ಬ್ರೇಕಿಂಗ್ ನ್ಯೂಸ್
07-07-24 03:07 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 7: ಚಿತ್ರನಟಿ ಅಮೂಲ್ಯ ಗರ್ಭಿಣಿಯಾಗಿದ್ದನ್ನು ‘ಇದು ರಾಜ್ಯವೇ ಖುಷಿಪಡುವ ಸುದ್ದಿ’ಯೆಂದು ಹಂಚಿಕೊಂಡು ಟ್ರೋಲ್ ಆಗಿದ್ದ ಖಾಸಗಿ ಸುದ್ದಿ ವಾಹಿನಿಯ ನಿರೂಪಕಿ ದಿವ್ಯಾ ವಸಂತಾ ಹನಿಟ್ರ್ಯಾಪ್ ಕೇಸಲ್ಲಿ ತಗ್ಲಾಕ್ಕೊಂಡಿದ್ದಾಳೆ. ಪ್ರಕರಣದಲ್ಲಿ ಸುದ್ದಿ ವಾಹಿನಿಯ ಸಿಇಓ ರಾಜಾನುಕುಂಟೆ ವೆಂಕಟೇಶ್ ಹಾಗೂ ದಿವ್ಯಾ ಸೋದರ ಸಂದೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದಿರಾ ನಗರದ ಬ್ಯೂಟಿ ಪಾರ್ಲರ್ ಒಂದರ ಮಾಲೀಕರನ್ನು ಹನಿಟ್ರಾಪ್ ಮಾಡಿ, ಹಣಕ್ಕಾಗಿ ಪೀಡಿಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಸುದ್ದಿ ವಾಹಿನಿಯ ನಿರೂಪಕಿ ದಿವ್ಯಾ ವಸಂತ್ ಅವರ ಹೆಬ್ಬಾಳದಲ್ಲಿರುವ ಮನೆಗೆ ದಾಳಿ ನಡೆಸಿದ್ದಾರೆ. ಆದರೆ ಪೊಲೀಸ್ ದಾಳಿಯ ಮಾಹಿತಿ ತಿಳಿದ ದಿವ್ಯಾ ಅದಕ್ಕೂ ಮೊದಲೇ ತಪ್ಪಿಸಿಕೊಂಡಿದ್ದಳು. ಹಾಗಾಗಿ, ಮನೆಯಲ್ಲಿ ದಾಖಲೆಗಳನ್ನು ಸಂಗ್ರಹಿಸುವುದಕ್ಕಾಗಿ ಪೊಲೀಸರು ಜಾಲಾಡಿದ್ದಾರೆ. ದಿವ್ಯಾ ಮನೆ ಬಿಡುವಾಗಲೇ ತನ್ನ ಕ್ಯಾಮರಾ, ಇನ್ನಿತರ ವಿದ್ಯುನ್ಮಾನ ವಸ್ತುಗಳನ್ನು ಪಡೆದು ಅಲ್ಲಿಂದ ಕಾಲ್ಕಿತ್ತಿದ್ದಳು. ಪೊಲೀಸರು ಆಕೆಯ ಜೊತೆಗೆ, ಸಚಿನ್ ಹಾಗೂ ಆಕಾಶ್ ಎಂಬ ಮತ್ತಿಬ್ಬರು ಆರೋಪಿಗಳ ಪತ್ತೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇತ್ತೀಚೆಗೆ, ಇಂದಿರಾ ನಗರದ 15ನೇ ಮುಖ್ಯರಸ್ತೆಯಲ್ಲಿರುವ ಬ್ಯೂಟಿ ಪಾರ್ಲರ್ ಒಂದರ ಮಾಲೀಕರನ್ನು ಉಪಾಯದಿಂದ ಹನಿಟ್ರ್ಯಾಪ್ ಗೆ ಒಳಪಡಿಸಲು ಸಂಚು ಮಾಡಿದ್ದರು. ಆದರೆ, ಅದು ಸಾಧ್ಯವಾಗದೇ ಇದ್ದಾಗ ನಿಮ್ಮ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ, ಅವರನ್ನು ಬೆದರಿಸಿ ಹಣ ಸುಲಿಗೆ ಮಾಡಲು ಮುಂದಾಗಿದ್ದರು. ಈ ಬಗ್ಗೆ ಬ್ಯೂಟಿ ಪಾರ್ಲರ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.
ತಮ್ಮದೇ ಯುವತಿ ಸೇರಿಸಿ ಸಂಚು
ದಿವ್ಯಾ ಮತ್ತು ವೆಂಕಟೇಶ್ ತಂಡ, ಇಂದಿರಾ ನಗರದ ಸ್ಪಾಗೆ ತಮ್ಮದೇ ಪರಿಚಯದ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದರು. ಆನಂತರ, ಸ್ಪಾಗೆ ದಿವ್ಯಾ ಸೋದರ ಸಂದೇಶ ತೆರಳಿದ್ದು, ಅದೇ ಯುವತಿಯ ಮೂಲಕ ಮಸಾಜ್ ಮಾಡಿಸಿಕೊಂಡಿದ್ದ. ಈ ದೃಶ್ಯವನ್ನು ತನ್ನದೇ ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಿಕೊಂಡಿದ್ದ ಸಂದೇಶ್, ಬಳಿಕ ಸುದ್ದಿ ವಾಹನಿಯ ಮೂಲಕ ಮಾಲೀಕರ ಬಳಿ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಬಳಿಕ 50 ಸಾವಿರ, 80 ಸಾವಿರ ಎಂದು ಆನ್ಲೈನ್ ಮೂಲಕ ಹಣ ಹಾಕಿಸಿಕೊಂಡಿದ್ದರು. ಆನಂತರ, 15 ಲಕ್ಷ ಕೊಡುವಂತೆ ಪೀಡಿಸಿ ಬಳಿಕ ಎಂಟು ಲಕ್ಷಕ್ಕೆ ಸೆಟ್ಲ್ ಮಾಡುವಂತೆ ಬಂದಿದ್ದರು. ಇಷ್ಟು ಹೊತ್ತಲ್ಲೇ ಸ್ಪಾ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.
ರಾಜಾನುಕುಂಟೆ ವೆಂಕಟೇಶ್ ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಸಿಇಓ ಆಗಿದ್ದ ಎನ್ನಲಾಗುತ್ತಿದ್ದು, ಆನಂತರ ಅಲ್ಲಿಂದ ಹೊರಬಂದು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದ. ಇನ್ನಿಬ್ಬರ ತಂಡ ಕಟ್ಟಿಕೊಂಡು ಸ್ಟಿಂಗ್ ಮಾಡಲು ಹೋಗಿ ಈಗ ಸಿಕ್ಕಿಬಿದ್ದಿದ್ದಾನೆ. ಇದಕ್ಕೆ ದಿವ್ಯಾ ವಸಂತ್ ಅವರನ್ನೂ ಬಳಸಿಕೊಂಡಿದ್ದು ಹಲವರಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
CEO of news channel has been arrested for allegedly trying to extort money from a well-known spa. The complaint was filed by the manager of the spa. News anchor Divya Vasanth's brother Sandesh were apprehended, and three mobile phones were seized from them. The police have also launched a manhunt for other presenters, Anchor Divya, Sachin, and Akash, who are currently missing. Venkatesh and Divya had created a WhatsApp group named 'Spy Research Team' to discuss their extortion plans.
04-05-25 09:26 pm
HK News Desk
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 08:49 pm
Mangalore Correspondent
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm