ಬ್ರೇಕಿಂಗ್ ನ್ಯೂಸ್
13-04-22 06:34 pm Mangalore Correspondent ಕರಾವಳಿ
ಮಂಗಳೂರು, ಎ.13 : ಮುಂಬೈನಲ್ಲಿ ಪ್ರಸಿದ್ಧಿ ಪಡೆದಿರುವ ಶ್ರೀಕೃಷ್ಣ ಬಟಾಟ ವಡ ಈಗ ಮಂಗಳೂರಿಗೂ ಬಂದಿದೆ. ನಗರದ ಮಂಗಳಾದೇವಿ ಬಳಿ ಮುಂಬೈನ ನವಮಿ ಗ್ರೂಪ್ ಸಂಸ್ಥೆಯ ನವಮಿ ವೆಜ್ ರೆಸ್ಟೋರೆಂಟ್ ಆರಂಭವಾಗಲಿದ್ದು ಬಟಾಟ ವಡಾ ಸೇರಿದಂತೆ ಮುಂಬೈ ಮತ್ತು ಕರಾವಳಿಯ ಅಪ್ಪಟ ತಿಂಡಿ ತಿನಿಸುಗಳು ಸಿಗಲಿವೆ.
ಬಟಾಟ ವಡಾ, ಸಾಬುದಾನ ವಡಾ, ಪೋಹಾ ಸಮೋಸ, ಕೊತ್ಮಿರ್ ವಡಾ ಮುಂತಾದ ಸವಿ, ಸವಿಯಾದ ಮುಂಬೈ ನಗರದ ಫಾಸ್ಟ್ ಫುಡ್ ಗಳನ್ನು ಕೂಡ ಇಲ್ಲಿ ಸವಿಯಬಹುದಾಗಿದೆ. ಎ.15 ರಂದು ನವಮಿ ವೆಜ್ ರೆಸ್ಟೋರೆಂಟ್ ಶುಭಾರಂಭ ಆಗಲಿದ್ದು ಈ ಬಗ್ಗೆ ಮಾಹಿತಿ ನೀಡಲು ನವಮಿ ಗ್ರೂಪ್ ಸಂಸ್ಥೆಯ ನರೇಶ್ ಎನ್. ಕುಡ್ವಾ, ನಂದ ಕುಮಾರ್ ಆರ್. ಕುಡ್ವಾ, ಅಶ್ವಥ್ ಎನ್. ಪೂಜಾರಿ, ಸಿಂಧು ಬಾಳಿಗಾ, ಮೀನಾಕ್ಷಿ ಬಾಳಿಗಾ ಸುದ್ದಿಗೋಷ್ಟಿ ಕರೆದಿದ್ದರು. ಹೊಟೇಲ್ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ನವಮಿ ವೆಜ್ ರೆಸ್ಟೋರೆಂಟ್ ವೈಶಿಷ್ಟ್ಯಗಳೇನು?
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ತಾಲೂಕಿನ ಬೆಳುವಾಯಿಯವರಾದ ರಾಮರಾಯ ಕುಡ್ವಾ ಅವರು 1916ನೇ ಇಸವಿಯಲ್ಲಿ ದೂರದ ಮುಂಬೈಗೆ ತೆರಳಿ ವಿವಿಧ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡಿ ಹೊಟೇಲ್ ಉದ್ಯಮದ ಬಗ್ಗೆ ತಿಳಿದುಕೊಂಡು 1943ರಲ್ಲಿ ಮುಂಬೈನ ದಾದರ್ ವೆಸ್ಟ್ ನಲ್ಲಿ ಶ್ರೀಕೃಷ್ಣ ಬಟಾಟ ವಡಾ ಎಂಬ ಹೆಸರಲ್ಲಿ ಹೊಟೇಲ್ ಉದ್ಯಮ ಆರಂಭಿಸಿದ್ದರು. ಮುಂದೆ ಇದೇ ಸಂಸ್ಥೆ ಚಬಿಲ್ ದಾಸ್ ಗಲ್ಲಿ ಬಟಾಟ ವಡ ಎಂದು ಜನಪ್ರಿಯತೆ ಗಳಿಸಿತ್ತು. 1974ರಲ್ಲಿ ನಂದಕುಮಾರ್ ಕುಡ್ವಾ ಅವರ ನೇತೃತ್ವದಲ್ಲಿ ಸಂಸ್ಥೆಯು ವಿವಿಧ ರೀತಿಯ ಉದ್ಯಮಗಳಿಗೆ ವಿಸ್ತರಣೆಯಾಗಿತ್ತು. ಇದೀಗ ನರೇಶ್ ಕುಡ್ವ ಉದ್ದಿಮೆ ಪರಂಪರೆಯನ್ನು ಮೂರನೇ ತಲೆಮಾರಿನಲ್ಲಿ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.
ಸುಮಾರು 80 ವರ್ಷಗಳ ಹಿಂದಿನ ತಲೆಮಾರಿನ ಮೂಲ ಪಾಕ ಶಾಸ್ತ್ರದ ಪ್ರಕಾರವೇ ಈಗಲೂ ವಡಾಗಳನ್ನು ತಯಾರಿಸುತ್ತೇವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಲ್ಲ. ಉತ್ತಮ, ಶುಚಿ ರುಚಿಯಾಗಿಯೇ ಆಹಾರವನ್ನು ನೀಡುತ್ತಿದ್ದೇವೆ ಎಂದು ನರೇಶ್ ಎನ್ ಕುಡ್ವಾ ಹೇಳಿದ್ದಾರೆ. ನಮ್ಮ ಮೂಲ ಶಾಖೆ ಮುಂಬೈನ ದಾದರ್ ನಲ್ಲಿ ಶ್ರೀಕೃಷ್ಣ ಬಟಾಟ ವಡಾ ಎನ್ನುವುದು ನೋಂದಾಯಿತ ಸಂಸ್ಥೆಯಾಗಿದ್ದು ಬಟಾಟ ವಡಾ ನಮ್ಮ ಬ್ರಾಂಡ್ ಆಗಿ ಬೆಳೆದಿದೆ ಎಂದು ನಂದಕುಮಾರ್ ಕುಡ್ವಾ ಹೇಳಿದ್ದಾರೆ.
Mumbai's most popular based Veg Restaurant Navmi to open it's branch now in Mangalore at Mangaladevi Temple road on 15th April.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm