ಬ್ರೇಕಿಂಗ್ ನ್ಯೂಸ್
09-06-22 03:09 pm HK News Desk ಕ್ರೈಂ
ಮೈಸೂರು, ಜೂನ್ 9: ಮೈಸೂರಿನ ಕಾನ್ವೆಂಟ್ ಶಾಲೆಯ ನನ್ ಒಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ನನ್ ಆಗಿರುವ ಯುವತಿಯೇ ಸ್ವತಃ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ತನ್ನ ಶವ ಏನಾದ್ರೂ ಸಿಕ್ಕರೆ ಕೊಲೆಯೆಂದು ಕೇಸು ದಾಖಲಿಸುವಂತೆ ಕೋರಿದ್ದಾರೆ.
ವಿಕಲ ಚೇತನ ಮಕ್ಕಳನ್ನು ಸಾಕುವ ಕಾನ್ವೆಂಟ್ ಶಾಲೆಯಲ್ಲಿ ನನ್ ಟೀಚರ್ ಆಗಿದ್ದು, ಅಲ್ಲಿನ ಸಿಬಂದಿಯೇ ತನ್ನ ಮೇಲೆ ಕಿರುಕುಳ ನೀಡಿದ್ದಾರೆ. ಈ ಹಿಂದೆ ಅಲ್ಲಿ ಎರಡು ಕೊಲೆ ಆಗಿದೆ. ಅಮಾಯಕರಿಗೆ ಲೈಂಗಿಕ ಕಿರುಕುಳ ನೀಡಲಾಗ್ತಿದೆ. ಭಾರೀ ಭ್ರಷ್ಟಾಚಾರವೂ ನಡೆಯುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲದೆ, ತನ್ನನ್ನು ಮಾನಸಿಕ ರೋಗಿಯೆಂದು ತೋರಿಸಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸುತ್ತಿದ್ದಾರೆ. ಇದರಲ್ಲಿ ಕಾನ್ವೆಂಟ್ ಶಾಲೆಯ ಮೂವರು ಮಹಿಳಾ ಸಹೋದ್ಯೋಗಿಗಳ ಪಾತ್ರ ಇದೆಯೆಂದು ಹೇಳಿ, ಹೆಸರನ್ನು ಉಲ್ಲೇಖಿಸಿ ಆರೋಪ ಮಾಡಿದ್ದಾರೆ. ನನಗೆ ಮಾನಸಿಕ ಕಿರುಕುಳವನ್ನೂ ನೀಡುತ್ತಿದ್ದು, ನನ್ನ ಶವ ಎಲ್ಲಿಯಾದರೂ ಸಿಕ್ಕರೆ ಅದನ್ನು ಪೊಲೀಸರು ಕೊಲೆಯೆಂದು ಪರಿಗಣಿಸಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ರಾಜ್ಯ ಮಾನವ ಹಕ್ಕು ಆಯೋಗಕ್ಕೂ ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದು ಹೇಳಿರುವ ಆಕೆ, ತನ್ನ ಮೇಲೆ ನಾಲ್ವರು ಸೇರಿ ಹಲ್ಲೆ, ಕಿರುಕುಳ ನೀಡಿದ್ದು ಆನಂತರ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೇಗೋ ಪಾರಾಗಿ ಬಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ. ಕಾನ್ವೆಂಟ್ ಶಾಲೆಯ ಆಡಳಿತ ಈ ಆರೋಪಗಳನ್ನು ನಿರಾಕರಿಸಿದ್ದು, ಆಕೆ ಮಾನಸಿಕ ಅಸ್ವಸ್ಥಳಾಗಿದ್ದು, ಎರಡು ತಿಂಗಳಿಂದ ವಿಪರೀತವಾಗಿ ವರ್ತಿಸುತ್ತಿದ್ದಾಳೆ ಎಂದು ಹೇಳಿಕೆ ನೀಡಿದೆ.
A nun working in Mercy convent in Sri Rampura in Karnataka's Mysuru has sought protection from her colleagues, alleging that her life is in danger and that she was forcibly admitted to a psychiatric hospital for calling out sexual harassment in the convent.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm