ಬ್ರೇಕಿಂಗ್ ನ್ಯೂಸ್
28-09-22 10:40 am Mangalore Correspondent ಕ್ರೈಂ
ಮಂಗಳೂರು, ಸೆ.28 : ಸುರತ್ಕಲ್ ನಲ್ಲಿ ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ಹೆಸರಲ್ಲಿ ಹಣ ಪಡೆದು ನೂರಾರು ಮಂದಿ ಅಮಾಯಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರ್ಗವಿ ಫೈನಾನ್ಸ್ ಮಾಲಕ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾ ಭಟ್ ಅವರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ಹೆಸರಲ್ಲಿ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ಮತ್ತು ಪುತ್ರಿ ಪ್ರಿಯಾಂಕ ಭಟ್ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ಸುರತ್ಕಲ್ ನಿವಾಸಿ ದೀಪಕ್ ಕುಮಾರ್ ಶೆಟ್ಟಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಐದು ದಿನಗಳಿಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಕೋಟ್ಯಂತರ ವಂಚನೆ, ಹಣ ಕೇಳಿದರೆ ಬೆದರಿಕೆ
ವಂಚನೆಯ ಬಗ್ಗೆ ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ದೀಪಕ್ ಕುಮಾರ್ ಶೆಟ್ಟಿ, 15 ವರ್ಷಗಳಿಂದ ಭಾರ್ಗವಿ ಫೈನಾನ್ಸ್ ನಲ್ಲಿ ವ್ಯವಹಾರ ಮಾಡಿಕೊಂಡಿದ್ದೇನೆ. 10 ಲಕ್ಷ ರೂಪಾಯಿ ಮೌಲ್ಯದ ಚಿಟ್ ಫಂಡಿಗೆ ಸೇರಿದ್ದು ಪ್ರತಿದಿನ 1,500 ರೂ.ನಂತೆ ತಿಂಗಳಿಗೆ 50,000 ರೂ.ನಂತೆ ಕಟ್ಟಿದ್ದೇನೆ. ಕಳೆದ ಮಾರ್ಚ್ ನಲ್ಲಿ ಚಿಟ್ ಫಂಡ್ ಮುಕ್ತಾಯ ಆಗಿದ್ದು ಹತ್ತು ಲಕ್ಷ ಆಗಬೇಕು. ಇಲ್ಲಿವರೆಗೂ ನನಗೆ ಹಣ ನೀಡಿಲ್ಲ, ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದರು. ಇವರ ಜೊತೆಗೆ 20ಕ್ಕೂ ಹೆಚ್ಚು ಮಂದಿ ತಮಗಾದ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಂತ್ರಸ್ತ ಅಜಿತ್ ಕುಮಾರ್ ಮಾತನಾಡಿ, ಅಶೋಕ್ ಭಟ್ ಜನರನ್ನು ವಂಚಿಸುವ ಸಲುವಾಗಿಯೇ ಚಿಟ್ ಫಂಡ್ ಮಾಡಿದ್ದರು. ಹಣ ಕೇಳಿದರೆ, ಕೊನೆಯಲ್ಲಿ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ. ಅಲ್ಲದೆ, ಕ್ಯಾಶ್ ರೂಪದಲ್ಲೇ ಹಣ ನೀಡುವಂತೆ ಹೇಳಿ ಪಡೆದುಕೊಳ್ಳುತ್ತಿದ್ದ. ಕೊನೆಗೆ ಹಣ ಕೇಳಿದರೆ ಬೇರೆಯವರ ಹೆಸರು ಹೇಳಿ, ಅವರು ತನಗೆ ವಂಚಿಸಿದ್ದಾರೆ ಎಂದು ಹೇಳುತ್ತಿದ್ದ. ಅಲ್ಲದೆ, ಪಿಗ್ಮಿ ಹಣ ಸಂಗ್ರಹಿಸುತ್ತಿದ್ದ ಶಿಬರೂರು ಮೂಲದ ಯಕ್ಷಿತ್ ಎಂಬಾತ ಹಣ ನೀಡದೆ ವಂಚಿಸಿದ್ದಾನೆ ಎಂದು ಹೇಳುತ್ತಿದ್ದ ಎಂದು ಸಂತ್ರಸ್ತರು ದೂರಿದರು.
ಸುದ್ದಿಗೋಷ್ಠಿಗೆ ಬಂದಿದ್ದ ಪಿಗ್ಮಿ ಕಲೆಕ್ಟರ್ ಯಕ್ಷಿತ್ ಮಾತನಾಡಿ, ಒಂದೂವರೆ ವರ್ಷಗಳಿಂದ ಫೈನಾನ್ಸ್ ನಲ್ಲಿ ಹಣ ಸಂಗ್ರಾಹಕನಾಗಿ ದುಡಿಯುತ್ತಿದ್ದು ಹಲವರನ್ನು ಚಿಟ್ ಫಂಡ್‌ಗೆ ಸೇರಿಸಿದ್ದೇನೆ. ಫೈನಾನ್ಸ್ ಎಂಟು ತಿಂಗಳಿಂದ ಮುಚ್ಚಿದ್ದು, ಗ್ರಾಹಕರು ಹಣ ಕೇಳುತ್ತಿದ್ದಾರೆ. ನನಗೆ 4 ತಿಂಗಳಿಂದ ಸಂಬಳ ನೀಡಿಲ್ಲ. ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹಲವರ ಕೊಲೆ ಮಾಡಿದ್ದೇನೆ, ಕೊಲೆ ಮಾಡಲು ಹೆದರಲ್ಲ !
ವಂಚನೆಯ ಕುರಿತು ಕಮಿಷನರ್ ಬಳಿ ದೂರು ನೀಡಲು ತೆರಳಿದ್ದ ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕಿರುವ ಅಶೋಕ್ ಭಟ್, ನೀವು ಹಣವನ್ನು ಕಮಿಷನರ್ ಅವರಿಂದಲೇ ಪಡೆದುಕೊಳ್ಳಿ ಎಂದು ದರ್ಪ ಪ್ರದರ್ಶಿಸಿದ್ದ. ನಾನು ಈಗಾಗಲೇ ಹಲವು ಕೊಲೆ ಮಾಡಿದ್ದೇನೆ, ಇನ್ನೂ ಕೊಲೆ ಮಾಡಲು ಹಿಂಜರಿಯಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತರು ದೂರಿದ್ದಾರೆ. ನಾನು ಸಿಯಾಳ ಮಾರಿ ಜೀವನ ಸಾಗಿಸುತ್ತಿದ್ದೇನೆ. ದಿನಕ್ಕೆ 200 ರೂ. ನಂತೆ ಇವರ ಪಿಗ್ಮಿಗೆ ಕಟ್ಟುತ್ತಿದ್ದೆ. ಕಟ್ಟಿದ್ದ 80 ಸಾವಿರ ರೂ. ಪೈಕಿ ಕೈಕಾಲು ಹಿಡಿದ ಕಾರಣ 20 ಸಾವಿರ ರೂ. ಹಿಂದಿರುಗಿಸಿದ್ದಾರೆ. ಇನ್ನೂ 60 ಸಾವಿರ ರೂ. ನೀಡದೆ ವಂಚಿಸಿದ್ದಾನೆ ಎಂದು ಹಣ ಕಳೆದುಕೊಂಡ ಗೋಪಾಲ ಎಂಬವರು ದೂರಿದ್ದಾರೆ.
ಬಜರಂಗದಳದಲ್ಲಿದ್ದು ರೌಡಿ ಶೀಟರ್ ಆಗಿದ್ದ, ಕೊನೆಗೆ ಕಾಂಗ್ರೆಸ್ ಸೇರಿದ್ದ !
ಅಶೋಕ್ ಭಟ್, ಹಿಂದೆ ವರ್ಷಗಳಿಂದ ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದ. ಆ ಸಂದರ್ಭದಲ್ಲಿ ಆತನ ವಿರುದ್ಧ ಸುಮಾರು 20ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದವು. ಬೀಚ್ ನಲ್ಲಿ ಹುಡುಗ- ಹುಡುಗಿ ಜೊತೆಗಿದ್ದರೆ ಹಲ್ಲೆ ನಡೆಸುವುದರಿಂದ ಹಿಡಿದು ಮುಸ್ಲಿಮರ ಜೊತೆ ಜಗಳ, ಬೀದಿ ಕಾಳಗ ನಡೆಸುತ್ತಿದ್ದ. ಹೀಗಾಗಿ ಸುರತ್ಕಲ್ ಠಾಣೆಯಲ್ಲಿ ಈತನ ವಿರುದ್ಧ ರೌಡಿಶೀಟ್ ಓಪನ್ ಮಾಡಲಾಗಿತ್ತು. ರೌಡಿ ಎಂದು ಹಣೆಪಟ್ಟಿ ಪಡೆದಿದ್ದಲ್ಲದೆ, ಒಮ್ಮೆ ಜಿಲ್ಲೆಯಿಂದ ಗಡಿಪಾರಿಗೂ ಒಳಗಾಗಿದ್ದ ಎನ್ನುತ್ತಾರೆ ಕೆಲವರು. ಆನಂತರ ಸುರತ್ಕಲ್ ಕ್ಷೇತ್ರದಲ್ಲಿ ವಿಜಯ ಕುಮಾರ್ ಶೆಟ್ಟಿ ಶಾಸಕರಾಗಿದ್ದಾಗ ಕಾಂಗ್ರೆಸ್ ಸೇರಿಕೊಂಡಿದ್ದ. ಆಗ ಈತನ ಮೇಲೆಲಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು ಎನ್ನಲಾಗುತ್ತಿದೆ. ಆನಂತರ ಫೈನಾನ್ಸ್ ವ್ಯವಹಾರ ಆರಂಭಿಸಿ ಸಂಭಾವಿತನಾಗಿದ್ದ ಅಶೋಕ್ ಭಟ್, ಕೆಲವರನ್ನು ಹಿಡಿದು ಎನ್ಐಟಿಕೆಯಲ್ಲಿ ಜಿಮ್ ಕೋಚ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಜೊತೆಗೆ ಪವರ್ ಲಿಫ್ಟಿಂಗ್ ಟೂರ್ನಮೆಂಟ್ ಮಾಡಿ ಹೆಸರು ಗಳಿಸಿದ್ದ. ಸಂಘ ಪರಿವಾರದಿಂದ ಹೊರ ಹಾಕಲ್ಪಟ್ಟ ಬಳಿಕ ಮೊಯ್ದೀನ್ ಬಾವ ಜೊತೆ ಗುರುತಿಸಿಕೊಂಡಿದ್ದ.
Chit fund fraud in Surathkal,Hundreds cheated of Crores of money, Bhargavi finance owners both Ashok Bhat and wife vidhya have been arrested by the cyber police in Mangalore.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm