ಬ್ರೇಕಿಂಗ್ ನ್ಯೂಸ್
30-06-22 10:28 pm HK News Desk ಕ್ರೈಂ
ಮಂಗಳೂರು, ಜೂನ್ 30: ಕೇಸರಿ ಶಾಲು ಹಾಕ್ಕೊಂಡಿದ್ದ ಇಬ್ಬರು ಯುವಕರು ಮದ್ರಸಾದಿಂದ ತೆರಳುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದಾರೆ ಅನ್ನುವ ಸುದ್ದಿ ಕಾಟಿಪಳ್ಳ, ಕೃಷ್ಣಾಪುರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟು ಕೆಲವು ಕಿಡಿಗೇಡಿಗಳು ಹಿಂದು ಯುವಕರು ಹಲ್ಲೆ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನೂ ಹರಡಿದ್ದರು. ಇದರಿಂದ ಮುಸ್ಲಿಂ ಏರಿಯಾದಲ್ಲಿ ಆಕ್ರೋಶವೂ ಉಂಟಾಗಿತ್ತು. ಆದರೆ, ಪೊಲೀಸರ ತನಿಖೆಯ ಬಳಿಕ ಇಡೀ ಪ್ರಕರಣವೇ ಉಲ್ಟಾ ಆಗಿದ್ದು, ಹುಡುಗನದ್ದೇ ಕಾರುಬಾರು ಅನ್ನುವುದು ಬೆಳಕಿಗೆ ಬಂದಿದೆ.
ಮೊನ್ನೆ ಸೋಮವಾರ ಸಂಜೆ ಮದ್ರಸಾ ಶಿಕ್ಷಣಕ್ಕೆ ತೆರಳಿದ್ದ 13 ವರ್ಷದ ಬಾಲಕನಿಗೆ ಹಲ್ಲೆ ಮಾಡಲಾಗಿದೆ ಎಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆ ಭಾಗದ ಸಿಸಿಟಿವಿಗಳನ್ನು ಆಧರಿಸಿ, ತನಿಖೆ ನಡೆಸಿದಾಗ ಯಾವುದೇ ಸುಳಿವು ಲಭಿಸಿರಲಿಲ್ಲ. ಆನಂತರ, ಪೊಲೀಸರು ಮದ್ರಸಾ ಶಿಕ್ಷಕರು, ಹುಡುಗನ ಹೆತ್ತವರನ್ನು ಕರೆದು ವಿಚಾರಣೆ ನಡೆಸಿದ್ದರು. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದಾಗ, ಹುಡುಗನೇ ಹಲ್ಲೆ ಘಟನೆಯ ಕತೆ ಕಟ್ಟಿದ್ದಾನೆಂದು ತಿಳಿದುಬಂದಿದೆ.

ಹುಡುಗನಿಗೆ ತಾನು ಕಪ್ಪಾಗಿದ್ದೇನೆ, ಯಾರೂ ಗಮನಿಸುತ್ತಿಲ್ಲ. ಹೆತ್ತವರು ಕಷ್ಟದಿಂದ ಕಲಿಸಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ, ಯಾರೂ ತನಗೆ ಸ್ನೇಹಿತರಿಲ್ಲ. ಮನೆಯ ಬಡತನದಿಂದಾಗಿ ಸೈಕಲ್ ಇಲ್ಲ. ಸೈಕಲ್ ಇದ್ದರೆ ಮಾತ್ರ ಫ್ರೆಂಡ್ಸ್ ಜೊತೆಗೆ ಬರ್ತಾರೆ ಎಂಬ ಕೀಳರಿಮೆ ಹೊಂದಿದ್ದ. ಇದೇ ಕಾರಣಕ್ಕಾಗಿ ಯಾರೋ ಹಲ್ಲೆ ಮಾಡಿದ್ದಾರೆಂದು ಬಿಂಬಿಸಲು ತನ್ನ ಅಂಗಿಯನ್ನು ತಾನೇ ಪೆನ್ನಿನಲ್ಲಿ ಕುಕ್ಕಿ ಹರಿದುಕೊಂಡಿದ್ದ ಅನ್ನುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಘಟನೆಯನ್ನು ಕೋಮು ದ್ವೇಷ ಹರಡಲು ಕೆಲವರು ಪ್ರಯತ್ನ ಪಟ್ಟಿದ್ದರು. ಮದ್ರಸಾದ ಉಸ್ತಾದ್, ಹುಡುಗನ ಹೆತ್ತವರು ಮತ್ತು ವೈದ್ಯರ ಸಮ್ಮುಖದಲ್ಲಿ ಆತನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೋಮು ದ್ವೇಷಕ್ಕೆ ಕಾರಣವಾಗಿದ್ದ ಹಲ್ಲೆ ಘಟನೆಯ ಅಸಲಿ ಕಾರಣವನ್ನು ಪೊಲೀಸರು ಸಕಾಲದಲ್ಲಿ ಪತ್ತೆಹಚ್ಚಿ ಆಗುತ್ತಿದ್ದ ಅಪಾಯವನ್ನು ತಡೆಹಿಡಿದಿದ್ದಾರೆ.
A 6th standard madrasa going student Shayan was attacked by 2 men in bike as while he was returning back to home at Katipalla, in Mangalore. But as per police enquiry no such incident had taken place it was a play by the student as their family was poor and he wasn't interested to go to school says police commissioner Shahi Kumar after a detailed investigation.
29-03-26 10:19 am
HK News Staffer
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
30-03-26 10:31 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
30-03-26 11:13 pm
Mangalore Correspondent
Mangalore Attavar Suicide: ಅತ್ತಾವರದ ಅಪಾರ್ಟ್ಮೆ...
30-03-26 06:09 pm
ಮಂಗಳೂರಿನಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಅಭಾವ ; ಸ್ಟೇಶನ...
30-03-26 02:06 pm
ಕುಕ್ಕರ್ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ನಾನು...
29-03-26 11:11 am
ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ...
28-03-26 09:08 pm
30-03-26 07:35 pm
HK News Desk
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm
ಕಾರ್ಕಳದಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನ ; ಆರ...
29-03-26 06:03 pm