ಬ್ರೇಕಿಂಗ್ ನ್ಯೂಸ್
18-02-24 01:44 pm HK News Desk ಕ್ರೈಂ
ಬಿಹಾರ, ಫೆ 18: ಪ್ರೇಮ ವಿವಾಹವು ಯುವತಿಯನ್ನು ಮಾತ್ರವಲ್ಲದೆ ಆಕೆಯ ತಂದೆ ಮತ್ತು ಸಹೋದರನನ್ನು ಬಲಿ ಪಡೆದಿದೆ. ತಂದೆ, ಮಗ ಮತ್ತು ಮಗಳು ಗಂಡನ ಮನೆಗೆ ಹೋದಾಗ ಅವರ ಮಾವ ಹತ್ಯೆ ಮಾಡಿದ್ದಾರೆ.
ಮೃತರನ್ನು ಶ್ರೀನಗರ ನಿವಾಸಿಗಳಾದ 60 ವರ್ಷದ ಉಮೇಶ್ ಯಾದವ್, 25 ವರ್ಷದ ರಾಜೇಶ್ ಯಾದವ್ ಮತ್ತು ಮಗಳು 21 ವರ್ಷದ ನೀಲು ಕುಮಾರಿ ಎಂದು ಗುರುತಿಸಲಾಗಿದೆ.
ಘಟನೆ ಬೆಳಕಿಗೆ ಬಂದ ನಂತರ ಬೇಗುಸರಾಯ್ ಎಸ್ಪಿ ಮನೀಶ್, ಡಿಎಸ್ಪಿ ಬಿನಯ್ ಕುಮಾರ್ ರೈ, ಠಾಣಾ ಪ್ರಭಾರಿ ದೀಪಕ್ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಗಳು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ:
ಹುಡುಗಿ ಮತ್ತು ಹುಡುಗ ಪರಸ್ಪರ ಪ್ರೀತಿಸುತ್ತಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಇವರಿಬ್ಬರು ಸಂಬಂಧಿಕರ ಕೈಗೆ ಸಿಕ್ಕಿಬಿದ್ದಿದ್ದರು. ಆಗ ಇಬ್ಬರ ಒಪ್ಪಿಗೆ ಮೇರೆಗೆ ದೇವಸ್ಥಾನದಲ್ಲಿ ಮದುವೆ ಮಾಡಲಾಗಿತ್ತು. ಆದರೆ ನಂತರ ಯುವಕನ ಕುಟುಂಬಸ್ಥರು ಯುವತಿಯನ್ನು ಮನೆ ತುಂಬಿಸಿಕೊಳ್ಳಲು ನಿರಾಕರಿಸಿದರು. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಈ ವಿವಾದ ಕೊನೆಗೂ ರಕ್ತಸಿಕ್ತ ಸಂಘರ್ಷಕ್ಕೆ ತಿರುಗಿತು.
ನಮ್ಮ ಸಹೋದರಿಯದು ಪ್ರೇಮ ವಿವಾಹವಾಗಿತ್ತು. ಆದ್ರೆ ನಮ್ಮ ಸಹೋದರಿಯನ್ನು ಮನೆ ತುಂಬಿಸಿಕೊಳ್ಳಲು ಒಪ್ಪದ ಗಂಡನ ಮನೆಯ ಕುಟುಂಬಸ್ಥರು 15 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಒತ್ತಡವಿತ್ತು. ಅದೇ ರೀತಿ ನಾವು ಹೇಗೋ 15 ಲಕ್ಷ ರೂಪಾಯಿ ಹೊಂದಿಸಿ ನೀಡಲು ನಿರ್ಧರಿಸಿದ್ದೇವು. ಸಹೋದರಿಯನ್ನು ಮನೆ ತುಂಬಿಸಿಕೊಳ್ಳುವಂತೆ ಮನವಿ ಮಾಡಲು ಹಣದ ಸಮೇತ ತಂದೆ, ಇನ್ನೊಬ್ಬ ಸಹೋದರ ತೆರಳಿದ್ದಾಗ ಮೂವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥ ಬಿಪಿನ್ ಯಾದವ್ ಆರೋಪಿಸಿದ್ದಾರೆ.
ನಮ್ಮ ಸಹೋದರಿಗೆ ತನ್ನ ಗಂಡನೊಂದಿಗೆ ಬಾಳಬೇಕೆಂಬ ಆಸೆಯಿತ್ತು. ಆದ್ರೆ ಅದು ಈಡೇರಲಿಲ್ಲ. ಈ ಕೊಲೆ ಪ್ರಕರಣದಲ್ಲಿ ನಮ್ಮ ಸಹೋದರಿಯ ಮಾವ ಮತ್ತು ಆಕೆಯ ಪತಿ ಸೇರಿದಂತೆ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆ.
ಈ ಬಗ್ಗೆ ಎಸ್ಪಿ ಮನೀಶ್ ಪ್ರತಿಕ್ರಿಯಿಸಿ, ಸ್ಥಳದಿಂದ ಮೂರು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಮೃತ ಮಹಿಳೆಗೆ ಸುಮಾರು ಎರಡು ವರ್ಷದ ಹಿಂದೆ ವಿವಾಹವಾಗಿತ್ತು, ಸೊಸೆಯನ್ನು ಗಂಡನ ಕುಟುಂಬಸ್ಥರು ಒಪ್ಪಿಕೊಳ್ಳದ ಕಾರಣ ಮೂವರು ಇಲ್ಲಿಗೆ ಬಂದಿದ್ದರು. ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇನ್ನೂ ಒಬ್ಬರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
A 25-year-old woman and her father and brother were shot dead allegedly by her father-in-law in Bihar's Begusarai district on Saturday evening, police said. The incident took place in Bishnupur Ahuk village in Sahebpur Kamal police station area.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm