ಬ್ರೇಕಿಂಗ್ ನ್ಯೂಸ್
01-10-24 11:18 pm Mangalore Correspondent ಕ್ರೈಂ
ಮಂಗಳೂರು, ಅ.1: ನೀವು ಕಳಿಸಿದ್ದ ಪಾರ್ಸೇಲ್ ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ವ್ಯಕ್ತಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ಅವರಿಂದ 39.30 ಲಕ್ಷ ರೂ. ಕಿತ್ತುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ 23 ರಂದು ತನ್ನ ಮೊಬೈಲ್‌ಗೆ ಕರೆ ಬಂದಿದ್ದು ಡಿಎಚ್‌ಎಲ್ ಕೊರಿಯರ್ ಸಂಸ್ಥೆಯ ಕಚೇರಿಯಿಂದ ಶ್ರೇಯಾ ಶರ್ಮಾ ಮಾತನಾಡುತ್ತಿದ್ದೇನೆ ಎಂದು ತಿಳಿಸಿದ್ದರು. ನಿಮ್ಮ ಹೆಸರಿನಲ್ಲಿ ಚೀನಾಕ್ಕೆ ಕಳುಹಿಸಿದ್ದ ಪಾರ್ಸೆಲ್ ರವಾನೆಯಾಗದೇ ಕಚೇರಿಯಲ್ಲೇ ಉಳಿದಿದೆ. ಅದರಲ್ಲಿ 5 ಪಾಸ್‌ಪೋರ್ಟ್, ಒಂದು ಲ್ಯಾಪ್‌ಟಾಪ್, 400 ಗ್ರಾಂ ಎಂಡಿಎಂಎ ಡ್ರಗ್ ಹಾಗೂ ಕೆಲವು ಬ್ಯಾಂಕ್ ದಾಖಲೆಗಳು ಹಾಗೂ ಮೂರೂವರೆ ಕೆ.ಜಿ. ಬಟ್ಟೆ ಇದೆ ಎಂದು ಆಕೆ ತಿಳಿಸಿದ್ದರು. ಆ ಪಾರ್ಸೆಲ್ ತನ್ನದಲ್ಲ ಎಂದರೂ ಕೇಳಲಿಲ್ಲ.
ಕಸ್ಟಮ್ಸ್ ಅಧಿಕಾರಿಗಳು ನಿಮ್ಮನ್ನು ಬಂಧಿಸುತ್ತಾರೆ ಎಂದು ಹೇಳಿ ಯಾಮಾರಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆ.24ರಂದು ಬೆಳಗ್ಗೆ 9ರಿಂದ ವಿಡಿಯೋ ಕಾಲ್ ಮೂಲಕ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ ಕಸ್ಟಮ್ಸ್ ಸೋಗಿನಲ್ಲಿದ್ದ ಅಪರಿಚಿತರು, ನನ್ನನ್ನು ಯಾರ ಜೊತೆಗೂ ಮಾತನಾಡದಂತೆ (ಡಿಜಿಟಲ್ ಅರೆಸ್ಟ್) ನಿರ್ಬಂಧಿಸಿದ್ದರು. ನಿಷೇಧಿತ ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಬಂಧನ ಮಾಡಬೇಕಾಗುತ್ತದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಸಿಕ್ಕಿದೆ ಎಂದಿದ್ದರು. ಬಂಧನ ಮಾಡದೇ ಇರಬೇಕಾದರೆ ನಾವು ಕೇಳಿದಷ್ಟು ಹಣ ನೀಡುವಂತೆ ಕೇಳಿದ್ದರು. ಮೊದಲು ರು. 37 ಲಕ್ಷ ಪಾವತಿಸಿದ್ದು ಮರುದಿನ ನನ್ನ ಸೊತ್ತುಗಳ ವಿಚಾರಣೆಯನ್ನು ಆಡಿಟರ್ ಒಬ್ಬರು ನಡೆಸುತ್ತಾರೆ ಎಂದು ನಂಬಿಸಿ ಅದಕ್ಕೂ ರೂ. 2.30 ಲಕ್ಷವನ್ನು ಪಡೆದಿದ್ದಾರೆ.
ವಿಚಾರಣೆ ಪೂರ್ಣಗೊಂಡ ಬಳಿಕ ಪಡೆದ ಅಷ್ಟೂ ಹಣವನ್ನು ಸೆ.28 ರಂದು ಮರಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಂತರ ಕರೆ ಮಾಡಿದರೆ ಅವರು ಸ್ವೀಕರಿಸುತ್ತಿಲ್ಲ. ನನಗೆ ಅಪರಿಚಿತರ ಮೋಸ ಮಾಡಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ದೂರು ನೀಡಿದ್ದಾರೆ.
Digital arrest scam in the name of drugs parcel, Mangalore man looses 39 lakhs rs.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am