ನು ಕೆಲವರು ಮನೆಯಲ್ಲಿ ಸಾಕಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಖರೀದಿಸುತ್ತಿದ್ದರು. ಆರೋಪಿಗಳಿಗೆ ತಮಿಳುನಾಡು ವರೆಗೂ ಸಂಪರ್ಕ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅರಣ್ಯ ಸಿಬಂದಿ ಮೋಹನ್, ಫೈಜೂರ್, ಮೆಹಬೂಬಸಾಬ್, ವಿವೇಕಾನಂದ, ಶ್ರವಣ್ ಕುಮಾರ್, ರಸೂಲಸಾಬ, ಗಂಗಾಧರ, ರೋಹಿತ್, ಮಹಿಳಾ ಸಿಬಂದಿ ವೀಣಾ, ಸೂರಜ್ , ಸಿದ್ದಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಹೆಬ್ಬಾವು ಯಾಕೆ ಸಾಕುತ್ತಾರೆ ?
ಹೆಬ್ಬಾವನ್ನು ಕೆಲವರು ಒಳ್ಳೆದಾಗುತ್ತದೆ ಎಂಬ ನಂಬಿಕೆಯಿಂದ, ಕೆಲವರು ಪ್ರಾಣಿಗಳ ಬಗೆಗಿನ ಹುಚ್ಚಿನಿಂದ ನಕ್ಷತ್ರ ಆಮೆ, ಬೆಕ್ಕು, ಮೊಲಗಳ ರೀತಿ ಮನೆಯಲ್ಲಿ ಸಾಕುತ್ತಾರೆ. ಭಾರತದ ಹೆಬ್ಬಾವು 15ರಿಂದ 18 ಅಡಿ ಉದ್ದಕ್ಕೆ ಬೆಳೆಯುವುದರಿಂದ ಇದರ ಚರ್ಮಕ್ಕೆ ವಿದೇಶದಲ್ಲಿ ಭಾರೀ ಬೇಡಿಕೆಯಿದೆ. ಕಾಸ್ಮೆಟಿಕ್ ಉದ್ದೇಶಕ್ಕಾಗಿ, ಚರ್ಮದ ಉಪಕರಣಗಳಿಗೆ ಬಳಕೆಯಾಗುತ್ತದೆ. ಬಾಲ್ ಪೈಥಾನ್ ಅನ್ನುವುದು ಮುಟ್ಟಿದರೆ ಉಂಡೆಯಂತೆ ಮುದುಡಿಕೊಳ್ಳುವುದರಿಂದ ಅದನ್ನು ಮೋಜಿಗಾಗಿ ಸಾಕಲು ಬಳಸುತ್ತಾರೆ. ಪಾಲ್ ಪೈಥಾನ್ ಎಂದು ಹೇಳಿ ಜನರನ್ನು ಯಾಮಾರಿಸಿ ಸಾಮಾನ್ಯ ಹೆಬ್ಬಾವುಗಳನ್ನು ಮಾರಾಟ ಮಾಡುವ ಜಾಲವೂ ಇದೆ. ನಕ್ಷತ್ರ ಆಮೆಯ ಬಗ್ಗೆ ಒಳ್ಳೆದಾಗುತ್ತೆ ಎಂಬ ನಂಬಿಕೆ ಇದ್ದರೂ, ಹೆಬ್ಬಾವಿನ ಬಗ್ಗೆ ಆ ರೀತಿಯ ನಂಬಿಕೆ ಇಲ್ಲ ಎನ್ನಲಾಗುತ್ತದೆ. ಆದರೆ ವನ್ಯಜೀವಿಗಳನ್ನ ಸಾಕುವುದು, ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ.
In a startling case of illegal wildlife trade, Kadri Police in Mangaluru have arrested four individuals—including a college student and a pet shop owner—for attempting to sell a python hatchling for ₹45,000. One of the accused is a minor. The arrested include Vishal H. Shetty (18), a resident of Badaga Ulipady in Mangaluru, a 16-year-old Muslim boy studying PUC at a city college, Ibrahim Shakeel Ismail (35), the owner of the “Pet Zone” store near State Bank, and Mohammed Mustafa (22), a staffer at the store.
18-07-25 04:48 pm
HK News Desk
Mangalore South ACP Vijayakranti: ಮಂಗಳೂರು ದಕ್...
18-07-25 03:38 pm
Minister Dinesh Gundu Rao, Dharmasthala: ಧರ್ಮ...
17-07-25 07:45 pm
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 03:19 pm
Mangalore Correspondent
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm