ಬ್ರೇಕಿಂಗ್ ನ್ಯೂಸ್
02-10-22 04:01 pm HK News Desk ಕ್ರೈಂ
ಜಕಾರ್ತ, ಅ.2: ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದಾಗ ಎರಡು ತಂಡಗಳ ಅಭಿಮಾನಿಗಳು ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿದ್ದು ಈ ವೇಳೆ ಉಂಟಾದ ಕಾಲ್ತುಳಿತಕ್ಕೆ ಸಿಲುಕಿ 174 ಜನರು ಸಾವಿಗೀಡಾದ ಘಟನೆ ಇಂಡೋನೇಶ್ಯಾದಲ್ಲಿ ನಡೆದಿದೆ.
ಇಂಡೋನೇಶ್ಯಾದ ಪೂರ್ವ ಜಾವಾ ದ್ವೀಪಗಳಲ್ಲಿ ಕ್ಲಬ್ ತಂಡಗಳ ನಡುವೆ ಫುಟ್ಬಾಲ್ ಪಂದ್ಯ ನಡೆದಿತ್ತು. ಶನಿವಾರ ಮಲಾಂಗ್ ನಗರದಲ್ಲಿ ನಡೆದ ಪಂದ್ಯಾಟದಲ್ಲಿ ಒಂದು ತಂಡ ಸೋತಿದ್ದಕ್ಕೆ ಅದರ ಪರವಾಗಿದ್ದ ಅಭಿಮಾನಿಗಳು ಮೈದಾನಕ್ಕಿಳಿದು ಹಿಂಸಾಚಾರ ನಡೆಸಿದ್ದಾರೆ. ಈ ವೇಳೆ, ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಪಂದ್ಯಾಕೂಟಕ್ಕೆ ಸೇರಿದ್ದ ಸಾವಿರಾರು ಜನರು ಭೀತಿಯಿಂದ ಹೊರಗೆ ಓಡಲು ಯತ್ನಿಸಿದ್ದಾರೆ. ಪೊಲೀಸರು ಟಿಯರ್ ಗ್ಯಾಸ್ ದಾಳಿ ನಡೆಸಿದ್ದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಸ್ಟೇಡಿಯಂ ಒಳಗಿನಿಂದ ಹೊರಗೆ ಹೋಗಲು ತೆರೆದಿದ್ದ ಒಂದು ಬಾಗಿಲಿನಲ್ಲಿ ಜನರು ತಳ್ಳಾಟ ನಡೆಸಿದ್ದು ಈ ವೇಳೆ ಉಸಿರು ಕಟ್ಟಿ ಹಲವಾರು ಮಂದಿ ಸಾವು ಕಂಡಿದ್ದಾರೆ. ಇದೇ ವೇಳೆ, ಪೊಲೀಸರ ಮೇಲೆ ಅಭಿಮಾನಿಗಳು ದಾಳಿ ನಡೆಸಿದ್ದು ಪೊಲೀಸ್ ಕಾರನ್ನು ಪುಡಿಗಟ್ಟಿದ್ದಾರೆ. ಇಬ್ಬರು ಪೊಲೀಸರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ.
ಅರೆಮಾ ಮತ್ತು ಸುರಬಾಯಾ ತಂಡಗಳ ನಡುವೆ ಲೀಗ್ ಪಂದ್ಯ ನಡೆದಿದ್ದು ಅರೆಮಾ ತಂಡ ಸೋಲು ಕಂಡಿದ್ದರಿಂದ ಹಿಂಸಾಚಾರ ಶುರುವಾಗಿತ್ತು. ಆನಂತರ ಪೊಲೀಸರ ಮೇಲೆಯೇ ಆಕ್ರೋಶ ಭುಗಿಲೆದ್ದು ಭಾರೀ ಹಿಂಸಾಚಾರ ನಡೆದಿದೆ. ಮೊದಲಿಗೆ 129 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಭಾನುವಾರ ಸಾವನ್ನಪ್ಪಿದವರ ಸಂಖ್ಯೆ 174ಕ್ಕೇರಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಜನರು ಸ್ಟೇಡಿಯಂಗೆ ನುಗ್ಗಿ ಹಿಂಸಾಚಾರ ನಡೆಸುವುದು, ಜನರು ದಿಕ್ಕಾಪಾಲಾಗಿ ಓಡುವ ದೃಶ್ಯಗಳು, ಪೊಲೀಸರ ಹೊಡೆದಾಟ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಇಂಡೋನೇಶ್ಯಾ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಲ್ಲದೆ, ಕ್ಲಬ್ ತಂಡಗಳ ನಡುವಿನ ಲೀಗ್ ಪಂದ್ಯಾವಳಿಯನ್ನು ರದ್ದುಪಡಿಸಿದೆ.
NEW - Over 100 people were killed tonight in riots that broke out at a football match in Indonesia.pic.twitter.com/hGZEwQyHmL
— Disclose.tv (@disclosetv) October 1, 2022
At least 174 people were killed and 180 people sustained injuries at a football stadium in Indonesia after fans invaded the pitch, causing a stampede, forcing cops to respond with tear gas in East Java province, AFP reported. A clash broke out between supporters of Javanese clubs Arema and Persebaya Surabaya after the former were defeated at the match in Malang Regency, East Java.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm