ಬ್ರೇಕಿಂಗ್ ನ್ಯೂಸ್
10-06-24 06:24 pm HK News Desk ಕ್ರೈಂ
ಬೆಳಗಾವಿ, ಜೂ 10: ಖತರ್ನಾಕ್ ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ವೈದ್ಯ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಮಾಳಮಾರುತಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ಪ್ರಕರಣ ಸಂಬಂಧ ಕಿಂಗ್ ಪಿನ್ಗಳಾದ ಕಿತ್ತೂರಿನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಮತ್ತು ಪ್ರವೀಣ್ ಎಂಬುವರನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ಮಕ್ಕಳ ಮಾರಾಟದಲ್ಲಿ ಫುಲ್ ಆಕ್ಟಿವ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಗೂ ಮುನ್ನ ಗರ್ಭಿಣಿಯಾಗಿ, ಗರ್ಭಪಾತ ಮಾಡಿಸಬೇಕು ಎನ್ನುವವರೇ ಇವರ ಟಾರ್ಗೆಟ್ ಆಗಿದ್ದರು. 7-8 ತಿಂಗಳ ಗರ್ಭಿಣಿಯರ ಅಬಾಷನ್ ಮಾಡಿ, ಮಗು ರಕ್ಷಿಸಿ ತಾವೇ ಸಾಕುವುದಾಗಿ ನಂಬಿಸಿ ಆಪರೇಷನ್ ಮಾಡಿಸಿ ಕಳಿಸುತ್ತಿದ್ದರು. ಆರ್‌ಎಂಪಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎರಡ್ಮೂರು ತಿಂಗಳು ಆ ಶಿಶುಗಳನ್ನು ಆರೈಕೆ ಮಾಡುತ್ತಿದ್ದರು. ಹೀಗೆ ಆರೈಕೆ ಮಾಡಿದ ಮಗುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಮಕ್ಕಳಿಲ್ಲದವರಿಗೆ ರೂ. 60 ಸಾವಿರದಿಂದ ಒಂದೂವರೆ ಲಕ್ಷ ರೂ.ವರೆಗ ಮಾರಾಟ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಆರೋಪಿ ಖೆಡ್ಡಾಗೆ ಬಿದ್ದಿದ್ದು ಹೀಗೆ:
ಈ ಬಗ್ಗೆ ಮಕ್ಕಳ ರಕ್ಷಣಾ ಇಲಾಖೆಗೆ ಗೊತ್ತಾಗುತ್ತಿದ್ದಂತೆ ಮಕ್ಕಳ ಮಾರಾಟ ಜಾಲದ ಆರೋಪಿ ಮಹಾದೇವಿ ಜೈನ್ಗೆ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ನಮಗೆ ಮಗು ಬೇಕಾಗಿದೆ ಎಂದು ಹೇಳಿದ್ದನ್ನು ನಂಬಿದ ಆರೋಪಿ, 1 ಲಕ್ಷದ 40 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಇದಕ್ಕೆ ಒಪ್ಪಿ, ಬೆಳಗಾವಿಯ ರಾಮತೀರ್ಥ ನಗರಕ್ಕೆ ಮಗು ತರುವಂತೆ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಮಗುವಿನ ಜೊತೆಗೆ ಬಂದ ಮಹಾದೇವಿ ಹಾಗೂ ಗ್ಯಾಂಗ್ ಅಧಿಕಾರಿಗಳ ಬಲೆಗೆ ಬಿದ್ದಿದೆ. ಕಿಂಗ್ ಪಿನ್ ವೈದ್ಯ ಅಬ್ದುಲ್ ಗಫಾರ್ ಖಾನ್ನಿಂದ 60 ಸಾವಿರ ರೂ.ಗೆ ಮಗುವನ್ನು ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್ ಖರೀದಿ ಮಾಡಿದ್ದರು. ಬಳಿಕ 1 ಲಕ್ಷ 40 ಸಾವಿರ ರೂ. ಹಣಕ್ಕೆ ಮಗು ಮಾರಾಟ ಮಾಡಲು ಯತ್ನಿಸಿ ಖೆಡ್ಡಾಕ್ಕೆ ಬಿದ್ದಿದ್ದಾರೆ.
ಉಳಿದಿಬ್ಬರು ಆರೋಪಿಗಳಾದ ಪವಿತ್ರಾ ಮತ್ತು ಪ್ರವೀಣ್ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಆದರೆ, ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಪವಿತ್ರಾ 7 ತಿಂಗಳ ಗರ್ಭಿಣಿಯಾಗಿದ್ದರು. ಮನೆಯಲ್ಲಿ ಗೊತ್ತಾದರೆ ಸಮಸ್ಯೆ ಆಗುತ್ತದೆ ಎಂದು ಈ ಜೋಡಿಯು ಕಿತ್ತೂರಿನಲ್ಲಿರುವ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಬಳಿ ತೆರಳಿದ್ದರು. ವೈದ್ಯ 20 ಸಾವಿರ ರೂ. ಹಣ ಪಡೆದು, ಆಪರೇಷನ್ ಮಾಡಿ ಮಗು ತೆಗೆದಿದ್ದರು ಎಂಬ ಸಂಗತಿ ಗೊತ್ತಾಗಿದೆ. ಐವರು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಂಧಿತ ಕಿಂಗ್ ಪಿನ್ ಅಬ್ದುಲ್ ಅಸಲಿಗೆ ವೈದ್ಯನೇ ಅಲ್ಲ ;
ಅಸಲಿಗೆ ಬಂಧಿತ ವೈದ್ಯ ಕಿಂಗ್ಪಿನ್ ಅಬ್ದುಲ್ ಗಫರ್ ಲಾಡಖಾನ್ ವೈದ್ಯನೇ ಅಲ್ಲ. ಯಾವುದೇ ಅನುಮತಿ ಪಡೆಯದೆ ಕಳೆದ 10 ವರ್ಷಗಳಿಂದ ಕಿತ್ತೂರು ಪಟ್ಟಣದಲ್ಲಿ ಆರ್‌ಎಂಪಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ. ಈತನ ಬಗ್ಗೆ ಹಲವು ಬಾರಿ ಸ್ಥಳೀಯರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇನ್ನು ಮಕ್ಕಳ ಮಾರಾಟ ಅಷ್ಟೇ ಅಲ್ಲದೇ ಭ್ರೂಣಹತ್ಯೆ ಕೂಡ ಮಾಡಿದ್ದಾಗಿ ಮಾಹಿತಿ ಇದೆ.
ಕಿತ್ತೂರಿನ ಸೋಮವಾರಪೇಟೆಯಲ್ಲಿರುವ ಅಬ್ದುಲ್ ಕ್ಲಿನಿಕ್ಗೆ ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಅಧಿಕಾರಿಗಳು ಕೇಳಿದಾಗ ಹೆಂಡತಿ ಫರಹತ್ ಲಾಡಖಾನ್ ಹೆಸರು ಹೇಳಿದ್ದಾರೆ. ಆಕೆಯದ್ದು ಬಿ ಎಚ್ಎಂಎಸ್ ಆಗಿದೆ ಕ್ಲಿನಿಕ್ ಅನುಮತಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.
Belagavi police arrested five persons, including a fake doctor, on the charges of selling and buying an infant that was allegedly born to an unwed mother in Karnataka. Mahadevi, alias Priyanka Bahubali Jain from Bailhongal, Abdulgafar Hussainsaab Ladkhan, a physician from Hanchinal village near Saundatti, Chandan Subedar from Shigihali village near Bailhongal, Pavitra Somappa Madiwalar from Sampagaon village near Bailhongal, and Praveen Manjunath Madiwalar from Dharwad were produced in a court that remanded them in judicial custody.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm