ಬ್ರೇಕಿಂಗ್ ನ್ಯೂಸ್
03-06-24 10:54 pm HK News Desk ಕ್ರೈಂ
ಚಿತ್ರದುರ್ಗ, ಜೂ 03: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪದಡಿ ಚಿತ್ರದುರ್ಗ ನಗರದ ಮಸೀದಿಯೊಂದರ ಮೌಲ್ವಿ ಅಬ್ದಲ್ ರೆಹಮಾನ್ ಹಾಗೂ ಅಪ್ರಾಪ್ತೆಯ ಸಹೋದರನನ್ನು ಭಾನುವಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಗೆ ಮೇ 30 ರಂದು ಎಂಟು ಗಂಟೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ವೈದ್ಯರ ತಪಾಸಣೆ ಮಾಡುವ ವೇಳೆ ಅವಧಿ ಪೂರ್ವದಲ್ಲೇ ಭ್ರೂಣ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ತಾಯಿ ಮಗಳನ್ನು ಪ್ರಕರಣದ ಕುರಿತು ವಿಚಾರಿಸಿದಾಗ ತನಗೆ ಕುರಾನ್ ಓದಿಸುತ್ತಿದ್ದ ಮೌಲ್ವಿ ಅಬ್ದುಲ್ ರೆಹಮಾನ್ ಹಾಗೂ ಸಹೋದರನಿಂದಲೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿಸಿದ್ದಾರೆ. ಆತಂಕಿತರಾದ ತಾಯಿ ಮೇ 31 ರಂದೇ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಪ್ರಾಪ್ತ ಬಾಲಕಿ ತಮ್ಮ ಏರಿಯಾದ ಮಸೀದಿಗೆ ಕುರಾನ್ ಓದಲು ಹೋಗುತ್ತಿದ್ದರು. ಒಂದೂವರೆ ವರ್ಷದ ಹಿಂದೆಯೇ ಬಾಲಕಿಯನ್ನು ನೋಡಿದ ಮೌಲ್ವಿ ‘ನಿಮ್ಮ ಮಗಳಿಗೆ ಗಾಳಿ ಸೋಕಿದೆ. ಪರಿಹಾರಕ್ಕೆ ನಿಮ್ಮ ಮನೆಯಲ್ಲೇ ವಿಶೇಷ ಪೂಜೆ ಮಾಡಿಸಿಬೇಕು’ ಎಂದು ತಾಯಿಗೆ ಹೇಳಿದ್ದಾನೆ. ನಂತರ ವಾರಕ್ಕೊಮ್ಮೆ ಮನೆಗೆ ತೆರಳಿ ಪ್ರಾರ್ಥನೆ ನೆಪದಲ್ಲಿ ಬಾಲಕಿಯ ಮೈ, ಕೈ ಮುಟ್ಟಿ ಅಸಭ್ಯವಾಗಿ ನಡೆದು ಕೊಂಡಿದ್ದಾನೆ.
ಕಳೆದ ಆರೇಳು ತಿಂಗಳ ಹಿಂದೆ ಪೂಜೆಗೆಂದು ಮನೆಗೆ ಬಂದಾಗ ತಾಯಿ ಯನ್ನು ಹೊರಗೆ ಕಳುಹಿಸಿ ಬಾಲಕಿ ಹಾಗೂ ಆಕೆಯ ಸಹೋದರ ನನ್ನು ಮನೆಯೊಳಗೆ ಕರೆದೊಯ್ದಿದ್ದಾನೆ. ನಂತರ ನಿಮ್ಮ ಸಹೋದರಿಗೆ ಹಿಡಿದಿರುವ ದೆವ್ವಕ್ಕೆ ದೈಹಿಕ ಸುಖ ನೀಡಿದರೆ ಶಾಂತಿ ಯಾಗಲಿದೆ ಎಂದು ನಂಬಿಸಿ, ಸಹೋದರನಿಂದಲೇ ಅತ್ಯಾಚಾರ ನಡೆಸಿದ್ದಾನೆ. ಅದೇ ಸಮಯದಲ್ಲಿ ಈ ಕೃತ್ಯದ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ನಂತರ ಇದನ್ನೇ ನೆಪವಾಗಿಟ್ಟುಕೊಂಡು ಮೌಲ್ವಿ ಅತ್ಯಾಚಾರ ನಡೆಸಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಪೂಜೆ ಫಲಿಸುವುದಿಲ್ಲ ಎಂದು ಹೇಳಿ ಬೆದರಿಸಿದ್ದಾನೆ.
ಒಂದು ತಿಂಗಳ ಹಿಂದೆ ಬಾಲಕಿ ತನ್ನ ತಾಯಿ ಬಳಿ ಪೀರಿಯೆಡ್ಸ್ ಆಗಿಲ್ಲ ಎಂದು ಆತಂಕ ತೋಡಿಕೊಂಡಾಗ ಸ್ಥಳೀಯ ಖಾಸಗಿ ವೈದ್ಯರೊಬ್ಬರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ರಕ್ತ ಕಡಿಮೆ ಇದೆ ಎಂದು ಟಾನಿಕ್ ನೀಡಿದ್ದಾರೆ. ಕಳೆದ ತಿಂಗಳ ಮೇ ೩೦ ರಂದು ರಾತ್ರಿ ತೀವ್ರ ಸ್ವರೂಪದ ಹೊಟ್ಟೆ ನೋವು ಕಾಣಿಸಿಕೊಂಡಾಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಗ ಪ್ರಕರಣದ ಹಿನ್ನೆಲೆ ಬಯಲಾಗಿದ್ದು, ಸಂತ್ರಸ್ತ ಬಾಲಕಿಯ ತಾಯಿ ಮೌಲ್ವಿ ಹಾಗೂ ಪುತ್ರನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
Karnataka Police arrested a cleric in Chitradurga on Monday, on charges of repeatedly raping a minor girl on the pretext of getting her rid of being possessed by evil spirits. The priest also got the victim's brother to sexually assault her as a cure.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm