ಬ್ರೇಕಿಂಗ್ ನ್ಯೂಸ್
13-04-22 01:20 pm Udupi Correspondent ಕರಾವಳಿ
ಉಡುಪಿ, ಎ.13: ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹ ಇರುವ ಉಡುಪಿ ನಗರದ ಶಾಂಭವಿ ಹೊಟೇಲಿಗೆ ಕುಟುಂಬಸ್ಥರು ಆಗಮಿಸಿದ್ದು ಶವ ಕಂಡು ಕಣ್ಣೀರಿಟ್ಟಿದ್ದಾರೆ. ನನ್ನ ತಮ್ಮನ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಾಧ್ಯಮಗಳ ಮುಂದೆ ಸಂತೋಷ್ ಪಾಟೀಲ್ ಸಹೋದರರು ಗೋಗರೆದಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆಗೈದ ಲಾಡ್ಜ್ ಗೆ ತಡರಾತ್ರಿ 11 ರ ವೇಳೆಗೆ ಸೋದರರು ಸೇರಿ ಎಂಟು ಜನ ಕುಟುಂಬಸ್ಥರು ಆಗಮಿಸಿದ್ದಾರೆ. ಆದರೆ ರಾತ್ರಿ ಲೇಟ್ ಆಗಿದ್ದರಿಂದ ಸ್ಥಳ ಮಹಜರು ಪ್ರಕ್ರಿಯೆ ನಡೆಸಿಲ್ಲ. ಇಂದು ಬೆಳಗ್ಗೆ ಎಫ್ಎಸ್ಎಲ್ ತಜ್ಞರು ಮಹಜರು ಇನ್ನಿತರ ಪ್ರಕ್ರಿಯೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮಕ್ಕೆ ಮಾತನಾಡಿದ ಸಂತೋಷ್ ಪಾಟೀಲ್ ಸೋದರರು, ಡೆತ್ ನೋಟ್ ನಲ್ಲಿ ಹೆಸರಿಸಿರುವ ಎಲ್ಲರ ಬಂಧನ ಆಗಬೇಕು. ಬಂಧನ ಪ್ರಕ್ರಿಯೆ ಆಗದೆ ನಾವು ಸಂತೋಷ್ ಪಾಟೀಲ್ ಶವವನ್ನು ಇಲ್ಲಿಂದ ಕೊಂಡು ಹೋಗಲ್ಲ. ಈಶ್ವರಪ್ಪನವರ ಪಿಎ ಬಸವರಾಜ್, ರಮೇಶ್ ಹೆಸರನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಶ್ವರಪ್ಪನ ಬಳಿ ಸುಮಾರು 80-90 ಸಲ ನನ್ನ ತಮ್ಮ ಭೇಟಿ ಮಾಡಿದ್ದ. ಆದರೆ ಸರಕಾರ ಈ ಕುರಿತು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇವತ್ತು ಈ ಪರಿಸ್ಥಿತಿ ಉಂಟಾಗಿದೆ. ಕಿರುಕುಳದ ಬಗ್ಗೆ ಬೆಳಗಾವಿಯ ಕ್ಯಾಂಪ್ ಸ್ಟೇಶನ್ ಪೋಲಿಸ್ ಠಾಣೆ ಯಲ್ಲಿ ನಾವು ದೂರು ನೀಡಲು ಹೋಗಿದ್ದೆವು. ಆದರೆ ಅಲ್ಲಿ ನಮ್ಮ ದೂರು ಸ್ವೀಕರಿಸಿರಲಿಲ್ಲ. ಏನೇ ಆಗಲಿ, ಆರೋಪಿಗಳ ಬಂಧನ ವಾಗುವ ತನಕ ನಾವು ಶವ ಕೊಂಡುಹೋಗಲ್ಲ ಎಂದು ಆಕ್ರೋಶದ ಧ್ವನಿಯಲ್ಲಿ ಸಂತೋಷ್ ಪಾಟೀಲ್ ಸಹೋದರರು ಮಾತನಾಡಿದ್ದಾರೆ.
An FIR has been filed against Rural Development & Panchayat Raj (RDPR) minister K S Eshwarappa in Udupi in connection to the Santhosh K Patil death case. Eshwarappa has been named as the first accused in the case.Prashanth Patil, brother of Santhosh Patil had visited the spot on Tuesday late night.After visiting the hotel room, he filed a complaint and named minister Eshwarappa, Ramesh and Basavaraj, PA to the minister as accused.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm