ಬ್ರೇಕಿಂಗ್ ನ್ಯೂಸ್
01-05-22 09:49 pm Mangalore Correspondent ಕರಾವಳಿ
ಮಂಗಳೂರು, ಮೇ 1: ಮಸೀದಿಯಲ್ಲಿ ಆಝಾನ್ ಕೂಗುವ ಮೈಕ್‌ಗಳನ್ನು ಒಂದೋ ತೆಗೆಯಬೇಕು. ಇಲ್ಲವೇ ಅದರ ಶಬ್ದ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಜಾನ್ ಧ್ವನಿ ಕೇಳಿಸದಷ್ಟು ಓಂಕಾರ ಮತ್ತು ಸುಪ್ರಭಾತ ಹಾಕುತ್ತೇವೆ. ನಮ್ಮ ಕೆಲಸವನ್ನು ಹತ್ತಿಕ್ಕಲು ಯತ್ನಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಮುತಾಲಿಕ್, ಮೇ 9 ಕ್ಕೆ ಬೆಳಗ್ಗೆ 5 ಗಂಟೆಗೆ ರಾಜ್ಯದ ಒಂದು ಸಾವಿರ ದೇವಾಲಯ, ಮಠಗಳಲ್ಲಿ ಓಂಕಾರ, ಸುಪ್ರಭಾತ ಹಾಕಲು ತೀರ್ಮಾನಿಸಿದ್ದೇವೆ. ಸರಕಾರ ಇದನ್ನು ತಡೆಯಲು ಮುಂದಾದರೆ ಸಂಘರ್ಷ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೇ 9 ರಂದು ಆಝಾನ್ ಧ್ವನಿ ಕೇಳಿಸದಷ್ಟು ಶಬ್ದದಲ್ಲಿ ಓಂಕಾರ, ಸುಪ್ರಭಾತ ಹಾಕುತ್ತೇವೆ. ಆಝಾನ್ ಮೈಕ್ ನಿಲ್ಲಿಸಲು ಆಗದ ರಾಜ್ಯ ಸರ್ಕಾರ ಮತ್ತು ಕೋರ್ಟ್ ಆದೇಶ ಪಾಲಿಸದ ಮುಸ್ಲಿಂ ಸಮುದಾಯಕ್ಕೆ ಚಾಲೆಂಜ್ ಆಗಿ ಇದನ್ನು ಮಾಡಲಿದ್ದೇವೆ. ಆಝಾನ್ ಮೈಕ್ ಶಬ್ದ ನಿಲ್ಲಿಸದೆ ಇದ್ದರೆ ನಾವೂ ನಮ್ಮ ಸುಪ್ರಭಾತ, ಓಂಕಾರ ನಿಲ್ಲಿಸಲ್ಲ. ಈ ಹೋರಾಟಕ್ಕೆ ಎಲ್ಲ ಹಿಂದೂ ಸಂಘಟನೆಗಳು, ಸ್ವಾಮೀಜಿಗಳು, ಧರ್ಮದರ್ಶಿಗಳು ಸಹಕಾರ ನೀಡುತ್ತಿದ್ದಾರೆ. ಸರ್ಕಾರ ಧೈರ್ಯ ತೋರಿಸಿ ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಆಝಾನ್ ಮೈಕ್ ಇಳಿಸಿದಂತೆ ಕ್ರಮ ಕೈಗೊಳ್ಳಬೇಕು. ಬರೇ ನೋಟಿಸ್ ನೀಡುವ ನಾಟಕ ಮಾಡಬೇಡಿ ಎಂದು ಸರಕಾರದ ವಿರುದ್ಧ ಮುತಾಲಿಕ್ ಕಿಡಿಕಾರಿದ್ದಾರೆ.
ಅಕ್ಷಯ ತೃತೀಯ ದಿನದಂದು ಹಿಂದುಗಳು, ಹಿಂದುಗಳ ಅಂಗಡಿಯಲ್ಲೇ ಚಿನ್ನ, ಬೆಳ್ಳಿ ಖರೀದಿಸಬೇಕು. ಮೇ 3ರಂದು ಅಕ್ಷಯ ತೃತೀಯ ಹಿಂದೂಗಳ ಪಾಲಿಗೆ ಮಹತ್ವದ ಹಬ್ಬವಾಗಿದೆ. ಈ ದಿನ ಹಿಂದು ವಿರೋಧಿಗಳಿಂದ ಚಿನ್ನ, ಬೆಳ್ಳಿ ಖರೀದಿ ಮಾಡಬಾರದು. ಕೇರಳದಿಂದ ಗೋವಾ, ಮಹಾರಾಷ್ಟ್ರ, ತಮಿಳುನಾಡಿಗೆ ದುಬೈನಿಂದ ಕಳ್ಳತನದಿಂದ ಬಂದ ಚಿನ್ನದ ವ್ಯಾಪಾರವನ್ನು ಹಿಂದೂವೇತರರು ಮಾಡುತ್ತಿದ್ದಾರೆ.
ಇದೊಂದು ಬೃಹತ್ ಚಿನ್ನದ ಮಾಫಿಯಾ. ಹಿಂದೂ ಸಮಾಜಕ್ಕೆ ಈ ಮಾಫಿಯಾ ಮೋಸ ಮಾಡುತ್ತಿದೆ. ಕೇರಳದಲ್ಲಿ 8೦೦ಕ್ಕೂ ಅಧಿಕ ಹಿಂದೂ ಮುಖಂಡರು, ಕಾರ್ಯಕರ್ತರ ಕೊಲೆಯಾಗಿದೆ. ಈ ಕೊಲೆಗಡುಕ ಜಾಲಕ್ಕೆ ಚಿನ್ನದ ವ್ಯವಹಾರದಿಂದ ಹಣ ಹೋಗುತ್ತಿದೆ. ಗೋ ಸಾಗಾಟ, ಲವ್ ಜಿಹಾದ್ ಕೃತ್ಯಗಳಿಗೂ ಇದೇ ಚಿನ್ನದ ಮಾಫಿಯಾ ಬೆಂಗಾವಲಾಗಿದೆ. ಇದಕ್ಕಾಗಿ ದುರ್ಗಾಸೇನೆಯವರು ಎಲ್ಲ ಮಹಿಳೆಯರಿಗೂ ಜಾಗೃತಿ ಮೂಡಿಸಬೇಕೆಂದು ಮನವಿ ನೀಡಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
May 9th we will put load speakers outside temples for suprabatha, warns Pramod Muthalik in Mangalore. Those trying to stop us will see communal violence he added.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm