ಬ್ರೇಕಿಂಗ್ ನ್ಯೂಸ್
07-09-24 03:06 pm HK News Desk ಕ್ರೈಂ
ಹೈದರಾಬಾದ್, ಸೆ.7: ಅಪರಿಚಿತರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರಿಗೆ ಸೈನೈಡ್ ಬೆರೆಸಿದ ಪಾನೀಯ ಕೊಟ್ಟು ನೆಲಕ್ಕೆ ಉರುಳುತ್ತಲೇ ಅವರ ಬಳಿಯಿರುವ ಚಿನ್ನ, ನಗದು, ಇನ್ನಿತರ ವಸ್ತುಗಳನ್ನು ದೋಚುತ್ತಿದ್ದ ಮೂವರು ಕಂತ್ರಿ ಮಹಿಳೆಯರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ.
ತೆನಾಲಿ ಮೂಲದ "ಸರಣಿ ಹಂತಕಿಯರು" ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದಾರೆ ಎಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ. ಸೀರಿಯಲ್ ಕೊಲೆಗಳಿಗೆ ಸಂಬಂಧಿಸಿದಂತೆ ಮುನಗಪ್ಪ ರಜಿನಿ, ಮಡಿಯಾಲ ವೆಂಕಟೇಶ್ವರಿ ಮತ್ತು ಗುಲ್ರ ರಮಣಮ್ಮ ಎಂಬವರನ್ನು ಆಂಧ್ರಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇವರು ಸೈನೈಡ್ ಮಿಶ್ರಿತ ಪಾನೀಯಗಳನ್ನು ಸೇವಿಸಿದ ನಂತರ ಸಾಯುತ್ತಿದ್ದರು. ಬಳಿಕ ಹಂತಕಿಯರು ಅವರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು. ಇದೇ ಜೂನ್‌ನಲ್ಲಿ ನಾಗೂರ್ ಎಂಬ ಮಹಿಳೆಯನ್ನು ಹತ್ಯೆಗೈಯಲಾಗಿತ್ತು. ಈ ಘಟನೆ ಬಳಿಕ ಅವರು ಇನ್ನೂ ಇಬ್ಬರನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಅವರು ಬದುಕುಳಿದಿದ್ದರು.
ಮೂವರು ಹಂತಕಿಯರ ಬಳಿಯಿಂದ ಸೈನೈಡ್ ಹಾಗೂ ಸಾಕ್ಷಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅವರಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಎನ್ನಲಾದ ವ್ಯಕ್ತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಮೂವರೂ ಮಹಿಳೆಯರು ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತೆನಾಲಿ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ತೆನಾಲಿಯ ಈ ಕೃತ್ಯ ಕೇರಳದ ಜಾಲಿ ಜೋಸೆಫ್ ಎಂಬ ಸರಣಿ ಹಂತಕಿಯ ಕೃತ್ಯಗಳನ್ನು ನೆನಪಿಸಿದೆ. ಈಕೆ 14 ವರ್ಷಗಳಲ್ಲಿ ಆರು ಮಂದಿಯನ್ನು ಸೈನೈಡ್ ನೀಡಿ ಕೊಂದಿದ್ದಳು. ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಎಂಬ ಕುಖ್ಯಾತಿ ಕರ್ನಾಟಕದ ಸೈನೈಡ್ ಮಲ್ಲಿಕಾ ಅಲಿಯಾಸ್ ಕೆಂಪಮ್ಮ ಹೆಸರಲ್ಲಿದೆ. 2007ರಲ್ಲಿ ಬೆಂಗಳೂರಿನ ಹೊರವಲಯದಲ್ಲಿ ನಿಗೂಢ ರೀತಿಯಲ್ಲಿ ಅನೇಕ ಮಹಿಳೆಯರು ಹತ್ಯೆಯಾಗಿದ್ದರು. ಆರು ಮಂದಿಯನ್ನು ಈಕೆ ಸೈನೇಡ್ ಮಿಶ್ರಿತ ಆಹಾರ ತಿನ್ನಿಸಿ ಕೊಂದಿದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
They befriended strangers and offered them drinks which were mixed with cyanide to steal gold, cash and other valuables in Andhra Pradesh's Tenali district. Three women, the "serial killers" of Tenali, as claimed by the police, have murdered four people including three women.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm