ಬ್ರೇಕಿಂಗ್ ನ್ಯೂಸ್
16-05-22 01:19 pm Udupi Correspondent ಕರಾವಳಿ
ಉಡುಪಿ, ಮೇ 16 : ಲೌಡ್ ಸ್ಪೀಕರ್ ಅಳವಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿದೆ. ಕೋರ್ಟ್ ಆದೇಶ ಪಾಲನೆಗೆ ಎಲ್ಲಾ ಮಸೀದಿಗಳಿಗೆ ಸುತ್ತೋಲೆ ಕಳುಹಿಸಿದ್ದೇವೆ. ಸಿದ್ದಲಿಂಗ ಸ್ವಾಮೀಜಿ, ತರಳಬಾಳು ಸ್ವಾಮೀಜಿ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋರ್ಟ್ ಆದೇಶ ಪಾಲನೆಯಾದರೆ ನಮಗೆ ತೊಂದರೆ ಆಗುತ್ತದೆ ಎಂದು ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮಗೇನು ಕೋರ್ಟ್ ಆದೇಶ ಪಾಲಿಸುವುದು ಹೊರೆಯಾಗಲ್ಲ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸ ಅದಿ ಹೇಳಿದ್ದಾರೆ.
ಮಸೀದಿಯಲ್ಲಿ ಬೆಳಗ್ಗಿನ ಪ್ರಾರ್ಥನೆ ಬಗ್ಗೆ ವಕ್ಫ್ ಬೋರ್ಡ್ ನಿರ್ಧಾರ ಮಾಡುವುದಿಲ್ಲ. ಆಜಾನ್ ಕೂಗುವುದು ಷರಿಯತ್ ವಿಚಾರವಾಗಿದ್ದು ಉಲಮಾಗಳು, ಧಾರ್ಮಿಕ ಮುಖಂಡರು ಅಭಿಪ್ರಾಯ ಹೇಳಬೇಕು. ಬೆಂಗಳೂರಿನಲ್ಲಿ ಮುಖಂಡರು ಸೇರಿ ಒಗ್ಗಟ್ಟಿನ ತೀರ್ಮಾನ ತೆಗೆದುಕೊಂಡಿದ್ದಾರೆ. ಕರಾವಳಿ ಭಾಗದ ಉಲಮಾಗಳು ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನೆರಡು ದಿನದಲ್ಲಿ ಕರಾವಳಿ ಭಾಗದ ಉಲಮಾಗಳ ಸಭೆ ನಡೆಯಲಿದ್ದು ಅದರಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಕರ್ನಾಟಕದ ಮದರಸಾದಲ್ಲಿ ರಾಷ್ಟ್ರಗೀತೆ ಹಾಡಬೇಕೆಂಬ ಹಿಂದು ಸಂಘಟನೆಗಳ ಒತ್ತಾಯದ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿರುವ ಎಸ್ಸೆಸ್ಸೆಫ್, ಜಮಾಅತ್ ಅಧೀನದ 2000 ಮದರಸಗಳಲ್ಲಿ ರಾಷ್ಟ್ರಗೀತೆಯನ್ನು ಸಿಲೆಬಸ್ ನಲ್ಲಿ ಅಳವಡಿಸಿದ್ದೇವೆ. ವಕ್ಫ್ ಅಧೀನದಲ್ಲಿ 1,900 ಮದರಸಗಳಿದ್ದು ಅಲ್ಲಿಯೂ ರಾಷ್ಟ್ರಗೀತೆ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ರಾಷ್ಟ್ರಗೀತೆಯನ್ನು ಮದರಸದಲ್ಲಿ ಹೇಳಲಾಗುತ್ತಿದೆ. ಇನ್ನೂ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುತ್ತೇವೆ.
ರಾಷ್ಟ್ರಗೀತೆಗಿಂತ ದೊಡ್ಡದು ಯಾವುದು ಇಲ್ಲ. ನೀನು ಜನ್ಮಪಡೆದ ರಾಷ್ಟ್ರವನ್ನು ಪ್ರೀತಿಸು ಎಂದು ಇಸ್ಲಾಮ್ ಹೇಳುತ್ತದೆ. ಎಲ್ಲಾ ಮುಸಲ್ಮಾನ ಮಕ್ಕಳು ರಾಷ್ಟ್ರಗೀತೆಯನ್ನು ಕಡ್ಡಾಯ ಹಾಡಲೇಬೇಕು. ಕಡ್ಡಾಯವಾಗಿ ಇದನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ವಕ್ಫ್ ಮಂಡಳಿಯ ಸಭೆ ಮೇ 25ರಂದು ನಡೆಯಲಿದ್ದು ಅಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಯಾರೂ ಅಭಿಯಾನ ಮಾಡಬೇಕಾಗಿಲ್ಲ. ಯಾರು ಯಾರ ಮೇಲೆ ಏನನ್ನು ಹೇರಲು ಸಾಧ್ಯವಿಲ್ಲ. ಅಭಿಯಾನ ಮಾಡುವವರಿಗೆ ರಾಷ್ಟ್ರಪ್ರೇಮದ ಗಂಭೀರತೆ ಎಷ್ಟಿದೆ ಗೊತ್ತಿಲ್ಲ. ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರು ಈಗ ರಾಷ್ಟ್ರಪ್ರೇಮದ ಪಾಠ ಮಾಡುತ್ತಿದ್ದಾರೆ ಎಂದು ಶಾಫಿ ಟೀಕಿಸಿದರು.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಮಸೀದಿ, ದೇವಸ್ಥಾನ, ಗುಂಬಜ್ ಗಳನ್ನು ಕಟ್ಟಿಸಿದ್ದಾನೆ. ಟಿಪ್ಪು ಮೈಸೂರಿನ ಹುಲಿ ಎಂದು ಪಾಠದಿಂದ ಕಲಿತಿದ್ದೇವೆ. ವ್ಯತಿರಿಕ್ತವಾದ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಲಿ. ಇತಿಹಾಸದ ಕಳಂಕಗಳ ಬಗ್ಗೆ ಆಲೋಚನೆ ಮಾಡಬಾರದು. ಇತಿಹಾಸದ ಒಳ್ಳೆಯ ವಿಚಾರಗಳು ಚರ್ಚೆಯಾಗಲಿ. ಇತಿಹಾಸದ ಚರ್ಚೆಗಳಿಂದ ಹಿಂದು ಮತ್ತು ಮುಸಲ್ಮಾನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಮದರಸದ ಸಿಲೆಬಸ್ 13 ಭಾಷೆಗಳಲ್ಲಿ ಇದೆ. ದೇಶವನ್ನು ಪ್ರೀತಿಸುವುದು, ಭಾಷೆ, ಬಹು ಸಂಸ್ಕೃತಿಯ ಬಗ್ಗೆ ಪಠ್ಯ ಇದೆ ಎಂದು ಮೌಲಾನ ಶಾಫಿ ಸ-ಅದಿ ಹೇಳಿದ್ದಾರೆ.
Karnataka Waqf Board chairman N K Mohammed Shafi Saadi called for action against divisive forces in society. He said he welcomed singing of the national anthem in madrasas although this demand had come from individuals. However, he said nationalism and patriotism should come from within and people who are divisive should be kept aside.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm