ಬ್ರೇಕಿಂಗ್ ನ್ಯೂಸ್
19-05-22 04:54 pm Mangalore Correspondent ಕರಾವಳಿ
ಉಳ್ಳಾಲ, ಮೇ 19 : ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಜೀರು ಗ್ರಾಮದ ಪಾಣೆಲ ನಾಗರಿಕರ ಬಹು ದಿನಗಳ ಸರಕಾರಿ ಬಸ್ಸಿನ ಬೇಡಿಕೆ ಈಡೇರಿದ್ದು ಮಾಜಿ ಸಚಿವ ಯು.ಟಿ.ಖಾದರ್ ನೂತನ ಬಸ್ಸಿಗೆ ಚಾಲನೆ ನೀಡುವುದರ ಜೊತೆಗೆ ಬಸ್ಸನ್ನು ಚಲಾಯಿಸಿ ಗಮನಸೆಳೆದರು.
ಪಜೀರು ಗ್ರಾಮದ ಪಾಣೆಲಕ್ಕೆ ಇಂದು ಬೆಳಗ್ಗೆ ಸರಕಾರಿ ಬಸ್ಸು ಓಡಾಟ ಪ್ರಾರಂಭಿಸಿದೆ. ಪಾಣೆಲ ಪ್ರದೇಶಕ್ಕೆ ಸರಕಾರಿ ಬಸ್ಸು ಒದಗಿಸುವಂತೆ ಸಾರಿಗೆ ಇಲಾಖೆಗೆ ಶಾಸಕ ಯು.ಟಿ.ಖಾದರ್ ಅವರು ಈ ಮೊದಲು ಸೂಚನೆ ನೀಡಿದಾಗ ರಸ್ತೆಯಲ್ಲಿ ದೊಡ್ಡ ಬಸ್ಸು ಸಂಚರಿಸುವ ಅವಕಾಶ ಇಲ್ಲದಿದ್ದರಿಂದ ಪಾಣೇಲ ಜನತೆಯ ಬಸ್ಸಿನ ಕನಸು ನನಸಾಗಿಯೇ ಉಳಿದಿತ್ತು. ಆದರೆ ಯು.ಟಿ.ಖಾದರ್ ಅಷ್ಟಕ್ಕೇ ಸುಮ್ಮನಿರದೇ ಸುಮಾರು ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮ ಚಾವಡಿ - ಪಜೀರು - ಪಾಣೇಲ - ಪಡೀಲ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಮತ್ತೆ ಸಾರಿಗೆ ಇಲಾಖೆಗೆ ಬಸ್ಸು ಒದಗಿಸಲು ಸೂಚನೆ ನೀಡಿದರು.


ಇದೀಗ ಸಾರಿಗೆ ಇಲಾಖೆಯ ನೂತನ ಬಸ್ ಇಂದು ಬೆಳಗ್ಗೆ 06.30ಕ್ಕೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಹೊರಟು 7.45ಕ್ಕೆ ಪಾಣೇಲ ತಲುಪಿದ್ದು ಶಾಸಕ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಹಿರಿಯರಾದ ವೆಂಕಪ್ಪ ಕಾಜವರವರು ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ನೂತನ ಸರಕಾರಿ ಬಸ್ ಮಂಗಳೂರು- ತೊಕ್ಕೊಟ್ಟು-ದೇರಳಕಟ್ಟೆ- ಕೊಣಾಜೆ-ಗ್ರಾಮಚಾವಡಿ- ಪಜೀರು-ಪಾಣೇಲ- ಪಡೀಲು-ಬೋಳಿಯಾರು- ಕುರ್ನಾಡು-ಮಿತ್ತಕೋಡಿ ಮಾರ್ಗವಾಗಿ ಸಂಚರಿಸಿ ಮುಡಿಪು ತಲುಪಲಿದ್ದು ನಂತರ ಮುಡಿಪು ಬಿಟ್ಟು ಅದೇ ಮಾರ್ಗವಾಗಿ ಮಂಗಳೂರು ತಲುಪಲಿದೆ. ಬಸ್ಸು ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಟ್ರಿಪ್ ಕಾರ್ಯಾಚರಿಸಲಿದೆ.
Mangalore to Pajir Govt Bus inaugurated by U T Khader, MLA drives the bus by himself and becomes a Bus Driver for a while.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm