ಫೋಟೊ ಗ್ಯಾಲರಿ

06-07-23 10:07 pm ಫೋಟೊ

PHOTOS: ಭಾರೀ ಮಳೆಗೆ ಕಾಸರಗೋಡಿನ ಮಧೂರು ದೇವಸ್ಥಾನ ಜಲಾವೃತ

ಕಳೆದ ಐದು ದಿನಗಳಿಂದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದರೂ, ಕರ್ನಾಟಕ ಕರಾವಳಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿಲ್ಲ. ಆದರೆ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ಪಕ್ಕದಲ್ಲೇ ಹರಿಯುವ ನದಿ ಉಕ್ಕಿ ದೇವಸ್ಥಾನದವರೆಗೂ ಬಂದು ನಿಂತಿದೆ.

ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನ ಜಲಾವೃತವಾಗಿದೆ.
ಮಧೂರು ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರನ್ನು ಸ್ಥಳೀಯರು ಭಕ್ತಿ ಶ್ರದ್ಧೆಯಿಂದ ಆರಾಧಿಸುತ್ತಾರೆ. ಬೊಡ್ಡಜ್ಜ ಎಂದು ಪ್ರೀತಿಯಿಂದ ಕರೆಯಲ್ಪಡುವ ಶ್ರೀ ಮಹಾಗಣಪತಿ ದೇವರಿಗೆ ಹರಿಕೆ ಹೇಳುವುದುಂಟು.
ಕೇರಳದ ಗಡಿಭಾಗವಷ್ಟೇ ಅಲ್ಲ, ಕರ್ನಾಟಕದ ಗಡಿಭಾಗದ ಜನರೂ ಮಧೂರು ದೇವಸ್ಥಾನಕ್ಕೆ ಯಾತ್ರಾರ್ಥಿಗಳಾಗಿ ಬರುತ್ತಾರೆ. ಕಾಸರಗೋಡು ಪೇಟೆಯಿಂದ ಮಧೂರು ದೇವಸ್ಥಾನಕ್ಕೆ ನಿರಂತರ ಸಾರಿಗೆ ವ್ಯವಸ್ಥೆಗಳೂ ಇವೆ.
ಶ್ರೀ ಮಧೂರು ಮದನಂತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳೂ ನಡೆಯುತ್ತಿವೆ. ಇಲ್ಲಿ ದೇವಸ್ಥಾನದ ಪಕ್ಕದಲ್ಲೇ ಹೊಳೆ ಇದ್ದು, ಧಾರಾಕಾರ ಮಳೆ ಬಂದಾಗ ತುಂಬಿ ಹರಿಯುತ್ತದೆ. ದೇವಸ್ಥಾನದ ಅಂಗಣದವರೆಗೂ ಇದು ಪ್ರವೇಶಿಸುತ್ತದೆ.