ಬ್ರೇಕಿಂಗ್ ನ್ಯೂಸ್
05-09-24 02:55 pm Mangalore Correspondent ಕ್ರೈಂ
ಪುತ್ತೂರು, ಸೆ.5: ತನ್ನನ್ನು ಸಿಆರ್ ಪಿಎಫ್ ಯೋಧನೆಂದು ಫೇಸ್ಬುಕ್ ನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ತನಗೆ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ, ಫರ್ನಿಚರ್ ಗಳನ್ನು ಮಾರಾಟ ಮಾಡುತ್ತೇನೆಂದು ಹೇಳಿ ಅಡ್ವಾನ್ಸ್ ಹಣ ಪಡೆದು ಪುತ್ತೂರಿನ ವ್ಯಕ್ತಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕು ಪಂಚಾಯಿತಿ ನರೇಗಾ ಸಂಯೋಜಕ ಭರತ್ ಕುಮಾರ್ ಹಣ ಕಳಕೊಂಡವರು. ಇವರಿಗೆ ಫೇಸ್ಬುಕ್ ಮೆಸೆಂಜರ್ ನಲ್ಲಿ ಗೆಳೆಯ ರಾಧಾಕೃಷ್ಣ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ನನ್ನ ಗೆಳೆಯ ಸಂತೋಷ್ ಸಿಆರ್ ಪಿಎಫ್ ಯೋಧನಾಗಿದ್ದು, ಕಾಶ್ಮೀರಕ್ಕೆ ವರ್ಗಾವಣೆಯಾಗುತ್ತಿದ್ದಾನೆ. ಆತನ ಮನೆಯಲ್ಲಿರುವ ಪೀಠೋಪಕರಣ, ಇಲೆಕ್ಟ್ರಾನಿಕ್ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಸಂದೇಶ ಬಂದಿತ್ತು.
ಬಳಿಕ ಸಂತೋಷ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಭರತ್ ಗೆ ಕರೆ ಮಾಡಿದ್ದು ಮನೆ ಸಾಮಗ್ರಿಗಳನ್ನು ಕಳಿಸಿಕೊಡುವುದಾಗಿ ಹೇಳಿ ಫೋಟೋ ಕಳಿಸಿದ್ದಾನೆ. ಸಾಮಗ್ರಿಗೆ 95 ಸಾವಿರ ರೂ. ಎಂದು ಹೇಳಿದ ಆ ವ್ಯಕ್ತಿಯ ಜೊತೆಗೆ ಭರತ್ ಚೌಕಾಶಿ ಮಾಡಿದ್ದು, ಹತ್ತು ಸಾವಿರ ರೂ. ಅಡ್ವಾನ್ಸ್ ಮಾಡಿದ್ದಾರೆ. ಬಳಿಕ ಬೆಂಗಳೂರಿನಿಂದ ಸಿಆರ್ ಪಿಎಫ್ ಲಾರಿಯಲ್ಲಿ ಸಾಮಗ್ರಿ ಕಳಿಸಿಕೊಡುತ್ತಿದ್ದೇನೆ, ಕೂಡಲೇ ಉಳಿಕೆ ಹಣ ಕಳಿಸುವಂತೆ ವ್ಯಕ್ತಿ ಒತ್ತಡ ಹೇರಿದ್ದ. ಈ ಹಂತದಲ್ಲಿ ಸಂಶಯಕ್ಕೀಡಾದ ಭರತ್, ಫೇಸ್ಬುಕ್ ಗೆಳೆಯ ರಾಧಾಕೃಷ್ಣ ಅವರಿಗೆ ಕರೆ ಮಾಡಿದಾಗ, ತಾನೇನೂ ಮೆಸೇಜ್ ಹಾಕಿಲ್ಲ ಎಂದುತ್ತರ ಬಂದಿದೆ. ಇದರಿಂದ ಮೋಸ ಹೋಗಿದ್ದು ಅರಿವಾಗುತ್ತಲೇ ಭರತ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮೆಸೇಜ್ ಕಳಿಸಿದ್ದ ಫೇಸ್ಬುಕ್ ಖಾತೆ ಬ್ಲಾಕ್ ಆಗಿದೆ. ಹಣ ಕಳಿಸಿದ್ದ ಫೋನ್ ಪೇ ನಂಬರ್ ಚಾಲ್ತಿಯಲ್ಲಿದ್ದು, ಫೋನ್ ಮಾಡಿದರೆ ರಿಂಗ್ ಆಗುತ್ತಿದೆ. ಫೋನ್ ಪೇ ಮಾಡಿದಾಗ ಬಾಬುಲಾಲ್ ಎಂದು ಆ ಹೆಸರನ್ನು ತೋರಿಸಿತ್ತು. ಅವರಲ್ಲಿ ಕೇಳಿದಾಗ, ಅದು ತನ್ನ ತಂದೆಯದೆಂದು ಸಂತೋಷ್ ಹೇಳಿದ್ದ ಎಂದು ಭರತ್ ಕುಮಾರ್ ತಿಳಿಸಿದ್ದಾರೆ.
Online fraud in the name of CRSF solider, puttur man cheated of 10 thousand rs.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm