ಬ್ರೇಕಿಂಗ್ ನ್ಯೂಸ್
21-09-24 10:24 pm Bangalore Correspondent ಕ್ರೈಂ
ಬೆಂಗಳೂರು, ಸೆ.21: ನಗರದ ವೈಯ್ಯಾಲಿ ಕಾವಲ್ ನ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಾಲಕ್ಷ್ಮೀ (26) ಎಂಬ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಳೆದ 19 ದಿನಗಳ ಹಿಂದೆಯೇ ಆಕೆಯನ್ನು ಹತ್ಯೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಂತಕರು ಆಕೆಯ ದೇಹವನ್ನು 30 ತುಂಡುಗಳಾಗಿ ಕತ್ತರಿಸಿ, ಆ ತುಂಡುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಹೋಗಿದ್ದಾರೆ. ಆಕೆಯ ದೇಹದ ತುಂಡುಗಳಿಂದ ಬಂದ ರಕ್ತ ಫ್ರಿಡ್ಜ್ ನಿಂದ ಸೋರಿಕೆಯಾಗಿ ಮನೆಯ ತುಂಬೆಲ್ಲಾ ಹರಡಿತ್ತು. ಶುಕ್ರವಾರದಂದು ಆಕೆಯಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಮೊದಮೊದಲಿಗೆ, ಯಾವುದೋ ಹೆಗ್ಗಣ ಸತ್ತಿರುವ ವಾಸನೆ ಇರಬಹುದು ಎಂದು ನೆರೆಯವರು ತಿಳಿದಿದ್ದರು.

ಆದರೆ, ದಿನಗಳೆದಂತೆ ವಾಸನೆ ಮಹಾಲಕ್ಷ್ಮಿಯಿದ್ದ ಮನೆಯಿಂದಲೇ ಬರುತ್ತಿದ್ದ ಕಾರಣಕ್ಕೆ ನೆರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಬಂದು ಪರಿಶೀಲಿಸಿ ಬಾಗಿಲು ಒಡೆದು ಹೋದಾಗ ಮನೆಯಲ್ಲಿ ಹರಡಿದ್ದ ರಕ್ತದಲ್ಲಿ ಅದಾಗಲೇ ಹುಳ ಬಿದ್ದಿದ್ದವು. ರಕ್ತ ಎಲ್ಲಿಂದ ಸೋರಿದೆ ಎಂದು ಪರಿಶೀಲಿಸಿದಾಗ ಆ ರಕ್ತ ಪೊಲೀಸರನ್ನು ಮನೆಯಲ್ಲಿದ್ದ ಫ್ರಿಡ್ಜ್ ಕಡೆಗೆ ಕರೆದೊಯ್ದಿದೆ. ಫ್ರಿಡ್ಜ್ ಬಾಗಿಲು ತೆಗೆದಾಗ ಪೊಲೀಸರು ಫ್ರಿಡ್ಜ್ ನಲ್ಲಿದ್ದ ಯುವತಿಯ ದೇಹದ 30 ಪೀಸ್ ಗಳನ್ನು ನೋಡಿ ದಂಗಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆಕೆ ನೇಪಾಳದವಳು ಎಂದು ಹೇಳಲಾಗಿದೆ. ಆಕೆಯು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿ ದಿನ ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಹೋದರೆ ರಾತ್ರಿ 9 ಗಂಟೆಗೆ ಮನೆಗೆ ಬರುತ್ತಿದ್ದಳು. ಒಮ್ಮೆ ಮನೆಯೊಳಗೆ ಹೋದರೆ ಪುನಃ ಆಕೆ ಹೊರಕ್ಕೆ ಬರುತ್ತಿದ್ದುದು ಮರುದಿನ ಡ್ಯುಟಿಗೆ ಹೋಗಬೇಕಾದಾಗ ಮಾತ್ರ ಎಂದು ನೆರೆಯವರು ಹೇಳಿದ್ದಾರೆ.
ಮತ್ತೊಂದು ಮೂಲದ ಪ್ರಕಾರ, ಆಕೆಯು ನೇಪಾಳದವಳಾಗಿದ್ದು ವಿವಾಹಿತೆಯಾಗಿದ್ದಳು. ದಂಪತಿಯಿಬ್ಬರೂ ಮುನೇಶ್ವರನಗರದಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಆಕೆ, ಹುಕುಂ ಸಿಂಗ್ ಎಂಬಾತನನ್ನು ಮದುವೆಯಾಗಿದ್ದಳು. ಆ ದಂಪತಿಗೊಂದು ಮಗುವೂ ಇದೆ. ಆದರೆ, ಆಕೆ ತನ್ನ ಪತಿ ಹಾಗೂ ಮಗುವನ್ನು ತೊರೆದಿದ್ದಳು. ಪತಿ ಹಾಗೂ ಮಗುವನ್ನು ತೊರೆದ ನಂತರ ಆಕೆ ವೈಯ್ಯಾಲಿ ಕಾವಲ್ ನಲ್ಲಿ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ.
In a shocking incident, a 26-year-old home-alone woman was murdered and her body parts cut into several pieces and stuffed in the fridge of the house she was living in at Vinayaka Nagar in Vyalikaval here on Saturday.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm