ಬ್ರೇಕಿಂಗ್ ನ್ಯೂಸ್
07-06-25 10:39 pm Mangalore Correspondent ಕ್ರೈಂ
ಮಂಗಳೂರು, ಜೂನ್ 7 : ನಗರದ ಯೆಯ್ಯಾಡಿಯ ಬಾರ್ ಒಂದರಲ್ಲಿ ಎರಡು ಗ್ಯಾಂಗ್ ಸದಸ್ಯರು ಕುಡಿದ ಮತ್ತಿನಲ್ಲಿ ಜಗಳವಾಡಿದ್ದು, ಕೌಶಿಕ್ ಎಂಬ ಯುವಕನ ಮೇಲೆ ಒಂದು ತಂಡದ ಸದಸ್ಯರು ಚೂರಿಯಲ್ಲಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ. ಕೌಶಿಕ್ ತೀವ್ರ ಗಾಯಗೊಂಡಿದ್ದು, ಎಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಕೌಶಿಕ್ ಸ್ನೇಹಿತ ರಾಹುಲ್ ಕದ್ರಿ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಜೂನ್ 6ರಂದು ಮಧ್ಯಾಹ್ನ ಬಾರ್ ನಲ್ಲಿ ಗಲಾಟೆ ನಡೆದಿದ್ದು, ಕೌಶಿಕ್ ಮತ್ತು ಮತ್ತೊಂದು ಟೇಬಲ್ ನಲ್ಲಿ ಕುಳಿತಿದ್ದ ಮೂರು ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದಾಡುತ್ತಿದ್ದರು. ಸ್ನೇಹಿತ ರಾಹುಲ್ ಎರಡೂ ಕಡೆಯವರನ್ನು ಸಮಾಧಾನ ಮಾಡುತ್ತಿದ್ದಾಗಲೇ ಹೊರಗಿನಿಂದ ಚೂರಿ ಹಿಡಿದುಕೊಂಡು ಬಂದು ಕೌಶಿಕ್ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಇರಿದಿದ್ದಾನೆ. ಕೌಶಿಕ್ ಬೊಬ್ಬೆ ಹೊಡೆಯುತ್ತಿದ್ದಂತೆ ಅಲ್ಲಿದ್ದವರು ಎಲ್ಲ ಓಡಿ ಹೋಗಿದ್ದರು.
ಬಾರ್ ಸಿಬಂದ್ ಕೌಶಿಕ್ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆತ ಹೇಳಿದ ಮಾಹಿತಿ ಪ್ರಕಾರ, ಒಂದು ತಿಂಗಳ ಹಿಂದೆ ಕೌಶಿಕ್ ಮತ್ತು ಸಂತೋಷ್ ಮಧ್ಯೆ ಗಲಾಟೆಯಾಗಿದ್ದು. ಇದೇ ವಿಚಾರದಲ್ಲಿ ಪರಿಚಯದ ಆಟೋ ಚಾಲಕ ಚೈನೀಸ್ ಗಣೇಶ್, ಶಿಜು, ಬೃಜೇಶ್ ಎಂಬವರು ತಗಾದೆ ತೆಗೆದು ಜಗಳಕ್ಕೆ ಬಂದಿದ್ದಾರೆ. ಈ ವೇಳೆ ಬೃಜೇಶ್ ಎಂಬಾತ ಚೂರಿಯಿಂದ ಹೊಟ್ಟೆಗೆ ಮತ್ತು ಎದೆಯ ಭಾಗಕ್ಕೆ ಇರಿದು ಜೀವ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾನೆ. ಇದರ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A gang clash at a bar in Yeyyadi turned violent when a youth named Kaushik was stabbed in the chest and stomach during a heated argument. He was rushed to AJ Hospital in critical condition. The incident occurred on June 6 when two groups got into a fight under the influence of alcohol. According to a complaint filed by Kaushik’s friend Rahul at Kadri police station, a man identified as Brijesh allegedly attacked Kaushik with a knife. Police have registered a case and launched an investigation.
01-08-25 09:09 pm
Bangalore Correspondent
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm