ಬ್ರೇಕಿಂಗ್ ನ್ಯೂಸ್
24-09-22 10:58 pm Bangalore Correspondent ಕ್ರೈಂ
ಬೆಂಗಳೂರು, ಸೆ. 24 : ನಕಲಿ ಆಧಾರ್ ಕಾರ್ಡ್ ಇನ್ನಿತರ ದಾಖಲೆ ದೃಷ್ಟಿಸಿ ದುರ್ಬಳಕೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್, ರಮೇಶ್, ನಾಗರಾಜ್, ಸುನಿಲ್.ಡಿ ರೂಪಂ ಭಟ್ಟಾಚಾರ್ಜಿ, ರವಿ ಬಂಧಿತರು.
ಆರೋಪಿಗಳು ನಕಲಿ ವಿಳಾಸ, ಹೆಸರು, ಫೋಟೋ ನೀಡಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದರು. ಆರು ಜನರ ಪೈಕಿ ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪ್ರವೀಣ್, ಮೊಬೈಲ್ ಸೆಂಟರ್ ನಡೆಸುತ್ತಿದ್ದ ಆರೋಪಿಯಾಗಿದ್ದು ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಟ್ಟುಕೊಳ್ಳುತ್ತಿದ್ದ. ಆಧಾರ್ ಬೇಕಿರುವವರ ಮಾಹಿತಿ ಪಡೆದು ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸುತ್ತಿದ್ದ.
ರಮೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು ಪ್ರವೀಣ್ ಕಳಿಸುತ್ತಿದ್ದ ಅರ್ಜಿದಾರನನ್ನ ಗೆಜೆಟೆಡ್ ಆಫೀಸರ್ ಬಳಿ ಕರೆದೊಯ್ಯುತ್ತಿದ್ದ. ಸಹಿ ಹಾಕಿಸಲು ಸಹಾಯವನ್ನು ಮಾಡುತ್ತಿದ್ದ. ಆರೋಪಿ ಸುನಿಲ್.ಡಿ ಪ್ರೈಮರಿ ಹೆಲ್ತ್ ಸೆಂಟರಿನ ನಿವೃತ್ತ ವೈದ್ಯ. ನಿವೃತ್ತಿ ನಂತರವೂ ಗೆಜೆಟೆಡ್ ಸೀಲ್ ಅನ್ನು ತನ್ನ ಬಳಿ ಇಟ್ಟುಕೊಂಡಿದ್ದಲ್ಲದೆ ದುರುಪಯೋಗ ಮಾಡುತ್ತಿದ್ದ. ಪ್ರವೀಣ್ ಕಳಿಸುತ್ತಿದ್ದ ಅಪ್ಲಿಕೇಶನ್ ಪಡೆದು ಸೀಲ್ ಸಹಿ ಹಾಕಲು ಹಣವನ್ನು ಪಡೆಯುತ್ತಿದ್ದ.
ನಾಗರಾಜ್ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು ಅಧಿಕೃತವಾಗಿ ಆಧಾರ್ ಪಡೆಯಲು ಬೇಕಿರುವ ಸ್ಕ್ಯಾನರ್ ದುರ್ಬಳಕೆ ಮಾಡಿಕೊಳ್ತಿದ್ದ. ಸ್ಕ್ಯಾನ್ ಮಾಡಿ ನಕಲಿ ದಾಖಲಾತಿಗಳ ಸಹಿತ ಆಧಾರ್ ಫಾರ್ಮ್ ಅಪ್‌ಲೋಡ್ ಮಾಡುತ್ತಿದ್ದ ಎನ್ನಲಾಗಿದೆ.
ರೂಪಂ ಭಟ್ಟಾಚಾರ್ಜಿ ಒರಿಸ್ಸಾ ಮೂಲದವನು. ಗಾರ್ಮೆಂಟ್ಸ್ ನಲ್ಲಿ ಸೂಪರ್ವೈಸರ್ ಕೆಲಸ ಮಾಡಿಕೊಂಡಿದ್ದ ಆರೋಪಿ. ಸ್ಯಾಲರಿ ಪಡೆಯಲು ಆಧಾರ್ ಕಡ್ಡಾಯ ಇರುವುದರಿಂದ ದಾಖಲೆ ಬೇಕಿರುವವರನ್ನ ಪ್ರವೀಣ್ ಬಳಿ ಕಳಿಸಿಕೊಡುತ್ತಿದ್ದ. ರವಿ ಸರ್ಕಾರಿ ಆಸ್ಪತ್ರೆಯ ಉದ್ಯೋಗಿಯಾಗಿದ್ದು ಆಧಾರ್ ಅಗತ್ಯವಿರುವವರನ್ನ ಪ್ರವೀಣ್ ಬಳಿಯೇ ಕಳಿಸಿಕೊಡ್ತಿದ್ದ.
ಎಲ್ಲರೂ ವ್ಯವಸ್ಥಿತವಾಗಿ ವ್ಯವಹಾರ ಮಾಡುತ್ತಿದ್ದರು. ಪ್ರತಿ ಹಂತದಲ್ಲಿ ನೂರಿನ್ನೂರು ರೂಪಾಯಿ ಪಡೆದು ಆಧಾರ್ ಪ್ರಕ್ರಿಯೆ ಕಂಪ್ಲೀಟ್ ಮಾಡಿಕೊಡ್ತಿದ್ದರು. ಬೊಮ್ಮನಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸಿ ಅವರಿಂದ ಸೀಲ್, ಕಂಪ್ಯೂಟರ್, ಪ್ರಿಂಟರ್, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜಪ್ತಿ ಮಾಡಿದ್ದಾರೆ.
Fake aadhar racket in Bangalore by Bank and government employees in Bangalore busted.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am