ಫೋಟೊ ಗ್ಯಾಲರಿ

31-08-25 09:20 pm ಫೋಟೊ

78ನೇ ವರ್ಷದ ಸಂಘನಿಕೇತನ ಗಣೇಶನ ಶೋಭಾಯಾತ್ರೆ ; ಗಣಪನಿಗೆ ನಮಿಸಿದ ವಿಜಯೇಂದ್ರ

ನಗರದ ಮಣ್ಣಗುಡ್ಡ ಬಳಿಯ ಪ್ರತಾಪನಗರದ ಆರೆಸ್ಸೆಸ್ ಕಾರ್ಯಾಲಯ 'ಸಂಘನಿಕೇತನ'ದಲ್ಲಿ 78ನೇ ವರ್ಷದ ಗಣೇಶೋತ್ಸವದ ಶೋಭಾಯಾತ್ರೆ ಭಾನುವಾರ ಸಂಜೆ ನಡೆಯಿತು. ಐದು ದಿನ ಪೂಜಿಸಿದ ಗಣೇಶನ ವಿಗ್ರಹವನ್ನು ರಥಬೀದಿಯ ಮಹಮ್ಮಾಯಿ ದೇವಸ್ಥಾನದ ಕರೆಯಲ್ಲಿ ವಿಸರ್ಜನೆಗೆ ಒಯ್ಯಲಾಯಿತು. ಶೋಭಾಯಾತ್ರೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಫೋಟೊ ಕೃಪೆ ; ಮಂಜು ನಿರೇಶ್ವಾಲ್ಯ