ಬ್ರೇಕಿಂಗ್ ನ್ಯೂಸ್
02-01-25 11:00 pm HK News Desk ಕ್ರೈಂ
ಬೆಳಗಾವಿ, ಜ.2: ಕುಡಿತಕ್ಕಾಗಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಗಂಡನನ್ನು ಪತ್ನಿಯೇ ಎರಡು ತುಂಡಾಗಿ ಕತ್ತರಿಸಿ ಭೀಕರ ರೀತಿಯಲ್ಲಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ (50) ಕೊಲೆಯಾದ ದುರ್ದೈವಿ.
2024ರ ಡಿಸೆಂಬರ್ 10 ರಂದು ಘಟನೆ ನಡೆದಿದ್ದು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಆರೋಪಿತ ಮಹಿಳೆ ಸಾವಿತ್ರಿ ಇಟ್ನಾಳೆ(30) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ವ್ಯಕ್ತಿ ಕುಡಿತದ ಚಟಕ್ಕೆ ಒಳಗಾಗಿದ್ದ. ಮನೆಯಲ್ಲಿ ಕುಡಿತಕ್ಕಾಗಿ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ಸಾವಿತ್ರಿಯನ್ನು ನಿವೇಶನ ಮಾರಿ ಹಣ ಕೊಡುವಂತೆ ಶ್ರೀಮಂತ್ ಪೀಡಿಸುತ್ತಿದ್ದ. ಗಂಡನ ಕಿರುಕುಳ ತಾಳಲಾರದೇ ಮನೆಯ ಎದುರು ಕಟ್ಟೆಯ ಮೇಲೆ ಮಲಗಿದ್ದ ಶ್ರೀಮಂತನ ಕುತ್ತಿಗೆ ಹಿಸುಕಿ, ಪ್ರಜ್ಞೆ ತಪ್ಪಿದ ನಂತರ ಅವನ ದೇಹವನ್ನು ಹರಿತ ಆಯುಧದಿಂದ ಎರಡು ತುಂಡುಗಳನ್ನಾಗಿಸಿ ಕೊಲೆ ಮಾಡಿರುತ್ತಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವವನ್ನು ಒಬ್ಬಳಿಗೆ ಹೊರಗೆ ಸಾಗಿಸಲು ಆಗಲ್ಲ ಅಂತ ದೇಹವನ್ನ ತುಂಡರಿಸಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ಕೃಷಿ ಜಮೀನಿಗೆ ಒಯ್ದು ಎಸೆದಿದ್ದಾಳೆ. ಕೆಲವು ದಿನಗಳ ಬಳಿಕ ಪಕ್ಕದ ತೋಟದವರು ಶವ ನೋಡಿ ಪೊಲೀಸ್ ಠಾಣೆಗೆ ತಿಳಿಸಿದ್ದರು. ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ, ಆರೋಪಿ ಯಾರು ಎಂಬುದು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಡಿ.12 ರಂದು ಪ್ರಕರಣ ದಾಖಲಾಗಿತ್ತು. ಹಣಕ್ಕಾಗಿ ಪೀಡಿಸುತ್ತಿದ್ದ ಕಾರಣಕ್ಕೆ ಗಂಡನನ್ನೇ ಹೆಂಡತಿ ಕೊಲೆ ಮಾಡಿದ್ದು ಈಗ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A woman allegedly killed her husband following suspicion that he was planning to sexually assault their daughter, in Umrani village near Chikkodi in Belagavi district on Wednesday (January 1, 2025) night. Savitri Itnal (25) allegedly hacked Srimant Itnal (30) to death at their house. She used a rock to smash his head.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am