ಬ್ರೇಕಿಂಗ್ ನ್ಯೂಸ್
04-05-22 09:13 pm Mangalore Correspondent ಕರಾವಳಿ
ಬಂಟ್ವಾಳ, ಮೇ 4: ಮುಸ್ಲಿಂ ಯುವಕನ ಪ್ರೇಮ ಪಾಶಕ್ಕೆ ಬಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮನೆಯವರು ಬೈದ ಕಾರಣಕ್ಕೆ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣೆ ವ್ಯಾಪ್ತಿಯ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದೆ.
ಮೂಲತಃ ಸುಳ್ಯ ತಾಲೂಕಿನ ಪಂಜ ಮೂಲದ ಪರಿಶಿಷ್ಟ ವರ್ಗಕ್ಕೆ ಸೇರಿದ ಸಂಜೀವ ಎಂಬವರ ಕುಟುಂಬ ಕನ್ಯಾನ ಗ್ರಾಮದ ಕಣಿಯೂರಿನ ಮಸೀದಿ ಹಿಂಭಾಗದ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ಇಂದು ಬೆಳಗ್ಗೆ ತಂದೆ- ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ, ಮಗಳು 15 ವರ್ಷದ ಮಗಳು ಆತ್ಮಿಕಾ ಮನೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ. ಈ ಬಗ್ಗೆ ಸಂಜೀವ ವಿಟ್ಲ ಠಾಣೆಗೆ ನೀಡಿರುವ ದೂರಿನಲ್ಲಿ ಆಕೆಯ ಪ್ರೀತಿಯ ವಿಚಾರ ತಿಳಿಸಿದ್ದಾರೆ.
ಹತ್ತನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಸಾಲೆತ್ತೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಎಂಬಾತ ಪ್ರೀತಿಸುತ್ತಿದ್ದು, ಮನೆ ಬಿಟ್ಟು ತನ್ನ ಜೊತೆ ಬರುವಂತೆ ಪೀಡಿಸುತ್ತಿದ್ದ. ಮನೆಯಲ್ಲಿ ತಂದೆ-ತಾಯಿ ಇಲ್ಲದ ವೇಳೆ ಬಂದು ತನ್ನನ್ನು ಪ್ರೀತಿಸುವಂತೆ ಮತ್ತು ತನ್ನ ಜೊತೆ ಮನೆಯವರನ್ನು ಬಿಟ್ಟು ಬರುಂತೆ ಒತ್ತಾಯ ಪಡಿಸಿದ್ದ. ಈ ಬಗ್ಗೆ ವಿಷಯ ತಿಳಿದ ಹೆತ್ತವರು ಮಗಳಿಗೆ ಬುದ್ಧಿ ಹೇಳಿದ್ದಲ್ಲದೆ, ಸಾಹುಲ್ ನನ್ನು ಪ್ರೀತಿಸದಂತೆ ತಡೆಯೊಡ್ದಿದ್ದರು. ಅದಕ್ಕೆ ನನ್ನ ಜೊತೆ ಬರದಿದ್ದರೆ, ಅಲ್ಲಿಯೇ ಸಾಯುವಂತೆ ಸಾಹುಲ್ ಹೇಳಿದ್ದಾಗಿ ಮಗಳು ಹೆತ್ತವರಲ್ಲಿ ಹೇಳಿದ್ದಳು. ಇದರಿಂದಾಗಿ ಆತನ ದುಷ್ಪ್ರೇರಣೆಯಿಂದ ಮಗಳು ಸಾವಿಗೆ ಶರಣಾಗಿದ್ದಾಳೆ ಎಂದು ತಂದೆ ದೂರಿದ್ದಾರೆ. ಇದರ ನಡುವೆ, ಸಾಹುಲ್ ಹಮೀದ್ ಮತ್ತು ಆತನ ಅಣ್ಣನನ್ನು ಕರೆದು ಸಂಜೀವ ಅವರು ಎಚ್ಚರಿಕೆಯನ್ನೂ ನೀಡಿದ್ದರು. ವಿಟ್ಲ ಪೊಲೀಸರು ಜಾತಿ ನಿಂದನೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಎಂದು ಪ್ರಕರಣ ದಾಖಲಿಸಿದ್ದಾರೆ.
Mangalore Sslc girl commits suicide at her house as parents reject her love for Muslim boy at Vitla. She was said to be of 15 years old.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm