ಬ್ರೇಕಿಂಗ್ ನ್ಯೂಸ್
13-10-22 10:05 pm Mangalore Correspondent ಕ್ರೈಂ
ಮಂಗಳೂರು, ಅ.13 : ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ Bright Packaging Pvt Ltd ಕಂಪೆನಿಗೆ ಗುಜರಾತ್ ನಿಂದ ಬರುತ್ತಿದ್ದ ಕೋಟ್ಯಾಂತರ ಮೌಲ್ಯದ ಪ್ಲಾಸ್ಟಿಕ್ ಕಚ್ಛಾ ಸಾಮಾಗ್ರಿಗಳನ್ನು ಕಳವುಗೈದು ಮಾರಾಟ ಮಾಡಿ ಕಂಪೆನಿಗೆ ಮೋಸ ಮಾಡಿದ ಕಂಪೆನಿಯ ನೌಕರ ಹಾಗೂ ಇತರ ಮೂರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಪಣಂಬೂರು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಬೈಕಂಪಾಡಿಯ ಬ್ರೈಟ್ ಪ್ಯಾಕೆಜಿಂಗ್ ಪ್ರೈ.ಲಿ. ಎಂಬ ಕಂಪೆನಿಯಲ್ಲಿ Polypropylene Woven Sacks ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ಬೇಕಾದ Polypropylene ಕಚ್ಚಾ ಸರಕುಗಳನ್ನು ಗುಜರಾತ್ ನಿಂದ ಕಂಪನಿಗೆ ತರಿಸಲಾಗುತ್ತಿದ್ದು, ಕಂಪನಿಗೆ ಲಾರಿಯಲ್ಲಿ ಬರುತ್ತಿದ್ದ Polypropylene ಕಚ್ಚಾ ಸರಕುಗಳನ್ನು ಕಂಪನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಲಾಲ್ ಎಂಬಾತ ಕಂಪನಿಯಲ್ಲಿ ಸ್ವೀಕೃತಿಗೊಂಡಂತೆ ಪೋರ್ಜರಿ ದಾಖಲೆ ಸೃಷ್ಟಿಸಿ ಕಂಪನಿಗೆ ತಿಳಿಯದಂತೆ ಇತರರೊಂದಿಗೆ ಸೇರಿಕೊಂಡು 2019ನೇ ಡಿಸೆಂಬರ್ ತಿಂಗಳಿನಿಂದ 2022 ಜನವರಿ ತಿಂಗಳ ವರೆಗೆ ಕೋಟ್ಯಾಂತರ ಮೌಲ್ಯದ 36 ಟ್ರಕ್ ಗಳಲ್ಲಿ ಬಂದ Polypropylene ಕಚ್ಚಾ ಸರಕುಗಳನ್ನು ಕಂಪನಿಗೆ ತಿಳಿಯದಂತೆ ಬೇರೆಡೆ ಸಾಗಿಸಿದ್ದ. ಕಳವುಗೈದ ಕಚ್ಚಾ ಸರಕುಗಳನ್ನು ಸ್ನೇಹಿತನಾದ ಅನಂತ ಸಾಗರ ಎಂಬಾತನಿಗೆ ನೀಡಿದ್ದು, ಕಚ್ಚಾ ಸರಕುಗಳನ್ನು ಅನಂತ ಸಾಗರ್ ಕೆಲಸ ಮಾಡುವ ಬೈಕಂಪಾಡಿಯ ವಿಧಿ ಎಂಟರ್ ಪ್ರೈಸಸ್ ನ ಹೆಸರಿನಲ್ಲಿ ನಕಲಿ ಬಿಲ್ಲುಗಳನ್ನು ತಯಾರಿಸಿ ಅದನ್ನು ಬೆಂಗಳೂರಿನ ಹೆಚ್ಎಸ್ ಪಾಲಿಮಾರ್ ನ ಕಿರಣ್ ಸಾಮಾನಿ ಎಂಬವರಿಗೆ ಮಾರಾಟ ಮಾಡಿರುತ್ತಾರೆ. ಆರೋಪಿಗಳು ಕೋಟ್ಯಂತರ ಮೌಲ್ಯದ 36 ಲೋಡ್ ಸುಮಾರು 840 ಟನ್ Polypropylene ಕಚ್ಚಾ ಸರಕುಗಳನ್ನು ಕಂಪನಿಗೆ ಗೊತ್ತಿಲ್ಲದೆ ಕಳವು ಮಾಡಿ ಅದನ್ನು ಮಾರಾಟ ಮಾಡಿ ವಂಚಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಪಣಂಬೂರು ಠಾಣೆ ಇನ್ಸ್ ಪೆಕ್ಟರ್ ಸೋಮಶೇಖರ ನೇತೃತ್ವದ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಬಿಜೈ ನಿವಾಸಿ ಮಹೇಶ್ ಕುಲಾಲ್ (38), ಶಕ್ತಿನಗರ ನಿವಾಸಿ ಅನಂತ ಸಾಗರ(39), ಕಡಂದಲೆ ಸಾಯಿ ಪ್ರಸಾದ್ (35), ಕಿರಣ್ ಸಾಮಾನಿ(53) ಎಂಬವರನ್ನು ದಸ್ತಗಿರಿ ಮಾಡಲಾಗಿದೆ. ಪ್ರಮುಖ ಆರೋಪಿ ಮಹೇಶ್ ಕುಲಾಲ್, Polypropylene ಕಚ್ಚಾ ಸರಕುಗಳನ್ನು ಕಳವುಗೈದು ಮಾರಾಟ ಮಾಡಿದ ಹಣದಲ್ಲಿ ಮಂಗಳೂರಿನ ವಿವಿಧ ಕಡೆಗಳಲ್ಲಿ ಜಮೀನು ಖರೀದಿಸಿದ್ದ. ಅಲ್ಲದೆ, ಐಶಾರಾಮಿ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಅಲ್ಲದೆ, ತನ್ನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಹಣ ಠೇವಣಿ ಇರಿಸಿ, ಇನ್ಸೂರೆನ್ಸ್, Share market ನಲ್ಲಿ ಹೂಡಿಕೆ ಮಾಡಿದ್ದ. ಅಲ್ಲದೆ, ಪತ್ನಿಯ ಹೆಸರಿನಲ್ಲಿ ನಗರದ 3 ಕಡೆಗಳಲ್ಲಿ ಐಷಾರಾಮಿ ಸೆಲೂನ್ ಗಳನ್ನು ಹೊಂದಿದ್ದಾನೆ. ಅನಂತ ಸಾಗರ್ ಐಷಾರಾಮಿ ಮನೆಯನ್ನು ಕಟ್ಟಿಸಿದ್ದಲ್ಲದೆ, ಬೆಲೆಬಾಳುವ ಕಾರನ್ನು ಖರೀದಿಸಿ ಐಶಾರಾಮಿ ಜೀವನ ಸಾಗಿಸುತ್ತಿದ್ದನು.
ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳ ವಶದಿಂದ ಮೊಬೈಲ್ ಪೋನ್ ಗಳು -6, ಲ್ಯಾಪ್ ಟಾಪ್ ಗಳು-4, ಕಂಪ್ಯೂಟರ್-1, ಮಹೇಶ್ ಕುಲಾಲ್ ನ ಹುಂಡೈ ಕಂಪೆನಿಯ ALCAZAR ಕಾರು-1. ರೆನಾಲ್ಡ್ ಕಾರು -1, ಅನಂತ ಸಾಗರ್ ನಿಂದ ಕಿಯಾ ಕಂಪನಿಯ Seltos ಕಾರು-1, ಟಾಟಾ ಕಂಪೆನಿಯ ಲಾರಿಯೊಂದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 74 ಲಕ್ಷ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
CCB police have arrested an employee of Bright Packaging Private Limited and three others for stealing raw materials used for plastics received from Gujarat worth crores of rupees and for cheating the company.The arrested are Mahesh Kulal (38), a resident of Kapikad, Mangaluru, Ananta Sagar (39), a resident of Shaktingar, Mangaluru, Sai Prasad (35), a resident of Kadandale, Mangaluru and Kiran Samani (53), a resident of Tamil Nadu.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm