ಬ್ರೇಕಿಂಗ್ ನ್ಯೂಸ್
07-10-22 10:00 pm Mangalore Correspondent ಕ್ರೈಂ
ಉಳ್ಳಾಲ, ಅ.7 : ನಿನ್ನೆ ಮಧ್ಯರಾತ್ರಿ ಉಳ್ಳಾಲದ ಫಿಶ್ ಮೀಲ್ ಫ್ಯಾಕ್ಟರಿಗೆ ಮರಗಳನ್ನ ಸಾಗಿಸುತ್ತಿದ್ದ ಎರಡು ಲಾರಿಗಳನ್ನ ಅರಣ್ಯಾಧಿಕಾರಿಗಳು ಉಳ್ಳಾಲ ಬೈಲಿನಲ್ಲಿ ತಡೆದು ವಶಕ್ಕೆ ಪಡೆದಿದ್ದರು. ಆದರೆ, ಈ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದಾಗ ಲಾರಿಗಳನ್ನ ರಾತ್ರಿಯೇ ಬಿಟ್ಟು ಕಳಿಸಿದ್ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರಲ್ಲಿ ಕೇಳಿದಾಗ, ಆರಂಭದಲ್ಲಿ ಯಾವ ಮರ, ಎಲ್ಲಿ ಸೀಜ್ ಮಾಡಿದ್ದು ಎಂದು ಮರು ಪ್ರಶ್ನೆ ಹಾಕಿದ್ದರು. ಫೋಟೊ ಸಹಿತಿ ಮಾಹಿತಿ ಕೇಳಿದಾಗ, ಉಳ್ಳಾಲ ಬೈಲಿನಲ್ಲಿ ವಶಕ್ಕೆ ಪಡೆದ ಎರಡು ಲಾರಿಗಳಲ್ಲಿ ಮ್ಯಾಂಜಿಯಮ್ ಮರಗಳನ್ನ ಸಾಗಿಸುತ್ತಿದ್ದರು. ಅಧಿಕಾರಿಗಳು ಅಕೇಶಿಯ ಮರಗಳೆಂದು ಭಾವಿಸಿ ಲಾರಿಗಳನ್ನ ವಶಕ್ಕೆ ಪಡೆದಿದ್ದರು. ಪಟ್ಟಾ ಜಾಗದಿಂದ ಮ್ಯಾಂಜಿಯಮ್ ಮರಗಳನ್ನ ಕಡಿದು ಸಾಗಿಸಲು ಇಲಾಖೆಯ ಯಾವುದೇ ಪರವಾನಿಗೆ, ಅನುಮತಿ ಬೇಕಾಗಿಲ್ಲ. ಸರಕಾರಿ ಜಾಗದಿಂದ ಕಡಿದು ಕೊಂಡೊಯ್ಯುತ್ತಿದ್ದರೆ ಮಾತ್ರ ಕ್ರಮ ಕೈಗೊಳ್ಳಬಹುದೆಂದು ಸ್ಪಷ್ಟನೆ ನೀಡಿದ್ದಾರೆ. ಉಳ್ಳಾಲದಲ್ಲಿ ವಶಕ್ಕೆ ಪಡೆದ ಮರಗಳು ಉಡುಪಿಯಿಂದ ಉಳ್ಳಾಲಕ್ಕೆ ತರಲಾಗಿದ್ದು ಪಟ್ಟಾ ಜಾಗದಿಂದ ತಂದಿದ್ದರು ಎಂದು ಅದರ ರೆಕಾರ್ಡ್ ಕೈಯಲ್ಲಿ ಇಟ್ಕೊಂಡ ರೀತಿ ತಿಳಿಸಿದ್ದಾರೆ.
ಆದರೆ ಎರಡು ಲಾರಿಗಳಲ್ಲಿ ಲೋಡ್ ಮಾಡಿದ್ದ ಮರಗಳ ಮೂಟೆಯಲ್ಲಿ ಯಾವೆಲ್ಲ ಮರಗಳಿವೆಯೆಂದು ಅಧಿಕಾರಿಗಳು ರಾತೋರಾತ್ರಿ ಏನೆಂದು ಪರಿಶೀಲನೆ ಮಾಡಿದ್ದರೋ ಗೊತ್ತಿಲ್ಲ. ಫಿಶ್ ಮೀಲ್ ಫ್ಯಾಕ್ಟರಿಗಳ ಬಾಯ್ಲರ್ ಗಳಿಗೆ ಸೌದೆಯನ್ನಾಗಿ ಬಳಸಲು ಮರಗಳನ್ನು ಉಪಯೋಗಿಸುತ್ತಾರೆ. ಅಲ್ಲಿದ್ದುದು ಮ್ಯಾಂಜಿಯಮ್ ಮರ, ಅದಕ್ಕೆ ಪರವಾನಗಿ ಬೇಡ ಎಂದಿದ್ದರೆ ಅಧಿಕಾರಿಗಳು ಜಪ್ತಿ ಮಾಡುತ್ತಿದ್ದರೇ ಎನ್ನುವ ಅನುಮಾನವೂ ಬರುತ್ತದೆ. ಅದಲ್ಲದೆ ಸೂಕ್ತ ದಾಖಲೆ ಇಟ್ಟುಕೊಂಡು ಸಕ್ರಮವಾಗಿಯೇ ಮರ ಸಾಗಿಸುತ್ತಿದ್ದರೆ ಮಧ್ಯರಾತ್ರಿಯಲ್ಲಿ ಎಸ್ಕಾರ್ಟ್ ವಾಹನಗಳನ್ನ ಬಳಸಿ ತರಬೇಕಿತ್ತೇ..? ಗುರುವಾರ ರಾತ್ರಿ ಅರಣ್ಯ ಅಧಿಕಾರಿಗಳು ಲಾರಿಯನ್ನ ಅಡ್ಡ ಹಾಕಿದಾಗ ಎಸ್ಕಾರ್ಟ್ ವಾಹನದಲ್ಲಿದ್ದವರು ಅಧಿಕಾರಿಗಳಲ್ಲಿ ಮಾತುಕತೆ ನಡೆಸುತ್ತಿದ್ದುದನ್ನು ನೋಡಿದ ಸಾರ್ವಜನಿಕರು ಮಾಧ್ಯಮಕ್ಕೆ ತಿಳಿಸಿದ್ದರು. ಆನಂತರ ಮಾಧ್ಯಮ ಪ್ರತಿನಿಧಿಯನ್ನ ಕಂಡು ಎರಡೂ ಲಾರಿಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಬೇರೆ ಮೂಲಗಳಿಂದ ಮಾಹಿತಿ ಕೇಳಿದಾಗ, ಯಾವುದೇ ರೀತಿಯ ಮರ ಸಾಗಿಸುವುದಕ್ಕೂ ಪರವಾನಗಿ ಬೇಕಂತೆ. ಇಲ್ಲಿ ಯಾವ ರೀತಿಯ ಲೋಪ ಆಗಿದ್ದರಿಂದ ಒಮ್ಮೆಗೆ ವಶಕ್ಕೆ ಪಡೆಯಲಾಗಿತ್ತು. ಆನಂತರ, ಯಾವ ಕಾರಣಕ್ಕೆ ಹಾಗೆಯೇ ಬಿಟ್ಟು ಕಳಿಸಲಾಗಿದೆ ಎನ್ನೋದು ಸಹಜ ಪ್ರಶ್ನೆ ಮತ್ತು ಇವರ ಕಾರ್ಯಾಚರಣೆ ಬಗ್ಗೆ ಸಂಶಯ ಮೂಡಿಸುವ ಸಂಗತಿ. ಅರಣ್ಯಾಧಿಕಾರಿಗಳು ತಮ್ಮ ಕರ್ತವ್ಯ ಬಿಟ್ಟು ಉಳಿದೆಲ್ಲವನ್ನೂ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದ್ದು ಇದೇ ಕಾರಣಕ್ಕಿರಬೇಕು.
Mid night raid by Forest officers in Ullal, stop loaded truck but leave them within hours in Mangalore.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm