ಬ್ರೇಕಿಂಗ್ ನ್ಯೂಸ್
14-05-24 10:45 pm Bangalore Correspondent ಕ್ರೈಂ
ಬೆಂಗಳೂರು, ಮೇ.14: ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಹೆಸರಲ್ಲಿ ಹಣಕ್ಕಾಗಿ ಪೀಡಿಸಿ ಮೂವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ವಿಕೃತ ರೀತಿಯಲ್ಲಿ ಚಿತ್ರಹಿಂಸೆ ನೀಡಿದ ಘಟನೆ ಕಲಬುರ್ಗಿಯಲ್ಲಿ ನಡೆದಿದ್ದು ಚಿತ್ರಹಿಂಸೆಯ ವಿಡಿಯೋ ವೈರಲ್ ಆಗಿದೆ. ಕೃತ್ಯ ಎಸಗಿದ ಏಳು ಮಂದಿಯನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಸೇಡಂ ತಾಲ್ಲೂಕಿನ ದೇವನೂರಿನ ಅರ್ಜುನಪ್ಪ ಹಣಮಂತ, ಮೊಹಮದ್ ಸಮೀರುದ್ದೀನ್ ಮತ್ತು ಹೀರಾಪುರದ ಅಬ್ದುಲ್ ರೆಹಮಾನ್ ಪೀಡನೆಗೆ ಒಳಗಾದವರು. ಕೋಣೆಯಲ್ಲಿ ಕೂಡಿಹಾಕಿ, ಇವರ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಪೀಡಿಸುವ ಕೃತ್ಯ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು ಈ ವೇಳೆ ಪೊಲೀಸ್ ಪೇದೆಯೂ ಅಲ್ಲಿರುವುದು ಕಂಡುಬಂದಿದೆ.


ಅರ್ಜುನಪ್ಪ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರಾಟ ಮಾಡುತ್ತಿದ್ದ. ಪರಿಚಯಸ್ಥ ರಮೇಶ ದೊಡ್ಡಮನಿ ಎಂಬಾತ ಕಾರು ಕೊಡಿಸುವಂತೆ ಅರ್ಜನಪ್ಪನಿಗೆ ಕೇಳಿದ್ದು ಅದರಂತೆ ₹ 6 ಲಕ್ಷದ ಕಾರು ಇದೆಯೆಂದು ಹೇಳಿ ಡೀಲ್ ಕುದುರಿಸಿದ್ದ. ಮೇ 4ರಂದು ಚಿತ್ತಾಪುರದಿಂದ ಕಾರಿನಲ್ಲಿ ಹೊರಟ ಅರ್ಜುನಪ್ಪ ಮತ್ತು ರಮೇಶ, ಕಾರು ಮಾಲೀಕ ಅಬ್ದುಲ್ ರೆಹಮಾನ್ ಹೇಳಿದ ಜಾಗಕ್ಕೆ ತೆರಳಿದ್ದರು. ಮೂವರನ್ನು ಬಳಿಕ ನಾಗನಹಳ್ಳಿ ಕ್ರಾಸ್‌ನಿಂದ ಹಾಗರಗಾ ರಸ್ತೆಯ ಮನೆಯೊಂದಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ. ಕಾರಿನಿಂದ ಎಳೆದೊಯ್ದು ಮನೆಯ ಕೋಣೆಯಲ್ಲಿ ಕೂಡಿ ಹಾಕಿ, 10ರಿಂದ 12 ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ.
ನಾವು ಹೇಳಿದಂತೆ ಕೇಳದೆ ಇದ್ದರೆ, ಇಲ್ಲಿಂದ ಜೀವಸಹಿತ ಹೋಗುವುದಿಲ್ಲ. ಒಬ್ಬೊಬ್ಬರು ರೂ. 10 ಲಕ್ಷ ಕೊಡಬೇಕು ಎಂದು ಹೆದರಿಸಿ ಬ್ಯಾಟರಿಯಿಂದ ಗುಪ್ತಾಂಗಕ್ಕೆ ಶಾಕ್ ಕೊಟ್ಟಿದ್ದಾರೆ. ಮತೀನ್ ಸೇರಿ ಇತರೆ 12 ಮಂದಿ ಬಡಿಗೆಗಳಿಂದ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದು ಜತೆಗೆ ಸಿಗರೇಟ್‌ನಿಂದ ಸುಟ್ಟು ಗಾಯ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಇಮ್ರಾನ್ ಪಟೇಲ್ ಮೆಹಬೂಬ್ ಪಟೇಲ್, ಮಹ್ಮದ್ ಮತೀನ್ ಅಲಿಯಾಸ್ ಸ್ಟೀಲ್ ಮತೀನ್ ಅಬ್ದುಲ್ ಸಲೀಮ್, ಮಹ್ಮದ್ ಜಿಯಾ ಉಲ್ ಹುಸೇನ್ ಅಬ್ದುಲ್ ಫಜಲ್, ಮಹ್ಮದ್ ಅಬಜಲ್ ಶೇಕ್ ಅನ್ವರ್ ಶೇಖ್, ಹುಸೇನ್ ಶೇಖ್ ಮೌಲಾಶೇಖ್, ರಮೇಶ ಭೀಮಣ್ಣ ದೊಡ್ಡಮನಿ, ಸಾಗರ ಶ್ರೀಮಂತ ಕೋಳಿ ಎಂಬ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
7 arrested for torturing three men giving electric shock to private parts in Kalaburagi. Seven people were arrested here for torturing a second-hand car dealer and two others by giving electric shock to their private parts, police said on Saturday. Police arrested Imran Patel, Mohammed Mateen, Ramesh Doddamani, Sagar Koli and their accomplices.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm