ಬ್ರೇಕಿಂಗ್ ನ್ಯೂಸ್
03-09-25 01:36 pm HK News Desk ಕರ್ನಾಟಕ
ಮೂಡುಬಿದ್ರೆ, ಸೆ.3 : ಗಂಡ- ಹೆಂಡತಿ ಜಗಳ ವಿಚಾರದಲ್ಲಿ ದೂರು ನೀಡಲು ಬಂದಿದ್ದ ಮಹಿಳೆಯೊಬ್ಬರಿಗೆ ಕರೆ ಮಾಡಿ ಕಿರುಕುಳ ನೀಡಿದ ಆರೋಪದಲ್ಲಿ ಮೂಡುಬಿದ್ರೆ ಠಾಣೆಯ ಕಾನ್ಸ್ ಟೇಬಲ್ ಒಬ್ಬಾತನನ್ನು ಅದೇ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾನ್ಸ್ಟೇಬಲ್ ಶಾಂತಪ್ಪ(28) ಬಂಧಿತ ಆರೋಪಿ.
ಮಹಿಳೆಯೊಬ್ಬರು ಮೂಡುಬಿದ್ರೆ ಠಾಣೆಗೆ ಬಂದು ದೂರು ನೀಡಿದ್ದು ಈ ವೇಳೆ ಠಾಣೆಯ ಹೊರಗಡೆ ಡೈರಿ ಪುಸ್ತಕದಲ್ಲಿ ಹೆಸರು, ವಿಳಾಸ, ಬಂದಿರುವ ಕಾರಣ ಬರೆಯಬೇಕಾಗುತ್ತದೆ. ಮಹಿಳೆಯ ದೂರು ಪರಿಗಣಿಸಿ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್, ಪತಿ- ಪತ್ನಿಯನ್ನು ಬರಹೇಳಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಎರಡು ದಿನಗಳ ಬಳಿಕ ಡೈರಿಯಲ್ಲಿದ್ದ ಮೊಬೈಲ್ ನಂಬರ್ ಪಡೆದು ಮಹಿಳೆಗೆ ಕರೆ ಮಾಡಿದ್ದ ಕಾನ್ಸ್ ಟೇಬಲ್ ಶಾಂತಪ್ಪ, ನೀನು ಬಾರೀ ಚಂದ ಇದ್ದೀಯಾ.. ಗಂಡ ಇಲ್ಲದಿದ್ದರೆ ಯಾಕೆ ಚಿಂತೆ ಮಾಡ್ತೀಯಾ.. ಎಂದು ಹೇಳಿ ಫೋನ್ ಮಾಡಿ ಕಿರುಕುಳ ನೀಡಿದ್ದಾನೆ.
ಪದೇ ಪದೇ ಕರೆ ಮಾಡಿ ಕಿರುಕುಳ ನೀಡಿದ್ದರಿಂದ ಬೇಸತ್ತ ಮಹಿಳೆ, ಆತನ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಬಂದು ಅದೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೊಸ ಕಮಿಷನರ್ ಸುಧೀರ್ ರೆಡ್ಡಿ ಬಂದ ಬಳಿಕ ಠಾಣೆಯ ಪ್ರತಿ ದಿನದ ಆಗುಹೋಗು ಬಗ್ಗೆ ದಿನವೂ ರಿಪೋರ್ಟ್ ಕೊಡಬೇಕಾಗಿದೆ. ಮಹಿಳೆಯ ದೂರಿನ ಬಗ್ಗೆ ಹೇಳಿದಾಗ, ಕಾನೂನು ಎಲ್ಲರಿಗೂ ಒಂದೇ, ಎಫ್ಐಆರ್ ಮಾಡಿ ಅರೆಸ್ಟ್ ಮಾಡುವಂತೆ ಸೂಚನೆ ನೀಡಿದ್ದಾರೆ. ಇದರಂತೆ, ಮೂಡುಬಿದ್ರೆ ಠಾಣೆಯಲ್ಲೇ ಎಫ್ಐಆರ್ ಮಾಡಿ ಅದೇ ಠಾಣೆಯ ಕಾನ್ಸ್ ಟೇಬಲ್ ನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ಕೋರ್ಟ್ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಮಾಡಿದೆ. ಆದರೆ ಎಫ್ಐಆರ್ ಆಗಿದ್ದರಿಂದ ಕಾನ್ಸ್ ಟೇಬಲ್ ನನ್ನು ಪೊಲೀಸ್ ಕಮಿಷನರ್ ಸಸ್ಪೆಂಡ್ ಮಾಡಿದ್ದಾರೆ.
ಸಾಮಾನ್ಯವಾಗಿ ಇಂಥ ಪ್ರಕರಣದಲ್ಲಿ ಪೇದೆಗಳನ್ನು ಜೋರು ಮಾಡಿ ಬಿಡೋದು ಅಥವಾ ಅಮಾನತು ಮಾಡಿಯೋ, ಬೇರೆ ಠಾಣೆಗೆ ವರ್ಗಾವಣೆ ಮಾಡಿ ಕಳಿಸೋದು ಮಾಡುತ್ತಾರೆ. ಈಗಿನ ಕಮಿಷನರ್ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿ ಪೊಲೀಸರಿಗೇ ಬಿಸಿ ಮುಟ್ಟಿಸಿದ್ದಾರೆ. ಶಾಂತಪ್ಪ ಪೊಲೀಸ್ ಇಲಾಖೆಯ ತರಬೇತಿ ಮುಗಿಸಿ ಮೂಡುಬಿದ್ರೆ ಠಾಣೆಯಲ್ಲಿ 2022ರಲ್ಲಿ ಮೊದಲ ಬಾರಿಗೆ ಸೇವೆಗೆ ಸೇರಿದ್ದ. ಮೂರು ವರ್ಷದ ಬಳಿಕ ಮಾಡಬಾರದ್ದನ್ನು ಮಾಡಲು ಹೋಗಿ ಅರೆಸ್ಟ್ ಆಗಿದ್ದಾನೆ.
In a shocking incident, a police constable from Moodbidri station has been arrested for allegedly harassing a woman who had earlier visited the station to file a complaint regarding a domestic dispute. The accused has been identified as Constable Shantappa (28), a native of Kushtagi taluk in Koppal district.
03-09-25 05:40 pm
Bangalore Correspondent
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
03-09-25 03:45 pm
Mangalore Correspondent
College student Missing, Mangalore: ಮಂಗಳೂರಿನಲ...
03-09-25 11:53 am
ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ; ಹತ್ಯೆಗೀಡಾದವರ ಸ...
02-09-25 10:26 pm
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm