Bangalore Crime, Fraud, House Rent: ಫ್ಲ್ಯಾಟ್‌ ಖರೀದಿಸಿ ಲಕ್ಷಾಂತರ ರೂ. ಸಾಲ ; ಬ್ಯಾಂಕ್ ಸಾಲವಿದ್ದ ಮನೆಯನ್ನೇ ಲೀಸಿಗೆ ಕೊಟ್ಟು ವಂಚನೆ, ಬೆಂಗಳೂರಿನಲ್ಲಿ ಹೈದರಾಬಾದ್ ಉದ್ಯಮಿಯ ದೋಖಾ 

29-04-24 11:50 am       Bangalore Correspondent   ಕ್ರೈಂ

ಫ್ಲ್ಯಾಟ್‌ ಮೇಲೆ ಲಕ್ಷಾಂತರ ರೂ. ಸಾಲ ಮಾಡಿದ್ದಲ್ಲದೆ, ಮರುಪಾವತಿ ಮಾಡದೆ ವಂಚಿಸಿದ್ದ ಮಾಲೀಕ, ಅದೇ ಫ್ಲ್ಯಾಟನ್ನು ಮತ್ತೊಬ್ಬರಿಗೆ 40 ಲಕ್ಷ ರೂ. ಬೆಲೆಗೆ ಲೀಸಿಗೆ ನೀಡಿ ಮತ್ತೊಂದು ವಂಚನೆ ಎಸಗಿದ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಎ.28: ಫ್ಲ್ಯಾಟ್‌ ಮೇಲೆ ಲಕ್ಷಾಂತರ ರೂ. ಸಾಲ ಮಾಡಿದ್ದಲ್ಲದೆ, ಮರುಪಾವತಿ ಮಾಡದೆ ವಂಚಿಸಿದ್ದ ಮಾಲೀಕ, ಅದೇ ಫ್ಲ್ಯಾಟನ್ನು ಮತ್ತೊಬ್ಬರಿಗೆ 40 ಲಕ್ಷ ರೂ. ಬೆಲೆಗೆ ಲೀಸಿಗೆ ನೀಡಿ ಮತ್ತೊಂದು ವಂಚನೆ ಎಸಗಿದ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೀಡಾದ ಲ್ಯಾಂಗ್‌ಫೋರ್ಡ್ ರಸ್ತೆಯ ರೋಹನ್ ಎಂಬವರು ವಂಚನೆಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ಕೋರ್ಟ್ ನಿರ್ದೇಶನದಂತೆ, ಫ್ಲ್ಯಾಟ್‌ ಮಾಲೀಕ ಆರೋಪಿ ಮೊಹಮ್ಮದ್ ಅಲೀಮುದ್ದೀನ್ (32) ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಹೈದರಾಬಾದ್‌ ಮೂಲದ ಉದ್ಯಮಿಯಾಗಿರುವ ಆರೋಪಿ ಅಲೀಮುದ್ದೀನ್, ಲ್ಯಾಂಗ್‌ಫೋರ್ಡ್‌ ರಸ್ತೆಯ ಬೈಡ್‌ ಸ್ಟ್ರೀಟ್‌ನಲ್ಲಿ ವಸತಿ ಸಮುಚ್ಚಯದಲ್ಲಿ ಮನೆ ಹೊಂದಿದ್ದರು. ಬಳಿಕ ಅದೇ ಫ್ಲ್ಯಾಟ್ ಅನ್ನು ಎಸ್ ಬಿಐ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದಿದ್ದರು. ಸಾಲದ ಕಂತನ್ನು ಸರಿಯಾಗಿ ಪಾವತಿ ಮಾಡುತ್ತಿರಲಿಲ್ಲ. ಇದರ ನಡುವಲ್ಲೇ ಫ್ಲ್ಯಾಟ್‌ ಅನ್ನು ರೋಹನ್ ಹಾಗೂ ಅವರ ಪತ್ನಿ ಹೆಸರಿಗೆ ಭೋಗ್ಯಕ್ಕೆ ನೀಡಿದ್ದರು. ಅವರಿಂದ ₹40 ಲಕ್ಷ ಪಡೆದಿದ್ದು ಈಗ ಬ್ಯಾಂಕ್ ನೋಟಿಸ್ ಬರುತ್ತಿದ್ದಂತೆ ಫ್ಲಾಟಿನ ನಿಜ ವಿಚಾರ ಗೊತ್ತಾಗಿದೆ. 

ಭೋಗ್ಯದ ಹಣ ಪಡೆದಿರುವ ಅಲೀಮುದ್ದೀನ್, ಬೆಂಗಳೂರು ನಗರ ಬಿಟ್ಟು ಪರಾರಿಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಬ್ಯಾಂಕ್ ಅಧಿಕಾರಿಗಳು, ಫ್ಲ್ಯಾಟ್‌ ಜಪ್ತಿ ಮಾಡಲು ಹಲವು ಬಾರಿ ನೋಟಿಸ್‌ ನೀಡಿದ್ದು ಅದಕ್ಕೆ ಅಲೀಮುದ್ದೀನ್ ಉತ್ತರ ನೀಡಿರಲಿಲ್ಲ. ಹೀಗಾಗಿ, ಆಸ್ತಿ ಜಪ್ತಿ ಮಾಡಲು ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದಿಂದ ಆದೇಶ ಪಡೆದಿರುವುದಾಗಿ ಗೊತ್ತಾಗಿದೆ.

ಮನೆಗೆ ಲಕ್ಷಾಂತರ ರೂ. ಸಾಲ ಬಾಕಿ ಇರುವ ಮಾಹಿತಿಯನ್ನು ಮುಚ್ಚಿಟ್ಟಿದ್ದ ಅಲೀಮುದ್ದೀನ್, ಭೋಗ್ಯದ ಹೆಸರಿನಲ್ಲಿ ಮತ್ತೆ ವಂಚಿಸಿರುವುದಾಗಿ ದೂರುದಾರರು ಆರೋಪಿಸಿದ್ದಾರೆ.

Businessman cheats couple by giving house on lease after cheating Bank of 40 lakhs loan in Bangalore.