ಬ್ರೇಕಿಂಗ್ ನ್ಯೂಸ್
13-05-24 07:15 pm Giridhar, Mangaluru Correspondent ಕ್ರೈಂ
ಮಂಗಳೂರು, ಮೇ 13: ಕುಳಿತಲ್ಲೇ ಪಾರ್ಟ್ ಟೈಮ್ ಜಾಬ್ ಮಾಡಿ ಹಣ ಗಳಿಸಿ ಅಂತ ಮೆಸೇಜ್ ಬರುವುದನ್ನು ನೋಡಿರಬಹುದು. ಆನ್ಲೈನಲ್ಲಿ ಪಾರ್ಟ್ ಟೈಮ್ ಜಾಬ್, ಸ್ಟಾಕ್ ಮಾರ್ಕೆಟಲ್ಲಿ ಹಣ ಹೂಡಿಕೆ ಬಗ್ಗೆ ತಿಳಿಸುತ್ತೇವೆಂದು ಹೇಳಿ ನಮ್ಮ ಮೊಬೈಲ್ ನಂಬರನ್ನು ನೇರವಾಗಿ ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರಿಸುತ್ತಾರೆ. ಆಮೂಲಕ ಕುಳಿತಲ್ಲೇ ನಮ್ಮನ್ನು ಬಕ್ರಾ ಮಾಡುವ ಸೈಬರ್ ವಂಚಕರ ಜಾಲಕ್ಕೆ ಬಿದ್ದೀರಿ, ನಮ್ಮ ತಲೆಯನ್ನೇ ಬೋಳಿಸುತ್ತಾರೆ.
Llfe community Media Search Y 261 ಎನ್ನುವ ಹೆಸರಿನಲ್ಲಿ ಆನ್ಲೈನ್ ಪಾರ್ಟ್ ಟೈಮ್ ಕೆಲಸ ಇದೆಯೆಂದು ಹೇಳಿ ನೂರಾರು ಮೊಬೈಲ್ ಸಂಖ್ಯೆಗಳನ್ನು ನೇರವಾಗಿ ಸೇರಿಸುತ್ತಾರೆ. ನಮಗೆ ಅರಿವೇ ಇಲ್ಲದಂತೆ ವಾಟ್ಸಪ್ ಗ್ರೂಪ್ ಒಂದಕ್ಕೆ ನಾವು ಸೇರ್ಪಡೆ ಆಗಿರುತ್ತೇವೆ. ಅಲ್ಲಿ ಸಿಂಪಲ್ ಆಗಿರೋ ಟಾಸ್ಕ್ ಅನ್ನು ಕೊಡುತ್ತಾರೆ. ಮುಂಬೈ, ದೆಹಲಿಯಲ್ಲಿರುವ ಯಾವುದೋ ಹೊಟೇಲ್, ರೆಸ್ಟೋರೆಂಟಿನ ಅಡ್ರಸನ್ನು ಗೂಗಲ್ ಮ್ಯಾಪ್ ಕೊಟ್ಟು ಅದರ ಲಿಂಕ್ ಹಾಕುತ್ತಾರೆ. ಗೂಗಲ್ ರೇಟಿಂಗನ್ನು 5 ಸ್ಟಾರ್ ಮಾಡಲು ನಿಮಗೆ ಟಾಸ್ಕ್ ಇರುತ್ತದೆ. ಟಾಸ್ಕ್ ಲಿಂಕ್ ಒತ್ತಿ ಸ್ಟಾರ್ ಸಿಗುವ ಹಾಗೆ ಮಾಡಿದರೆ, ಸಾಕು. ನಿಮಗೆ ಇಂತಿಷ್ಟು ಹಣ ಹಾಕುತ್ತೇವೆ ಎಂದು ಹೇಳುತ್ತಾರೆ. ಈ ರೀತಿ ಮಾಡಿ ದಿನದಲ್ಲಿ 1500, 2000 ಗಳಿಸಬಹುದು ಎಂದು ನಂಬಿಸುತ್ತಾರೆ.
ಕೆಲವೊಂದು ಗ್ರೂಪುಗಳಲ್ಲಿ 500ಕ್ಕೂ ಹೆಚ್ಚು ಮೊಬೈಲ್ ನಂಬರನ್ನು ಸೇರಿಸಿರುತ್ತಾರೆ. ಬೆಳಗ್ಗಿನಿಂದ ಸಂಜೆಯ ವರೆಗೂ ಈ ಗ್ರೂಪ್ ಚಾಲ್ತಿಯಲ್ಲಿ ಇರುತ್ತದೆ. ನಾವು ಟಾಸ್ಕ್ ಪೂರೈಸಿದ ಬಳಿಕ ಅದರ ಸ್ಕ್ರೀನ್ ಶಾಟನ್ನು ಗ್ರೂಪಿಗೆ ಹಾಕಬೇಕಾಗುತ್ತದೆ. ಬ್ಯಾಂಕ್ ಖಾತೆಗೆ ಹಣ ಕಳಿಸುತ್ತೇವೆಂದು ಹೇಳಿ, ಅದರಲ್ಲಿರುವ ಅಡ್ಮಿನ್ ಗೆ ಖಾತೆಯ ಮಾಹಿತಿ ಕಳಿಸಲು ಹೇಳುತ್ತಾರೆ. ನೀವು ಬ್ಯಾಂಕ್ ಖಾತೆಯ ಡಿಟೈಲ್ ಹಾಕಿದ ಬಳಿಕ ಅವರು ಹಣ ಹಾಕಿದ ಬಗ್ಗೆ ಓಟಿಪಿ ಕೇಳಿ ಪಡೆದು ನಮ್ಮನ್ನೇ ದೋಚುತ್ತಾರೆ. ಇದೆಲ್ಲವೂ ಇಂಗ್ಲಿಷ್ ನಲ್ಲಿಯೇ ವ್ಯವಹಾರವಾಗುತ್ತಿದ್ದು, ಯುವತಿಯರ ಹೆಸರಲ್ಲಿ ಗ್ರೂಪಲ್ಲಿ ಮೆಸೇಜ್ ಬರುತ್ತದೆ. ನಾವು ಈ ಕಂಪನಿಯ ಎಚ್ ಆರ್ ಆಗಿದ್ದು, ನಿಮ್ಮನ್ನು ಗ್ರೂಪ್ ಸೇರಿಸಿದ್ದಕ್ಕೆ ಕ್ಷಮೆ ಇರಲಿ ಎಂಬುದರಿಂದ ಹಿಡಿದು ಒಟ್ಟು ವಿಚಾರವನ್ನು ಹೇಳಿಕೊಳ್ಳುತ್ತಾರೆ.
ಗ್ರೂಪಿನಲ್ಲಿ ಆಗಾಗ ತಮಗೆ ಹಣ ಬಂದ ಬಗ್ಗೆ ಕೆಲವರು ಸ್ಕ್ರೀನ್ ಶಾಟ್ ಹಾಕುತ್ತಾರೆ. ಆಮೂಲಕ ಹಣ ಬರುತ್ತೆ ಎಂಬುದನ್ನು ಇತರರಿಗೆ ನಂಬಿಸಲು ಮುಂದಾಗುತ್ತಾರೆ. ಹೆಚ್ಚಾಗಿ ವಿದ್ಯಾವಂತರೇ ಇಲ್ಲಿ ಬಕ್ರಾಗಳಾಗುತ್ತಿದ್ದು, ತಮ್ಮ ಖಾತೆಯಲ್ಲಿರುವ ಹಣವನ್ನೇ ಕಳಕೊಳ್ಳುತ್ತಾರೆ. ಉಡುಪಿಯಲ್ಲಿ ಒಬ್ಬರು ಮಹಿಳೆ ಇದೇ ರೀತಿ ಪಾರ್ಟ್ ಟೈಮ್ ಜಾಬ್ ಆಫರ್ ನಂಬಿ, ಬರೋಬ್ಬರಿ 7.75 ಲಕ್ಷ ರೂಪಾಯಿ ಹಣ ಕಳಕೊಂಡಿದ್ದು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ರೀತಿಯ ವಂಚನೆ ರಾಜ್ಯದೆಲ್ಲೆಡೆ ನಡೆಯುತ್ತಿದ್ದು, ಮೊಬೈಲ್ ನಂಬರನ್ನು ಪಡೆದು ನಮ್ಮನ್ನು ಕುಳಿತಲ್ಲೇ ಮೂರ್ಖರನ್ನಾಗಿಸುತ್ತಿದ್ದಾರೆ.
ಇದೇ ರೀತಿ ಸ್ಟಾಕ್ ಮಾರ್ಕೆಟ್ ಹೆಸರಲ್ಲಿಯೂ ನಮ್ಮನ್ನು ಬಕ್ರಾಗಳಾಗಿಸುವ ಗ್ರೂಪ್ ಕ್ರಿಯೇಟ್ ಮಾಡುತ್ತಾರೆ. ಸ್ಟಾಕ್ ಮಾರ್ಕೆಟಲ್ಲಿ ಇರುವಂಥವರನ್ನೇ ಇವರ ಗ್ರೂಪಿಗೆ ಸೇರಿಸುತ್ತಾರೆ, ಅದಕ್ಕೊಂದು ಲಿಂಕ್ ಹಾಕಿ, ತಾವು ಹೇಳಿದಂತೆ ಏಪ್ ಡೌನ್ಲೋಡ್ ಮಾಡುವಂತೆ ಹೇಳುತ್ತಾರೆ. ಒಂದೇ ದಿನದಲ್ಲಿ ಡಬಲ್, ತ್ರಿಬಲ್ ಆದಾಯ ತೆಗೆಸಿಕೊಡುತ್ತೇವೆಂದು ನಂಬಿಸುತ್ತಾರೆ, ಏಪ್ ನಂಬಿ ಹಣ ಹೂಡಿಕೆ ಮಾಡಿದರೆ, ಆ ಹಣ ಹಿಂತಿರುಗಿ ಸಿಗುವುದಿಲ್ಲ. ಈ ರೀತಿಯ ವಂಚನೆಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಹಳಷ್ಟು ಮಂದಿ ಬಲಿಯಾಗಿದ್ದಾರೆ. ಸೈಬರ್ ವಂಚಕರು ಹಣ ಮಾಡುವುದಕ್ಕೆ ಹೊಸ ಮಾದರಿಯನ್ನು ಕಂಡುಕೊಂಡಿದ್ದು ಇಲ್ಲಿ ಸ್ಪಷ್ಟ.
ಮೊಬೈಲ್ ನಂಬರ್ ಸಿಗುವುದು ಹೇಗೆ ?
ನಾವು ದೊಡ್ಡ ಕಂಪನಿಯ ಮಾಲ್ಗಗಳಿಗೆ ಹೋದರೆ, ಅಲ್ಲಿ ಎಕ್ಸಿಕ್ಯುಟಿವ್ ಗಳು ಬಿಲ್ ಮಾಡುವಾಗ ಮೊಬೈಲ್ ನಂಬರ್ ಕೇಳುತ್ತಾರೆ. ಏನಾದ್ರೂ ಆಫರ್ ಇದ್ದರೆ ನಿಮಗೆ ನೇರವಾಗಿ ಮೆಸೇಜ್ ಬರುತ್ತೆ ಎಂದು ಹೇಳಿ ನಂಬರನ್ನು ಬಿಲ್ ಜೊತೆಗೆ ಏಡ್ ಮಾಡುತ್ತಾರೆ. ಆದರೆ, ಈ ರೀತಿ ಪಡೆದ ನಂಬರ್ ಗಳನ್ನು ಕಂಪನಿಯ ಒಳಗಿದ್ದವರು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆಂಬ ಅನುಮಾನ ಇದೆ. ಒಂದು ಪ್ರದೇಶದ ಲಕ್ಷಾಂತರ ಜನರ ಮೊಬೈಲ್ ನಂಬರ್ ಗಳನ್ನು ಡಾಟಾ ರೂಪದಲ್ಲಿ ಮಾರಾಟ ಮಾಡುವುದು ಹೈಫೈ ವಹಿವಾಟು. ಅದು ಒಳ್ಳೆದು, ಕೆಟ್ಟದು ಎರಡಕ್ಕೂ ಬಳಕೆಯಾಗುತ್ತದೆ. ಇದೇ ರೀತಿಯಲ್ಲಿ ಮಂಗಳೂರು, ಬೆಂಗಳೂರು ಹೀಗೆ ಪ್ರಮುಖ ನಗರ ಪ್ರದೇಶದ ಜನರ ಮೊಬೈಲ್ ಸಂಖ್ಯೆಗಳು ಯಾರದ್ದೋ ಪಾಲಾಗುತ್ತವೆ. ಅದನ್ನು ಸೈಬರ್ ವಂಚಕರು ಕಂಪನಿಗಳ ಹೆಸರಲ್ಲಿ ಮಾಲ್ಗಳಿಂದ ಪಡೆದು ತಮ್ಮ ಕುಕೃತ್ಯಗಳಿಗೆ ಬಳಸುತ್ತಾರೆ.
Mangalore fraud, Online WhatsApp group to cheat people in the name of online job and investment. Life community media search Y 261 is faking people in the name of online jobs offers and stock investment. Mangalore cyber police should look into this matter.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 11:19 am
Mangalore Correspondent
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm