ಬ್ರೇಕಿಂಗ್ ನ್ಯೂಸ್
03-11-20 03:47 pm Mangalore Correspondent ಕ್ರೈಂ
ಬಂಟ್ವಾಳ, ನವೆಂಬರ್ 03: ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ಮೂಲದ ಪ್ರತೀಕ್ ಮತ್ತು ಮಂಗಳೂರಿನ ಜಯೇಶ್ ಯಾನೆ ಸಚ್ಚು ಬಂಧಿತರು. ಹತ್ಯೆ ಪ್ರಕರಣದಲ್ಲಿ ಇವರು, ಪ್ರಮುಖ ಆರೋಪಿಗಳು ಬಚಾವಾಗಲು ಸಹಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಸತೀಶ್ ಕುಲಾಲ್ ಮತ್ತು ಗಿರೀಶನಿಗೆ ಕೊಲೆಗೈದ ಬಳಿಕ ಬೆಳ್ತಂಗಡಿಯಲ್ಲಿ ಉಳಿದುಕೊಳ್ಳಲು ಮತ್ತು ವಾಹನದ ವ್ಯವಸ್ಥೆಯನ್ನು ಪ್ರತೀಕ್ ಮಾಡಿದ್ದು ಅದಕ್ಕಾಗಿ 2.5 ಲಕ್ಷ ರೂ. ಹಣ ಪಡೆದಿದ್ದ. ಇನ್ನು ಮಂಗಳೂರಿನ ಕೊಂಚಾಡಿ ನಿವಾಸಿ ಜಯೇಶ್, ಪ್ರಮುಖ ಆರೋಪಿ ಆಕಾಶಭವನ್ ಶರಣ್ ಅಣತಿಯಂತೆ ಸುಪಾರಿ ಹಣವನ್ನು ಆರೋಪಿ ಪ್ರದೀಪನಿಂದ ಪಡೆದು ಕೊಲೆಗೆ ವ್ಯವಸ್ಥೆ ಮಾಡಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಪ್ರತೀಕ್ ಕೋಟ್ಯಾನ್ ಈ ಹಿಂದೆ ಮಂಗಳೂರು ಮತ್ತು ಉಡುಪಿಯಲ್ಲಿ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದು ಬಳಿಕ ಬೆಳ್ತಂಗಡಿಯಲ್ಲಿ ಮಾಧ್ಯಮದ ವ್ಯಕ್ತಿಯೆಂದು ಹೇಳಿ ಓಡಾಡಿಕೊಂಡಿದ್ದ. ಇತ್ತೀಚೆಗೆ ಅಕ್ರಮ ಕಲ್ಲು ಕೋರೆ ಪ್ರಕರಣದಲ್ಲೂ ಬಂಧಿಸಲ್ಪಟ್ಟಿದ್ದ. ಜಯೇಶ್, ಮಂಗಳೂರಿನಲ್ಲಿ ಶ್ರೀರಾಮ ಸೇನೆ ಸಂಘಟನೆಯಲ್ಲಿ ಗುರುತಿಸಿದ್ದು ಮಂಗಳೂರು ನಗರ ಘಟಕದ ಅಧ್ಯಕ್ಷನಾಗಿದ್ದ. ಕೆಲವು ಕಾರ್ಯಕ್ರಮಗಳಲ್ಲಿ ಮತ್ತು ಪೋಸ್ಟರ್ ಗಳಲ್ಲಿ ಆತನ ಫೋಟೊ ಕಾಣಿಸಿಕೊಂಡಿತ್ತು.




ಈಗಾಗ್ಲೇ ಬಂಟ್ವಾಳ ಪೊಲೀಸರು ಪ್ರಕರಣ ಸಂಬಂಧಿಸಿ 9 ಮಂದಿಯನ್ನು ಬಂಧಿಸಿತ್ತು. ಇವರಿಬ್ಬರನ್ನು ನಾಲ್ಕು ದಿನಗಳ ಹಿಂದೆಯೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈಗ ಅಧಿಕೃತವಾಗಿ ಬಂಧಿಸಿದ್ದು ಒಟ್ಟು ಬಂಧಿತರ ಸಂಖ್ಯೆ 11 ಕ್ಕೇರಿದೆ.
In connection to the Murder of Surendra Bantwal, the police have arrested two more persons. The arrested are identified as Pratheek Kotyan from Belthanagady and Jayesh Sachu from Mangalore. Total number of arrest has raised to 11.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm