ಬ್ರೇಕಿಂಗ್ ನ್ಯೂಸ್
14-10-22 07:38 pm Bangalore Correspondent ಕ್ರೈಂ
ಬೆಂಗಳೂರು, ಅ.14 : ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬೆನ್ನಲ್ಲೇ ಮೊದಲ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ. ಮದುವೆಯ ಭರವಸೆ ನೀಡಿ ಉತ್ತರ ಪ್ರದೇಶ ಮೂಲದ ಹಿಂದು ಯುವತಿಯನ್ನು ಮುಸ್ಲಿಂ ಆಗಿ ಮತಾಂತರಿಸಿದ ಬಗ್ಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಗೋರಖ್ ಪುರ ಮೂಲದ 18 ವರ್ಷದ ಯುವತಿಯನ್ನು ಮತಾಂತರ ಮಾಡಿರುವ ಆರೋಪದಲ್ಲಿ ಸೈಯದ್ ಮುಯೀನ್ ಎಂಬ ಯುವಕನ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಯುವತಿಯ ಕುಟುಂಬ 15 ವರ್ಷಗಳಿಂದ ಯಶವಂತಪುರ ವ್ಯಾಪ್ತಿಯ ಬಿಕೆ ನಗರದಲ್ಲಿ ವಾಸವಿದ್ದು ತಂದೆ ಪೇಟಿಂಗ್ ಕೆಲಸ ಮಾಡಿಕೊಂಡಿದ್ರೆ ತಾಯಿ ಗೃಹಿಣಿ. ಇಬ್ಬರು ಸಹೋದರಿಯರು, ಓರ್ವ ಸಹೋದರನೊಂದಿಗೆ ವಾಸವಿದ್ದಳು. ಮಗಳು ಅನ್ಯ ಧರ್ಮೀಯ ಯುವಕನನ್ನ ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಪೋಷಕರು ಆರು ತಿಂಗಳ ಹಿಂದೆ ಆಕೆಗೆ ಬುದ್ಧಿಯನ್ನೂ ಹೇಳಿದ್ದರು.
ಆದರೆ ಅಕ್ಟೋಬರ್ 5ರಂದು ಯುವತಿ ಕಾಣೆಯಾಗಿದ್ದು ಅಂಗಡಿಗೆ ಹೋಗಿ ಬರುವುದಾಗಿ ಹೋದವಳು ವಾಪಸ್ ಬಂದಿರಲಿಲ್ಲ. ಯಶವಂತಪುರ ಠಾಣೆಯಲ್ಲಿ ಹೆತ್ತವರು ನಾಪತ್ತೆ ದೂರು ದಾಖಲಿಸಿದ್ದರು. ವಾರದ ಬಳಿಕ ಯುವತಿ ಬುರ್ಖಾ ಧರಿಸಿ ಯುವಕನ ಜೊತೆಗೆ ಠಾಣೆಗೆ ಬಂದಿದ್ದಳು. ಯುವತಿ ಮತಾಂತರಗೊಂಡಿದ್ದು ಆಕೆಯನ್ನ ಮದುವೆಯಾಗುವುದಾಗಿ ಮುಯೀನ್ ಠಾಣೆಗೆ ಕರೆತಂದಿದ್ದ.
ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರು ಮುಯೀನ್ ವಿರುದ್ಧ ಮದುವೆಯ ಭರವಸೆ ನೀಡಿ ಮತಾಂತರಗೊಳಿಸಿದ್ದಾಗಿ ದೂರು ನೀಡಿದ್ದಾರೆ. ಯುವತಿಯ ಮನೆಯ ಪಕ್ಕದ ಏರಿಯಾದಲ್ಲಿ ವಾಸ ಮಾಡುತ್ತಿದ್ದ ಮುಯೀನ್, ಆಕೆಯನ್ನು ಪ್ರೀತಿಸಿದ್ದು ಮಾದುವೆಯಾಗಬೇಕಿದ್ರೆ ಮತಾಂತರ ಆಗಬೇಕೆಂದು ಒತ್ತಡ ಹೇರಿದ್ದ. ಮುಯೀನ್ ಮಾತು ನಂಬಿ ಆತನ ಜೊತೆ ಹೋಗಿದ್ದ ಯುವತಿ ಬುರ್ಖಾ ಧರಿಸಿ ಬಂದಿದ್ದಳು. ಮುಯೀನ್ ಸಲಹೆಯಂತೆ ಮಸೀದಿಯೊಂದರಲ್ಲಿ ಯುವತಿಯನ್ನು ಮತಾಂತರ ಮಾಡಲಾಗಿತ್ತು. ಸದ್ಯ ಯಶವಂತಪುರ ಠಾಣೆಯಲ್ಲಿ ಮತಾಂತರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಎಂದರೇನು..?
ಕರ್ನಾಟಕ ಮತಾಂತರ ನಿಷೇಧ ಕಾಯ್ದೆ ಪ್ರಕಾರ, ಯಾವುದೇ ವ್ಯಕ್ತಿ ಸ್ವಇಚ್ಛೆಯಿಂದ ಮತಾಂತರವಾಗಬಹುದು. ಆದರೆ ಮತಾಂತರ ಪ್ರಕ್ರಿಯೆ ಕಾನೂನು ಬದ್ಧವಾಗಿರಬೇಕು. ಮತಾಂತರವಾಗುವ ವ್ಯಕ್ತಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಡಿ.ಸಿ ಆ ವ್ಯಕ್ತಿಯ ಪೋಷಕರು / ಆಪ್ತರ ಹೇಳಿಕೆ ಪಡೆಯುತ್ತಾರೆ. ಇದಾದ ಬಳಿಕ 30 ದಿನಗಳ ಗಡವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಮತಾಂತರವಾಗುತಿದ್ದರೆ ಡಿಸಿ ಅನುಮತಿ ನೀಡುತ್ತಾರೆ. ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಕಾನೂನು ಕ್ರಮಕ್ಕೆ ಅವಕಾಶವಿದೆ. ಮತಾಂತರಕ್ಕೆ ಸಹಾಯ ಮಾಡುವ ಎಲ್ಲ ವ್ಯಕ್ತಿಗಳ ಮೇಲೂ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕಾಗುತ್ತದೆ. ಸದ್ಯ ಇದೇ ಕಾಯ್ದೆಯಡಿ ಮುಯೀನ್ ಹಾಗೂ ಆತನಿಗೆ ಸಹಾಯ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
First case under Anti conversion act in Bangalore, FIR registered against Muslim youth for coverting Hindu girl in pretext of marriage.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm