ಬ್ರೇಕಿಂಗ್ ನ್ಯೂಸ್
24-05-24 03:47 pm HK News Desk ಕ್ರೈಂ
ಕೋಲ್ಕತಾ, ಮೇ 24: ಬಾಂಗ್ಲಾದೇಶದಿಂದ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಬಂದು, ಕೋಲ್ಕತಾದಲ್ಲಿ ಭಯಾನಕ ರೀತಿಯಲ್ಲಿ ಹತ್ಯೆಯಾಗಿರುವ ಸಂಸದ ಅನ್ವರುಲ್ ಅಜೀಂ ಅನರ್ ಅವರ ಪ್ರಕರಣದಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.
ಅನ್ವರುಲ್ ಅವರ ದೇಹವನ್ನು ಅಪಾರ್ಟ್‌ಮೆಂಟ್‌ನಲ್ಲಿ ತುಂಡು ತುಂಡಾಗಿ ಕತ್ತರಿಸಿ, ಚರ್ಮ ಸುಲಿಯಲಾಗಿತ್ತು. ಬಳಿಕ ಅನೇಕ ಪ್ಲಾಸ್ಟಿಕ್ ಕವರ್‌ಗಳಲ್ಲಿ ನಗರದಾದ್ಯಂತ ಎಸೆಯಲಾಗಿತ್ತು ಎಂಬುದನ್ನು ತನಿಖೆ ಬಹಿರಂಗಪಡಿಸಿದೆ. ಇನ್ನೂ ಗಮನಿಸಬೇಕಾದ ಸಂಗತಿಯೆಂದರೆ, ಬಾಂಗ್ಲಾದೇಶದಿಂದ ವಲಸೆ ಬಂದವರೇ ಈ ಕೃತ್ಯ ಎಸಗಿದ್ದಾರೆ.

ಮೇ 12ರಂದು ಕೋಲ್ಕತಾದಲ್ಲಿನ ತಮ್ಮ ಸ್ನೇಹಿತ ಗೋಪಾಲ್ ಬಿಸ್ವಾಸ್ ಮನೆಗೆ ಬಂದಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್, ಮೇ 14ರಂದು ನಾಪತ್ತೆಯಾಗಿದ್ದರು.
ಬಾಂಗ್ಲಾದೇಶದ ಅಕ್ರಮ ವಲಸಿಗ ಜಿಹಾದ್ ಹವಾಲ್ದಾರ್ ಎಂಬಾತನನ್ನು ಬಂಧಿಸಿದ ಬಳಿಕ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಯಶ ಕಂಡಿದ್ದಾರೆ. ಮುಂಬಯಿಯಲ್ಲಿ ವಾಸವಿರುವ ಹವಾಲ್ದಾರ್, ಕೋಲ್ಕತಾದ ಅಪಾರ್ಟ್‌ಮೆಂಟ್‌ನಲ್ಲಿ ಅನ್ವರುಲ್ ಅವರನ್ನು ಕೊಂದು, ದೇಹವನ್ನು ಕತ್ತರಿಸಿದ ಕೃತ್ಯದಲ್ಲಿ ತನ್ನ ಕೈವಾಡದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಈ ಭಯಾನಕ ಕೃತ್ಯವನ್ನು ಹೇಗೆ ವ್ಯವಸ್ಥಿತವಾಗಿ ರೂಪಿಸಿ, ಜಾರಿಗೊಳಿಸಲಾಗಿದೆ ಎಂಬ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಂದಿದೆ. ಬಾಂಗ್ಲಾದೇಶ ಮೂಲದ ಅಮೆರಿಕದ ಪ್ರಜೆ ಅಖ್ತರುಜಮಾನ್ ಈ ಹತ್ಯೆಯ ಮಾಸ್ಟರ್‌ಮೈಂಡ್ ಎಂದು ಹವಾಲ್ದಾರ್ ಬಹಿರಂಗಪಡಿಸಿದ್ದಾನೆ. ಅಖ್ತರುಜಮಾನ್ ಆದೇಶದಂತೆ ನಾಲ್ಕು ಮಂದಿ ಇತರೆ ಬಾಂಗ್ಲಾ ಪ್ರಜೆಗಳ ಜತೆ ಸೇರಿ ಸಂಸದನನ್ನು ಕೊಂದಿರುವುದಾಗಿ ಹವಾಲ್ದಾರ್ ತಿಳಿಸಿದ್ದಾನೆ.
ಅನ್ವರುಲ್ ಅವರ ಹತ್ಯೆ ನಂತರದ ಕೃತ್ಯಗಳು ಎದೆನಡುಗಿಸುವಂತಿದೆ. ಅನ್ವರುಲ್ ಅವರನ್ನು ಕೊಂದ ಬಳಿಕ, ತಮ್ಮ ಗುಂಪು ಅವರ ದೇಹದ ಚರ್ಮವನ್ನು ಸುಲಿದು, ಎಲ್ಲ ಮಾಂಸವನ್ನು ಹೊರಗೆ ತೆಗೆದಿತ್ತು. ಅವರ ಗುರುತು ಸಿಗುವ ಯಾವ ಸಾಧ್ಯತೆಯೂ ಇಲ್ಲದಂತೆ ಮಾಡಲು ಕತ್ತರಿಸಲಾಗಿತ್ತು. ಅವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಲಾಗಿತ್ತು. ಮೂಳೆಗಳನ್ನು ಸಹ ಸಣ್ಣ ತುಂಡುಗಳನ್ನಾಗಿ ಕತ್ತರಿಸಲಾಗಿತ್ತು. ಈ ಪ್ಯಾಕೆಟ್‌ಗಳನ್ನು ಅಲ್ಲಿಂದ ಸಾಗಿಸಿ, ಕೋಲ್ಕತಾ ನಗರದ ತುಂಬಾ ಎಸೆಯಲಾಗಿತ್ತು ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.
ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ ಪ್ಲಾಸ್ಟಿಕ್ ಚೀಲಗಳು ;
ಬಾಂಗ್ಲಾ ಸಂಸದನನ್ನು ಮೊದಲು ಉಸಿರುಗಟ್ಟಿಸಿ ಕೊಂದು, ಬಳಿಕ ದೇಹವನ್ನು ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯೂ ಟೌನ್‌ನ ಖಾಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ರಕ್ತದ ಕಲೆಗಳನ್ನು ಕಂಡಿದ್ದ ಪೊಲೀಸರು, ಒಳಗೆ ಅನೇಕ ಪ್ಲಾಸ್ಟಿಕ್ ತೊಟ್ಟೆಗಳನ್ನು ವಶಪಡಿಸಿಕೊಂಡಿದ್ದರು. ಇವು ದೇಹದ ಭಾಗಗಳನ್ನು ಎಸೆಯಲು ಬಳಸಿದ್ದ ಬ್ಯಾಗ್‌ಗಳು ಎನ್ನಲಾಗಿದೆ. ಈಗ ಶವದ ಭಾಗಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಬಂಧಿತ ಆರೋಪಿ ಹವಾಲ್ದಾರ್, ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯವನಾಗಿದ್ದು, ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ. ಮುಂಬಯಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಆತ, ಎರಡು ತಿಂಗಳ ಹಿಂದೆ ಕೋಲ್ಕತಾಕ್ಕೆ ಬಂದಿದ್ದ. ಏರ್‌ಪೋರ್ಟ್ ಸಮೀಪದ ಹೋಟೆಲ್ ಒಂದರಲ್ಲಿ ವಾಸವಿದ್ದ. ಅನ್ವರುಲ್ ಹತ್ಯೆಗೆ ಅಖ್ತರುಜಮಾನ್ ಐದು ಕೋಟಿ ರೂ ವ್ಯಯಿಸಿದ್ದು, ಅದರಲ್ಲಿ ಸ್ವಲ್ಪ ಭಾಗ ಹವಾಲ್ದಾರ್‌ಗೆ ಸಿಕ್ಕಿತ್ತು.


ಮೋಹಕ್ಕೆ ಬಿದ್ದಿದ್ದ ಸಂಸದ;
ಕೊಲೆಯಾದ ಸಂಸದ ಅನ್ವರುಲ್ ಅಜೀಂ ಹನಿಟ್ರ್ಯಾಪ್‌ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೇ 13ರಂದು ಬಾಂಗ್ಲಾದೇಶದ ಶಿಲಾಂತಿ ರಹಮಾನ್ ಎಂಬ ಯುವತಿ ಸಂಸದ ಅನ್ವರುಲ್ ಅಜೀಂ ಜೊತೆ ಕೋಲ್ಕತ್ತಾಗೆ ಆಗಮಿಸಿದ್ದರು. ಶಿಲಾಂತಿಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡು ಮತ್ತಿಬ್ಬರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶಿಲಾಂತಿ ಮೋಹಕ್ಕೆ ಬಿದ್ದಿದ್ದ ಸಂಸದ ಅನ್ವರುಲ್ ಅಜೀಂ ಕೋಲ್ಕತ್ತಾಗೆ ಆಗಮಿಸಿದ್ದ ಎನ್ನಲಾಗಿದೆ. ಕೋಲ್ಕತ್ತದ ನ್ಯೂ ಟೌನ್ ಫ್ಲಾಟ್‌ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರ ಹಿಂದೆ ಇದೆ ಫ್ಲಾಟ್‌ಗೆ ವ್ಯಕ್ತಿಯೊಬ್ಬ ಹೋಗಿದ್ದ. ಮಾರನೇ ದಿನ ಅನಾರ್ ಅವರು ಹೊರಗೆ ಬರುವುದು ಸಿಸಿಟಿವಿಯಲ್ಲಿ ಕಂಡಿಲ್ಲ. ನಂತರ ಮಹಿಳೆ ಹಾಗೂ ಆ ವ್ಯಕ್ತಿ ಅಷ್ಟೇ ದೊಡ್ಡ ಬ್ಯಾಗ್ ಸಮೇತ ಹೊರಗೆ ಬಂದಿರುವುದು ಕಂಡಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದೀಗ ಹನಿ ಟ್ರ್ಯಾಪ್ ಮಾಡಲು ಬಳಸಿದ್ದ ಮಹಿಳೆಯನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಮುಖ ಆರೋಪಿ ಅಖ್ತರುಝಾಮಾನ್ ಶಾಹಿನ್ ನ ಗೆಳತಿ ಎಂದು ಬಾಂಗ್ಲಾದೇಶ ಪೊಲೀಸ್ ಮೂಲಗಳು ಇಂಡಿಯಾ ಟುಡೇಗೆ ಸುದ್ದಿ ಸಂಸ್ಥೆಗೆ ತಿಳಿಸಿವೆ.
Bangladesh MP Anwarul Azim Anar honey trapped before murder in Kolkata, body skinned and chopped. As per the details revealed so far, the Bangladeshi MP's body was skinned and chopped up in an apartment after his murder and disposed of in several plastic packets across the city. Meanwhile, officials in West Bengal have arrested 24-year-old Jihad Hawladar, a Bangladeshi national, from the bordering North 24-Paraganas district.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 11:42 am
HK News Desk
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm