ಬ್ರೇಕಿಂಗ್ ನ್ಯೂಸ್
30-04-22 03:24 pm Mangalore Correspondent ಕರಾವಳಿ
ಮಂಗಳೂರು, ಎ.30: ಇನ್ನೊಂದು ಬೈಕನ್ನು ಓವರ್ ಟೇಕ್ ಮಾಡುವ ಧಾವಂತದಲ್ಲಿ ಬೈಕ್ ಸವಾರನೊಬ್ಬ ಆಯತಪ್ಪಿ ರಸ್ತೆಗೆ ಬಿದ್ದಿದ್ದು ಆತನ ಮೇಲಿನಿಂದಲೇ ಟ್ಯಾಂಕರ್ ಹರಿದು ಯುವಕ ಸ್ಥಳದಲ್ಲೇ ದಾರುಣ ಸಾವು ಕಂಡ ಘಟನೆ ನಗರದ ನಂತೂರಿನಲ್ಲಿ ನಡೆದಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ನಿವಾಸಿ ಸೆಬಾಲ್ಟನ್ ಜಾನ್(21) ಮೃತ ಯುವಕ. ಈತ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಹೊಟೇಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ. ಜಾನ್ ಬೈಕಿನಲ್ಲಿ ನಂತೂರು ಸರ್ಕಲ್ ದಾಟಿ ಮುಂದೆ ಹೋಗುತ್ತಿದ್ದಾಗ ಬುಲೆಟ್ ಬೈಕನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಎರಡು ಬೈಕುಗಳ ಧಾವಂತದಲ್ಲಿ ಜಾನ್ ಚಲಾಯಿಸುತ್ತಿದ್ದ ಪಲ್ಸರ್ ಬೈಕ್ ಬುಲೆಟ್ ಬೈಕಿಗೆ ತಾಗಿ ನೆಲಕ್ಕುರುಳಿದ್ದು ಅದರಲ್ಲಿದ್ದ ಜಾನ್ ರಸ್ತೆಗೆ ಬೀಳುತ್ತಲೇ ಪಕ್ಕದಲ್ಲಿ ಸಾಗುತ್ತಿದ್ದ ಟ್ಯಾಂಕರ್ ಆತನ ಮೇಲೆ ಹರಿದು ಹೋಗಿದೆ.

ಎರಡೂ ಬೈಕುಗಳು ನೆಲಕ್ಕೆ ಬಿದ್ದಿದ್ದು ಬುಲೆಟ್ ಬೈಕ್ ಸವಾರನಿಗೂ ರಸ್ತೆಗೆ ಬಿದ್ದು ಗಾಯಗಳಾಗಿವೆ. ಆದರೆ ಆತ ಹೆಲ್ಮೆಟ್ ಹಾಕಿದ್ದರಿಂದ ಹೆಚ್ಚೇನೂ ಅಪಾಯ ಆಗಿಲ್ಲ. ಪಲ್ಸರ್ ಬೈಕಿನಲ್ಲಿದ್ದವರು ಹೆಲ್ಮೆಟ್ ಹಾಕ್ಕೊಂಡಿರಲಿಲ್ಲ. ಜಾನ್ ತನ್ನ ಹೆಲ್ಮೆಟನ್ನು ಕೈಗೆ ಸಿಕ್ಕಿಸಿಕೊಂಡಿದ್ದ. ರಸ್ತೆಗೆ ಬಿದ್ದ ಯುವಕನ ತಲೆಯ ಭಾಗದಿಂದಲೇ ಟ್ಯಾಂಕರ್ ಲಾರಿಯ ಮುಂದಿನ ಚಕ್ರ ಹರಿದಿದೆ ಎಂದು ಕದ್ರಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಜಾನ್ ಹಿಂಬದಿ ಕುಳಿತಿದ್ದ ಅಂಥೋನಿ ಎಂಬಾತನಿಗೂ ಅಪಘಾತದಲ್ಲಿ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ. ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಏಕಮುಖದ ರಸ್ತೆಯಲ್ಲಿ ಎರಡು ಬೈಕುಗಳ ಅತಿವೇಗದ ಚಾಲನೆಯಿಂದಲೇ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Mangalore accident 21 year college student dies on spot after tanker truck goes on him at Nantoor. The deceased has been ide identified as John. He was pursing his hotel management course in Mangalore.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm