ಬ್ರೇಕಿಂಗ್ ನ್ಯೂಸ್
26-11-22 10:05 pm Mangalore Correspondent ಕ್ರೈಂ
ಸುಳ್ಯ, ನ.26 : ಪತ್ನಿಯನ್ನು ಕೊಲೆಗೈದು ಶವವನ್ನು ಗೋಣಿಚೀಲದಲ್ಲಿ ತುಂಬಿಸಿಟ್ಟು ಓಡಿ ಹೋಗಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸುಳ್ಯದ ಬೀರಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಲದ ಇಮ್ರಾನ್ ಶೇಖ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿಸಿಟ್ಟು ಪರಾರಿಯಾಗಿದ್ದ. ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ತನ್ನ ಪತ್ನಿ ಗರ್ಭಿಣಿಯಾಗಿದ್ದು ಆಕೆಯನ್ನು ಊರಲ್ಲಿ ಬಿಟ್ಟು ಬರುವುದಾಗಿ ಹೊಟೇಲ್ ಮಾಲಕರಲ್ಲಿ ಹೇಳಿದ್ದ. ಆದರೆ ಈ ನಡುವೆ, ಇಮ್ರಾನ್ ಹೇಳದೆ ಕೇಳದೆ ನಾಪತ್ತೆಯಾಗಿದ್ದ. ಆತನ ಮನೆಯಲ್ಲಿ ಪತ್ನಿ ಇದ್ದ ಬಗ್ಗೆ ತಿಳಿದಿದ್ದರಿಂದ ಹೊಟೇಲಿನ ಇತರ ಕೆಲಸಗಾರರು ಮನೆ ಮಾಲೀಕರಿಗೆ ಕೇಳಿದ್ದರು. ಆದರೆ ಮನೆಗೆ ಬೀಗ ಹಾಕಲಾಗಿತ್ತು.
ಬಳಿಕ ಪೊಲೀಸರಿಗೆ ತಿಳಿಸಲಾಗಿ ಮನೆ ಬೀಗ ಒಡೆದು ನೋಡಿದಾಗ ಒಳಭಾಗದಲ್ಲಿ ಗೋಣಿಚೀಲದಲ್ಲಿ ಯುವತಿಯ ಶವ ಸಿಕ್ಕಿತ್ತು. ಟಾಯ್ಲೆಟ್ ಕೋಣೆಯಲ್ಲಿ ಗೋಣಿ ಚೀಲ ಇಡಲಾಗಿತ್ತು. ಪೊಲೀಸರು ಮತ್ತು ಸ್ಥಳೀಯರು ಇಮ್ರಾನ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅದರಂತೆ, ಸುಳ್ಯ ಪೊಲೀಸರು ಆರೋಪಿ ಇಮ್ರಾನ್ ಶೇಖ್ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆತ ಪಶ್ಚಿಮ ಬಂಗಾಳ ತೆರಳಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿನ ಪೊಲೀಸರ ಸಹಾಯ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿಟ್ಟು ಪರಾರಿಯಾಗಿದ್ದ ಇಮ್ರಾನ್ ತನ್ನ ಊರಿಗೆ ಹೋಗಿದ್ದ ಎನ್ನಲಾಗಿದೆ. ತನಿಖೆ ನಡೆಸಿದ ಸುಳ್ಯ ಪೊಲೀಸರು ಅಲ್ಲಿನ ಪೋಲೀಸರ ಸಹಾಯ ಪಡೆದು ಬಂಧಿಸಿ, ಸುಳ್ಯಕ್ಕೆ ಕರೆತಂದಿರುವುದಾಗಿ ತಿಳಿದು ಬಂದಿದೆ. ಎಂಟು ತಿಂಗಳ ಹಿಂದೆ ಪತ್ನಿಯೆಂದು ಹೇಳಿ ಯುವತಿಯನ್ನು ಪಶ್ಚಿಮ ಬಂಗಾಳದಿಂದ ಕರೆತಂದಿದ್ದ. ಯಾಕಾಗಿ ಕೊಲೆ ಮಾಡಿದ್ದಾನೆ, ಆಕೆ ಗರ್ಭಿಣಿಯಾಗಿದ್ದಳೇ ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕು.
Police arrested a man, accused of killing his wife and stuffing her body into a gunny bag before escaping from the spot. Imran was working in a hotel in Sullia and used to reside in a rented house at Beeramangala for the past seven months. Few days ago, he told his employer that he is leaving to native place. Imran Sheikh, native of West Bengal is the accused arrested by Sullia police with the help of police of West Bengal. He was brought to Sullia on November 24.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am