ಬ್ರೇಕಿಂಗ್ ನ್ಯೂಸ್
02-03-24 02:43 pm Mangaluru Correspondent ಕ್ರೈಂ
ಮಂಗಳೂರು, ಮಾ.2: ವಿಟ್ಲ ಠಾಣೆ ವ್ಯಾಪ್ತಿಯ ಪುಣಚ ಗ್ರಾಮದ ಪೆರಿಯಾಲ್ತಡ್ಕ ಎಂಬಲ್ಲಿ ಚರ್ಚ್ ಪಾದ್ರಿಯೊಬ್ಬರು ವೃದ್ಧ ದಂಪತಿಯ ಮೇಲೆ ಮರದ ಸೋಂಟೆಯಿಂದ ಹಲ್ಲೆಗೈದ ಘಟನೆ ನಡೆದಿದ್ದು, ಇದರ ದೃಶ್ಯ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಪೆರಿಯಾಲ್ತಡ್ಕ ಕ್ರೈಸ್ಟ್ ಕಿಂಗ್ ಚರ್ಚ್ ಫಾದರ್ ನೆಲ್ಸನ್ ಓಲಿವೆರಾ ಅವರು ವೃದ್ಧ ದಂಪತಿಗೆ ಹಲ್ಲೆ ಮಾಡಿದವರು. ಚರ್ಚ್ ವ್ಯಾಪ್ತಿಯ ಮನೆಗಳಿಗೆ ಪ್ರತಿವರ್ಷ ಪಾದ್ರಿಗಳು ಭೇಟಿಯಾಗಿ ಸನ್ಮಾನ, ವಂತಿಗೆ ಪಡೆಯುವ ಕ್ರಮ ಇದೆ. ಅದೇ ರೀತಿ ಫೆ.29ರಂದು ವೃದ್ಧ ಗ್ರೆಗರಿ ಮತ್ತು ಫಿಲೋಮಿನಾ ದಂಪತಿಯಿದ್ದ ಮನೆಗೆ ಪಾದ್ರಿ ನೆಲ್ಸನ್ ಒಲಿವೆರಾ ಬಂದಿದ್ದರು. ಪಾದ್ರಿಯ ಜೊತೆಗೆ ವಾರ್ಡ್ ಗುರುಕಾರ್ ಅಲ್ಫೋನ್ಸ್ ಮೊಂತೇರೊ ಎಂಬವರು ಕೂಡ ಜೊತೆಗಿದ್ದರು.
ಫಾದರ್ ಬಂದಿದ್ದಾಗ ಗ್ರೆಗರಿಯವರು ಕೆಲವು ವಿಷಯದಲ್ಲಿ ಚರ್ಚ್ ಜೊತೆ ಮನಸ್ತಾಪ ಇದ್ದುದರಿಂದ ನಿಮ್ಮ ಆಶೀರ್ವಾದ ನಮಗೆ ಬೇಕಾಗಿಲ್ಲ. ಮನೆಗೆ ಬರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತಿಗೆ ಮಾತು ಬೆಳೆದು ಸ್ವತಃ ಪಾದ್ರಿಯೇ ವೃದ್ಧ ವ್ಯಕ್ತಿಯನ್ನು ಕುತ್ತಿಗೆಯಲ್ಲಿ ಹಿಡಿದು ಮನೆಯತ್ತ ದೂಡಿಕೊಂಡು ಬಂದಿದ್ದಾರೆ. ಅಲ್ಲದೆ, ಮರದ ಸೋಂಟೆಯಲ್ಲಿ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಅಡ್ಡ ಬಂದ ಪತ್ನಿ ಫಿಲೋಮಿನಾ ಅವರಿಗೂ ಕಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದಾರೆ. ಮನೆಯ ಒಳಗೆ ತಳ್ಳಿಕೊಂಡು ಹೋಗುತ್ತಿರುವ, ಎಳೆದಾಡುವ ವಿಡಿಯೋ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಥಳೀಯರು ಅದನ್ನು ವೈರಲ್ ಮಾಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದೆ ಪಾದ್ರಿಯೇ ವೃದ್ಧ ದಂಪತಿಯನ್ನು ಮನವೊಲಿಸಿ ಕೇಸು ಆಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆಗೀಡಾದ ವೃದ್ಧ ದಂಪತಿ ವಿಟ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫಾ.ನೆಲ್ಸನ್ ಒಲಿವೆರಾ ಮೂಲತಃ ಉಡುಪಿ ಜಿಲ್ಲೆಯ ಕಲ್ಯಾಣಪುರದವರಾಗಿದ್ದು, ಚರ್ಚ್ ಪಾದ್ರಿಯಾಗಿದ್ದುಕೊಂಡು ತಮ್ಮದೇ ಸಮುದಾಯದ ವೃದ್ಧ ದಂಪತಿಗೆ ಹಲ್ಲೆ ನಡೆಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆಯೂ ಪಾದ್ರಿ ವಿರುದ್ಧ ಗೂಂಡಾ ವರ್ತನೆ ಆರೋಪ ಕೇಳಿ ಬಂದಿದೆ. ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ವೃದ್ಧ ದಂಪತಿಯ ಹೇಳಿಕೆ ಪಡೆದು ಪೊಲೀಸರು ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ.
#NelsonOlivera, a #Mangalore #Catholicpriest, viciously beats an elderly couple of the #Church in #Vitla. A video of this has gone viral on social media. Priest Nelson Olivera is shown aggressively attacking the elderly couple and kicking the elderly woman #BREAKINGNEWS pic.twitter.com/QrSI1a7uHq
— Headline Karnataka (@hknewsonline) March 2, 2024
Nelson Olivera, a Mangalore Catholic priest, viciously beats an elderly couple of Christ the King Church, Periyalthadka, Manela, Vitla. A video of this has gone viral on social media. Priest Nelson Olivera is shown aggressively attacking the elderly couple and kicking the elderly woman who rescues her husband.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm