ಬ್ರೇಕಿಂಗ್ ನ್ಯೂಸ್
18-01-24 04:32 pm Mangalore Correspondent ಕ್ರೈಂ
ಉಳ್ಳಾಲ, ಜ.18: ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಪುರದ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದ್ದು ಆರೋಪಿ ಸಮೇತ ಅಪಾರ ಪ್ರಮಾಣದ ಗ್ಯಾಸ್ ಸಿಲಿಂಡರ್ ಗಳನ್ನ ವಶಪಡಿಸಿದ್ದಲ್ಲದೆ, ಅಕ್ರಮವಾಗಿ ಮಾರಾಟ ನಡೆಸುತ್ತಿದ್ದ ಲೀಟರ್ ಗಟ್ಟಲೆ ಪೆಟ್ರೋಲನ್ನೂ ವಶಪಡಿಸಿಕೊಂಡಿದೆ.
ಉಳ್ಳಾಲ ಕೋಟೆಪುರದ ಬರಾಖ ಫ್ಯಾಕ್ಟರಿ ಮುಂಭಾಗದ ರಸ್ತೆ ಬದಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಎಸಿಪಿ ಧನ್ಯ ನಾಯಕ್ ಮತ್ತು ತಂಡ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ದಾಸ್ತಾನು ಇರಿಸಿದ್ದ ಗ್ಯಾಸ್ ಸಿಲಿಂಡರ್ ಮತ್ತು ಸುಮಾರು 280 ಲೀಟರ್ ಪೆಟ್ರೋಲನ್ನ ಜಪ್ತಿಗೊಳಿಸಿದ್ದು ಆರೋಪಿ ಅಬ್ದುಲ್ ಅಲ್ತಾಫ್ (49) ಎಂಬಾತನನ್ನ ಬಂಧಿಸಿದೆ.
ಕೋಟೆಪುರದ ರಸ್ತೆ ಬದಿಯ ಮನೆಯಲ್ಲೇ ತೋರ್ಪಡಿಕೆಗೆ ಗುಜರಿ ಅಂಗಡಿ ನಡೆಸುತ್ತಿದ್ದ ಆರೋಪಿ ಅಲ್ತಾಫ್ ಮನೆಯೊಳಗಿನ ವಿಶಾಲ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನ ದಾಸ್ತಾನು ಇರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ಇಷ್ಟಲ್ಲದೆ ಸ್ಥಳೀಯ ನಾಡ ದೋಣಿಗಾರರಿಗೆ ದುಪ್ಪಟ್ಟು ದರದಲ್ಲಿ ಪೆಟ್ರೋಲನ್ನ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿಯನ್ವಯ ಎಸಿಪಿ ಧನ್ಯ ನಾಯಕ್ ಸಮೇತ ಸಿಬ್ಬಂದಿಗಳಾದ ರಿಜಿ, ಸಾಜು ನಾಯರ್, ಮಹೇಶ್, ಅಕ್ಬರ್ ನೇತೃತ್ವದ ತಂಡ ಗುರುವಾರ ದಿಢೀರ್ ದಾಳಿ ನಡೆಸಿದೆ. ಸುಮಾರು 55 ಕ್ಕೂ ಮಿಕ್ಕಿದ ಗ್ಯಾಸ್ ಸಿಲಿಂಡರ್ ಮತ್ತು 280 ಲೀಟರ್ ನಷ್ಟು ಅಕ್ರಮ ದಾಸ್ತಾನು ಇರಿಸಿದ್ದ ಪೆಟ್ರೋಲನ್ನ ವಶ ಪಡಿಸಿದ್ದು ,ಆರೋಪಿ ಅಲ್ತಾಪ್ ನನ್ನು ಬಂಧಿಸಿದ್ದಾರೆ.
ತಮ್ಮ ಠಾಣೆಯ ಕೂಗಳತೆಯಲ್ಲಿ ರಸ್ತೆ ಬದಿಯಲ್ಲೇ ನಡೆಯುತ್ತಿರುವ ಅಕ್ರಮಗಳು ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಅವರ ಆಪ್ತ ಸಲಹೆಗಾರರಿಗೆ ತಿಳಿಯದ ಸಂಗತಿ ಏನೂ ಅಲ್ಲ. ಎಲ್ಲವೂ ತಿಳಿದು ಪಾಲಿಗೆ ಬಂದದನ್ನ ಪಂಚಾಮೃತವನ್ನಾಗಿ ಸ್ವೀಕರಿಸುತ್ತಿದ್ದ ಉಳ್ಳಾಲ ಇನ್ಸ್ ಪೆಕ್ಟರ್ ಅವರ ಗುಪ್ತ ಮಾಹಿತಿದಾರರು ಇಂದಿನ ಎಸಿಪಿ ದಾಳಿಯಿಂದ ದಂಗಾಗಿ ಕರಟಿದ ಮುಖದಿಂದ ದಾಳಿಯ ಗುಂಪಿನ ಫೋಟೋಕ್ಕೆ ಪೋಸು ನೀಡಿದ್ದಾರೆ.
Mangalore ACP Dhanya N Nayak and team raids Illegal gas refilling hub at Kotepura in Ullal.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm