ಬ್ರೇಕಿಂಗ್ ನ್ಯೂಸ್
13-06-25 07:30 pm Mangalore Correspondent ಕ್ರೈಂ
ಮಂಗಳೂರು, ಜೂನ್.13: ನಗರದ ಯೆಯ್ಯಾಡಿಯ ಬಾರ್ ಒಂದರಲ್ಲಿ ಎರಡು ತಂಡಗಳ ಮಧ್ಯೆ ಕಿರಿಕ್ ಆಗಿ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ (32) ಎಂಬ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಜೂನ್ 6ರಂದು ಮಧ್ಯಾಹ್ನ ವೇಳೆಗೆ ಚೂರಿ ಇರಿತ ಘಟನೆ ನಡೆದಿತ್ತು.
ಆರೋಪಿಗಳು ಮತ್ತು ಸಂತ್ರಸ್ತ ಯುವಕ ಕೌಶಿಕ್ ಎಲ್ಲರೂ ಪರಿಚಯದವರೇ ಆಗಿದ್ದು, ಒಂದು ತಿಂಗಳ ಹಿಂದೆ ಇವರ ನಡುವೆ ಮಾತಿನ ಚಕಮಕಿ ಆಗಿತ್ತು. ಇದರ ಸಿಟ್ಟಿನಲ್ಲಿ ಮೊನ್ನೆ ಯೆಯ್ಯಾಡಿಯ ಬಾರ್ ನಲ್ಲಿದ್ದಾಗ ಪರಸ್ಪರ ಬೈದಾಡಿಕೊಂಡಿದ್ದರು. ಇದೇ ವೇಳೆ ಬಿಜೈ ನಿವಾಸಿಗಳಾದ ಬ್ರಿಜೇಶ್ ಮತ್ತು ಗಣೇಶ್ ಎಂಬಿಬ್ಬರು ಚೂರಿ ತಂದು ಕೌಶಿಕ್ ಹೊಟ್ಟೆಗೆ ಇರಿದಿದ್ದರು. ಕೂಡಲೇ ಆತನ ಜೊತೆಗಿದ್ದವರು ಕೌಶಿಕ್ ನನ್ನು ಎಜೆ ಆಸ್ಪತ್ರೆಗೆ ದಾಖಲಿಸಿದ್ದರು.
ಬ್ರಿಜೇಶ್ ಮತ್ತು ಕೌಶಿಕ್ ಮಧ್ಯೆ ಹಿಂದೆ ಗಲಾಟೆಯಾಗಿದ್ದು ಅದೇ ದ್ವೇಷದಲ್ಲಿ ಕುಡಿದ ಮತ್ತಿನಲ್ಲಿ ಇರಿತ ಘಟನೆಯಾಗಿತ್ತು. ಪ್ರಕರಣ ಸಂಬಂಧಿಸಿ ಕದ್ರಿ ಪೊಲೀಸರು ಬ್ರಿಜೇಶ್, ಗಣೇಶ್, ನಿತಿನ್ ಕುಮಾರ್ ಮತ್ತು ವಿನೋದ್ ಎಂಬವರನ್ನು ಬಂಧಿಸಿದ್ದು ಜೈಲಿಗೆ ಹಾಕಿದ್ದಾರೆ. ಈಗ ಯುವಕ ಮೃತಪಟ್ಟಿದ್ದರಿಂದ ಹಲ್ಲೆ ಕೃತ್ಯ ಕದ್ರಿ ಠಾಣೆಯಲ್ಲಿ ಕೊಲೆ ಪ್ರಕರಣವಾಗಿ ಬದಲಾಗಿದೆ.
A 32-year-old youth named Kaushik, who was stabbed during a clash at a bar in Yeyyadi on June 6, has succumbed to his injuries. The incident occurred following an argument between two groups who were known to each other.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm