ಬ್ರೇಕಿಂಗ್ ನ್ಯೂಸ್
08-09-22 07:51 pm Mangalore Correspondent ಕ್ರೈಂ
ಉಳ್ಳಾಲ, ಆ.8: ಸೋಮೇಶ್ವರ ಬೀಚ್ ಬಳಿಯ ಹೋಂ ಸ್ಟೇ ಒಂದಕ್ಕೆ ನಿನ್ನೆ ಸಂಜೆ ಕನ್ನ ಹಾಕಿದ್ದ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಉಳ್ಳಾಲ ಠಾಣೆ ವ್ಯಾಪ್ತಿಯ ಎರಡು ಮನೆಗಳಿಂದ ನಗ, ನಗದು ದೋಚಿದ್ದ ಕಳ್ಳನನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್ (35) ಬಂಧಿತ ಖದೀಮ. ಆರೋಪಿ ಮೊವಾಝ್ ಕೇರಳದ ಕಣ್ಣೂರಿನ ಪತ್ನಿ ಮನೆಯಲ್ಲೇ ನೆಲೆಸಿದ್ದು ಆಗಾಗ್ಗೆ ಮಂಗಳೂರಿಗೆ ಬಂದು ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ. ನಿನ್ನೆ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ ಬಾಡಿಗೆ ಮನೆ ನಿವಾಸಿಯಾದ ಪ್ರಶಾಂತ್ ಅವರ ಮನೆ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಮೊವಾಝ್ ಕಪಾಟಿನಲ್ಲಿದ್ದ ಕರಿಮಣಿ ಸರ ಮತ್ತು ಚೈನ್ ಸೇರಿ ಒಟ್ಟು 26 ಗ್ರಾಂ ಚಿನ್ನ ಅಲ್ಲದೆ 3000 ರೂಪಾಯಿ ನಗದನ್ನ ದೋಚಿದ್ದ. ಪ್ರಶಾಂತ್ ಅವರು ಪತ್ನಿ , ಮಗನೊಂದಿಗೆ ಉಡುಪಿಗೆ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು.



ಬುಧವಾರ ಸಂಜೆ 7.15 ರ ವೇಳೆ ಪ್ರಶಾಂತ್ ಅವರು ನೆಲೆಸಿರುವ ಬಾಡಿಗೆ ಮನೆ ಪಕ್ಕದಲ್ಲಿರುವ ನಮೋ ಹೆರಿಟೇಜ್ ಎಂಬ ಹೋಂ ಸ್ಟೇ ಕಟ್ಟಡಕ್ಕೆ ತಲೆಗೆ ಟೊಪ್ಪಿ ಮತ್ತು ಕಣ್ಣಿಗೆ ಕನ್ನಡಕ ಹಾಕಿ ನುಗ್ಗಿದ್ದ ಮೊವಾಝ್ ಬಾಗಿಲನ್ನ ಕಬ್ಬಿಣದ ಸಲಾಕೆಯಲ್ಲಿ ಮುರಿದು ಕನ್ನ ಹಾಕಿರೋದು ಅಲ್ಲಿನ ಸಿಸಿಟಿವಿಯಲ್ಲಿ ವೀಡಿಯೋ ದಾಖಲಾಗಿತ್ತು. ಹೋಂ ಸ್ಟೇ ಒಳಗಡೆ ತಡಕಾಡಿದ ಆತನಿಗೆ ಅಲ್ಲಿ ಏನೂ ಸಿಕ್ಕಿರಲಿಲ್ಲ.

ನಿನ್ನೆ ರಾತ್ರಿ ಉಳ್ಳಾಲ ಮೇಲಂಗಡಿಯ ಕಿರೋಡಿಯನ್ ಕುಟಂಬಸ್ಥರ ದೈವಸ್ಥಾನಕ್ಕೂ ಈತ ಕನ್ನ ಹಾಕಿದ್ದು ಹಿತ್ತಾಳೆಯ ದೈವದ ಪರಿಕರಗಳು ಮತ್ತು ಕಾಣಿಕೆ ಹುಂಡಿಯ ಚಿಲ್ಲರೆ ಹಣವನ್ನ ಎಗರಿಸಿದ್ದ. ಪಕ್ಕದಲ್ಲೇ ಇದ್ದ ದೈವದ ಚಾಕರಿಯವರಾದ ಪ್ರಸಾದ್ ಅವರ ಮನೆಯ ಹಿಂಬಾಗಿಲನ್ನ ಮುರಿದು ಕಬಾಟಿನಲ್ಲಿದ್ದ 56 ಗ್ರಾಂ ಚಿನ್ನವನ್ನ ದೋಚಿ ಪರಾರಿಯಾಗಿದ್ದ. ಈ ಬಗ್ಗೆಯೂ ದೈವಸ್ಥಾನದ ಹತ್ತಿರದ ಮನೆಯೊಂದರ ಸಿಸಿಟಿವಿಯಲ್ಲಿ ಕಳ್ಳ ಮೊವಾಝ್ ನ ಚಹರೆ ದಾಖಲಾಗಿತ್ತು.

ಕ್ಷಿಪ್ರವಾಗಿ ಕಳ್ಳನ ಜಾಡನ್ನ ಹಿಡಿದ ಉಳ್ಳಾಲ ಪಿಐ ಸಂದೀಪ್ ನೇತೃತ್ವದ ತಂಡವು ಕಳ್ಳನನ್ನ ಹೆಡೆಮುರಿ ಕಟ್ಟಲು ಯಶಸ್ವಿಯಾಗಿದೆ. ಆರೋಪಿ ಮೊವಾಝ್ ಈ ಹಿಂದೆ ಉಳ್ಳಾಲದಲ್ಲಿ ನಡೆದಂತಹ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Mangalore Robbery in two houses, gold cash robbed, accused arrested in one days time by ullal police
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm