ಬ್ರೇಕಿಂಗ್ ನ್ಯೂಸ್
20-04-22 11:18 am Udupi Correspondent ಕರಾವಳಿ
ಉಡುಪಿ, ಎ.20: ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆಯ ಹಿನ್ನೆಲೆಯಲ್ಲಿ ಹಿಜಾಬ್ ವಿವಾದ ಹೊತ್ತಿಕೊಳ್ಳಲು ಕಾರಣವಾದ ಉಡುಪಿ ಕಾಲೇಜಿನ ಆರು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ಅಲ್ಮಾಸ್ ಶಿಕ್ಷಣ ಸಚಿವರಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಕೇವಲ ಒಂದು ತುಂಡು ಬಟ್ಟೆಯ ಕಾರಣಕ್ಕಾಗಿ ನಮ್ಮ ಶಿಕ್ಷಣವನ್ನು ನಿರಾಕರಿಸುವುದು ಸರಿಯೇ ಎಂದು ಕೇಳಿದ್ದಾರೆ.
ಒಬ್ಬ ಶಿಕ್ಷಣ ಸಚಿವರಾಗಿ ಒಂದು ತುಂಡು ಬಟ್ಟೆಯ ಕಾರಣಕ್ಕಾಗಿ ನಮ್ಮ ಶಿಕ್ಷಣವನ್ನು ನೀವು ನಿರಾಕರಿಸುತ್ತಿದ್ದೀರಿ. ನಾವು ಹಲವು ಸಮಯಗಳಿಂದ ಪರೀಕ್ಷೆಗೆ ತಯಾರಿ ನಡೆಸಿದ್ದೆವು. ಈಗ ಪರೀಕ್ಷೆ ಬರೆಯುವ ಸಮಯ ಬಂದಾಗ, ಬಟ್ಟೆಯ ಕಾರಣಕ್ಕಾಗಿ ನಮ್ಮ ಶಿಕ್ಷಣವನ್ನು ನಿರಾಕರಿಸುತ್ತಿದ್ದೀರಿ ಎಂದು ಅಲ್ಮಾಸ್ ಎಂಬ ಪಿಯುಸಿ ವಿದ್ಯಾರ್ಥಿನಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ನೇರವಾಗಿ ಟ್ವೀಟ್ ಮಾಡಿದ್ದಾರೆ.

ಶಿಕ್ಷಣ ಸಚಿವರೇ, ನಾವು ಪರೀಕ್ಷೆ ಬರೆಯುವುದರಿಂದ ಮಿಸ್ ಆಗಿದ್ದಕ್ಕೆ ಯಾರು ಹೊಣೆ.. ನಾನು ಪ್ರಾಕ್ಟಿಕಲ್ ಪರೀಕ್ಷೆಯನ್ನೂ ಮಿಸ್ ಮಾಡಿದ್ದೇನೆ. ನಿಮ್ಮ ನಿರ್ಧಾರದಿಂದ ನನ್ನ ಕನಸು ಮಾತ್ರ ನುಚ್ಚು ನೂರಾಗಿದ್ದಲ್ಲ. ಇಡೀ ಶಿಕ್ಷಣ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳಕೊಳ್ಳುವಂತಾಗಿದೆ. ನಮಗೆ ನ್ಯಾಯ ಎಲ್ಲಿದೆ ಸರ್, ನಾವು ಯಾಕೆ ತುಂಡು ಬಟ್ಟೆಯ ಕಾರಣಕ್ಕೆ ಸಫರ್ ಆಗಬೇಕು. ನಮಗೆ ಅನ್ಯಾಯ ಮಾಡಬೇಡಿ, ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಅಲ್ಮಾಸ್ ಟ್ವೀಟ್ ಮೂಲಕ ಅಂಗಲಾಚಿದ್ದಾರೆ.

ಜನವರಿ ಆರಂಭದಲ್ಲಿ ಉಡುಪಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆನಂತರ ಹಿಜಾಬ್ ವಿವಾದ ಜೋರಾಗಿಯೇ ಹೊತ್ತಿಕೊಂಡು ರಾಜ್ಯದಲ್ಲಿ ಸಂಘರ್ಷದ ವಾತಾವರಣ ಮೂಡಿಸಿತ್ತು. ಹೈಕೋರ್ಟ್ ಇತ್ತೀಚೆಗೆ ಸರಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದಲ್ಲದೆ, ಕಾಲೇಜು ಸಮವಸ್ತ್ರದ ನಡುವೆ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ತೀರ್ಪು ನೀಡಿತ್ತು. ಇದರಿಂದಾಗಿ ಹಲವಾರು ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಬೇಕೋ, ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದರು. ಆಬಳಿಕ ಧಾರ್ಮಿಕ ಮುಖಂಡರು, ಹಿಜಾಬ್ ತೆಗೆದಿಟ್ಟು ಪರೀಕ್ಷೆ ಪಡೆಯಿರಿ, ಜೀವನದಲ್ಲಿ ಶಿಕ್ಷಣ ಮುಖ್ಯ, ಹಿಜಾಬ್ ಕಾರಣಕ್ಕೆ ಶಿಕ್ಷಣ ಬಲಿ ಕೊಡಬೇಡಿ ಎಂದು ಸಲಹೆ ಮಾಡಿದರೂ, ಎಸ್ಡಿಪಿಐ, ಪಿಎಫ್ಐನಂತಹ ಸಂಘಟನೆಗಳ ಕಾರಣದಿಂದ ಕೆಲವು ಕಡೆ ವಿದ್ಯಾರ್ಥಿನಿಯರು ಪರೀಕ್ಷೆಯನ್ನೇ ಬರೆಯದೆ ದೂರ ನಿಂತಿದ್ದಾರೆ. ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿದ್ದಾಗಲೂ, ಹಲವರು ಪರೀಕ್ಷೆಯಿಂದ ದೂರ ಉಳಿದಿದ್ದರು. ಇದೀಗ ಪಿಯುಸಿ ಪರೀಕ್ಷೆ ಬಂದಿದ್ದು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಧಾರ್ಮಿಕ ಕಟ್ಟುಪಾಡಿನ ಹೆಸರಲ್ಲಿ ಹಿಜಾಬ್ ಮುಂದಿಟ್ಟು ಗೊಂದಲ ಮೂಡಿಸುತ್ತಿದ್ದಾರೆ.
Hijab not allowed during II PUC exams, says @BCNagesh_bjp. Being Edu Minister, is it just for you to deny education for piece of cloth? I had been preparing for my exams since long, all that would go in vain. Don't do this injustice to us sir. Allow us!https://t.co/Qo7OkVMz9I
— Almas (@Ah_Almas12) April 19, 2022
Almas A.H., a second PUC (Class 12) student from Udupi Girl's Pre-University College, one among the six girls who started a protest on hijab in Karnataka which went on to become a major crisis in the state, has said that it was not 'just to deny' education for a piece of cloth. Her post, written on Tuesday, has again raised a debate on hijab in the state.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm