ಬ್ರೇಕಿಂಗ್ ನ್ಯೂಸ್
31-01-24 10:50 pm HK News Desk ಕ್ರೈಂ
ಬೆಳಗಾವಿ, ಜ 31: ತನ್ನನ್ನು ಒಂಟಿಯಾಗಿ ಬಿಟ್ಟು ಬೇರೊಬ್ಬ ಪುರುಷನೊಂದಿಗೆ ಓಡಿಹೋಗಿದ್ದಕ್ಕೆ ಆಕ್ರೋಶಗೊಂಡ ಗಂಡ ತನ್ನ ಮಾಜಿ ಪತ್ನಿ ಮತ್ತು ಆಕೆಯ ಹೊಸ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೊಕಟ್ನೂರು ಗ್ರಾಮದ ಯೆಲ್ಲಮ್ಮವಾಡಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕೊಲೆಯಾದ ಜೋಡಿಯನ್ನು ಅಥಣಿ ಪಟ್ಟಣದ ಕೊಕಟ್ನೂರು ಗ್ರಾಮದ ನಿವಾಸಿಗಳಾದ ಯಾಸಿನ್ ಬಾಗೋಡಿ(21) ಮತ್ತು ಹೀನಾ ಕೌಸರ್ (19) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೊಕಟ್ನೂರು ಗ್ರಾಮದ ತೌಫಿಕ್ ಖ್ಯಾದಿ ಎಂದು ಗುರುತಿಸಲಾಗಿದ್ದು, ಬುಧವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಹೀನಾ ಕೌಸರ್ ಮತ್ತು ಆರೋಪಿ ತೌಫಿಕ್ ಖ್ಯಾದಿ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಅದೇ ಗ್ರಾಮದ ಯಾಸಿನ್ ಬಾಗೋಡಿ ಹಾಗೂ ಆರೋಪಿ ತೌಫಿಕ್‌ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹೀನಾ ಕೌಸರ್ ಕೆಲ ತಿಂಗಳ ಹಿಂದೆ ಆತನೊಂದಿಗೆ ಓಡಿಹೋಗಿ 2023ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದಳು.
ಶಾಕಿಂಗ್ ಏನೆಂದರೆ ತೌಫಿಕ್, ತನ್ನ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ಮೃತ ಹೀನಾ ಮತ್ತು ಯಾಸಿನ್ ಡಿಸೆಂಬರ್ 2023 ರಲ್ಲಿ ವಿವಾಹವಾಗಿದ್ದರು ಮತ್ತು ಸೋಮವಾರ(ಜ. 29) ಗ್ರಾಮಕ್ಕೆ ಮರಳಿದ್ದರು.
ತನ್ನನ್ನು ಬಿಟ್ಟು ಬೇರೊಬ್ಬನೊಂದಿಗೆ ಹೊಸ ಜೀವನ ಆರಂಭಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಆರೋಪಿ ತೌಫಿಕ್, ಹೀನಾ ಮತ್ತು ಯಾಸಿನ್ ಅವರ ಮೇಲೆ ಹರಿತವಾದ ಕುಡುಗೋಲಿನಿಂದ ಹಲವು ಬಾರಿ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ತೌಫಿಕ್ ಅವರನ್ನು ತಡೆಯಲು ಯತ್ನಿಸಿದ ಅಮೀನ್ ಬಾಗೋಡಿ ಮತ್ತು ಮುಶಿಫ್ ಮುಲ್ಲಾ ಅವರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಐಗಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇಲ್ಲಿ ಮದುವೆ ವಿಚ್ಛೇದನ ವಿಚಾರ ಕೊಲೆಗೆ ಕಾರಣವಾಗಿದೆ ಎಂಬುದು ಪ್ರಾಥಮಿಕ ಮಾಹಿತಿ. ಆರೋಪಿಯನ್ನು ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಯಾವುದರಿಂದ ಕೊಲೆ ಮಾಡಲಾಗಿದೆ ಎಂಬುದಕ್ಕೆ ಸಂಪೂರ್ಣ ತನಿಖೆಯಿಂದಲೇ ಗೊತ್ತಾಗಬೇಕು. ಪ್ರಕರಣ ತನಿಖಾ ಹಂತದಲ್ಲಿರುವಾಗ ಹೆಚ್ಚಿನ ಮಾಹಿತಿಯನ್ನು ನೀಡುವುದಕ್ಕೆ ಬರುವುದಿಲ್ಲ. ಆದಷ್ಟು ಬೇಗನೇ ಸಂಪೂರ್ಣ ತನಿಖೆ ಮುಗಿಸಿ ಮಾಹಿತಿ ನೀಡಲಾಗುವುದೆಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೊಲೆ ನಡೆಯುವ ಸಂದರ್ಭದಲ್ಲಿದ್ದ ಪ್ರತ್ಯಕ್ಷದರ್ಶಿ ಮಲ್ಲಿಕಾರ್ಜುನ ಮಾಳಿ ಮಾತನಾಡಿ, ಆರೋಪಿ ತೌಫಿಕ್ ಕ್ಯಾಡಿ ಹಾಗೂ ಕೊಲೆಯಾದ ಯಾಸಿನ್ ಬಾಗೋಡೆ ಸ್ನೇಹಿತರು. ನಮ್ಮ ಮನೆಯ ಹಿಂದೆ ಮುಂದೆ ಅವರ ನಿವಾಸಗಳಿವೆ. ಅವರಿಬ್ಬರೂ ಕಳೆದ ನಾಲ್ಕೈದು ವರ್ಷಗಳಿಂದ ಸ್ನೇಹಿತರೆ ಆಗಿರುವುದರಿಂದ ನಾಲ್ಕು ವರ್ಷದ ಹಿಂದೆ ತೌಫಿಕ್ ಕ್ಯಾಡಿ ಜೊತೆ ಹೀನಾಕೌಸರ್ ಮದುವೆಯನ್ನು ಮಾಡಲಾಗಿತ್ತು. ಆದರೆ ಸ್ನೇಹಿತನ ಹೆಂಡತಿ ಜೊತೆಗೆ ಯಾಸಿನ್ ಪ್ರೇಮ ಬೆಳೆಸಿಕೊಂಡು ಸುತ್ತಾಡುತ್ತಿದ್ದರು. ತೌಫಿಕ್ಗೆ ವಿಷಯ ಗೊತ್ತಾಗಿ ಹೀನಾಕೌಸರ್ಗೆ ವಿಚ್ಛೇದನ ನೀಡಿದ್ದ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಯಾಸಿನ್ ಹೀನಾಕೌಸರ್ ಮದುವೆ ನಡೆದಿತ್ತು ಎಂದು ತಿಳಿಸಿದರು.
ತೌಫಿಕ್ಗೆ ದ್ವೇಷ ಇರುವುದರಿಂದ ಮಂಗಳವಾರ ಸಂಜೆ ಈ ರೀತಿ ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಬಿಡಿಸಿಕೊಳ್ಳಲು ನಾವು ಎಷ್ಟೇ ಪ್ರಯತ್ನ ಮಾಡಿದ್ರು ಇಬ್ಬರನ್ನು ಕೊಲೆ ಮಾಡಿದ. ಕೊಲೆ ತಪ್ಪಿಸಲು ಅಮಿನಾಬಾಯಿ ಬಾಗೋಡೆ ಹಾಗೂ ಮುಸ್ತಫಾ ಮುಲ್ಲಾ ಮುಂದೆ ಬರುತ್ತಿದ್ದಂತೆ ಅವರ ಮೇಲೆ ತೌಫಿಕ್ ಹಲ್ಲೆ ಮಾಡಿದ್ದಾನೆ. ಸದ್ಯ ಅವರನ್ನು ಕೂಡ ಮೀರಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐದು ನಿಮಿಷದಲ್ಲಿ ಈ ದುರಂತ ನಡೆದೋಯ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Double Murder, husband kills wife anr her fiance in Belagavi. A 28-year-old man is said to have killed his former wife and her fiancé in Kokatnur Yallammawadi village near Athani of Belagavi district on Tuesday. The crime came to light after some farmers found the bodies on the outskirts of the village. Taufik Ahmed surrendered to the police on Wednesday, saying he committed the double murder
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm