ಬ್ರೇಕಿಂಗ್ ನ್ಯೂಸ್
13-03-22 12:05 pm Mangalore Correspondent ಕರಾವಳಿ
ಉಳ್ಳಾಲ, ಮಾ.13: ಬಿಜೆಪಿ ಸೇರಲು ಮುಂದಾಗಿರುವ ಶಾಸಕ ಯು.ಟಿ ಖಾದರ್ ಆಪ್ತ ಸಂತೋಷ್ ಶೆಟ್ಟಿ ಅವರ ಮನೆ ಬಾಗಿಲ ವರೆಗೂ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು ಯಾರು? ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಈಗ ಶಾಸಕರನ್ನ ಜರೆಯುವುದು ಶೋಭೆಯಲ್ಲ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿರುಗೇಟು ನೀಡಿದ್ದಾರೆ.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾದರ್ ಅವರು ಶಾಸಕನ ನೆಲೆಯಲ್ಲಿ ಮಾತ್ರ ಕೆಲಸ ಮಾಡಿದ್ದಾರೆ ಎಂದು ಹೇಳುವ ಸಂತೋಷ್ ಶೆಟ್ರು ಹಳ್ಳಿ ಹಳ್ಳಿಯ ದುರ್ಗಮ ರಸ್ತೆ ಅಭಿವೃದ್ಧಿ ಕಂಡದ್ದನ್ನ ನೋಡಲಿ. ಅವರೀಗ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಮನಸೋತು ಕಮಲ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಹೇಳಿದ್ದು ಅವರ ಮನಸ್ಸಿನ ಅಭಿಪ್ರಾಯವಾಗಿದ್ದು ಯಾರ ವಿಕಾಸ ಆಗಿದೆ ಅನ್ನೋದು ಮಾತ್ರ ರಾಜ್ಯ ಹಾಗೂ ಈ ದೇಶದ ಜನತೆಗೆ ಗೊತ್ತು. ಶಾಸಕ ಯು.ಟಿ. ಖಾದರ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿರುವುದು ಖಂಡನಾರ್ಹ ಎಂದು ಹೇಳಿದರು.
ಉಂಡ ಮನೆಗೆ ದ್ರೋಹ ಸಲ್ಲದು. ಪಕ್ಷ ಬಿಟ್ಟ ಬಳಿಕ ಆರೋಪಿಸುವುದಕ್ಕಿಂತ ಚರ್ಚಿಸಬಹುದಿತ್ತು. ಎಲ್ಲ ಅನುಭವಿಸಿ ಶಾಸಕರ ದೂಷಿಸುವುದು ಶೋಭೆ ತರುವುದಿಲ್ಲ. ಖಾದರ್ ಅವರು ಯಾರನ್ನೂ ಕೋಮು ಭಾವನೆಯಿಂದ ಕಂಡಿಲ್ಲ, ಎಲ್ಲ ಧರ್ಮದ ಮಂದಿರಗಳಿಗೆ ವಿಶೇಷ ಅನುದಾನ ಹಾಗೂ ಎಲ್ಲ ಸಮಾಜಕ್ಕೂ ಸಮುದಾಯ ಭವನ ನಿರ್ಮಿಸುವ ಮೂಲಕ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಸಂತೋಷ್ ಕುಮಾರ್ ಶೆಟ್ಟಿಯುವಕನಾಗಿದ್ದಾಗಲೇ ಮೊತ್ತ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿ ಕೊಟ್ಟಿದ್ದರು. ದುರದೃಷ್ಟವಶಾತ್ ಅವರು ಸೋತಿದ್ದರು. ಬಳಿಕ ಎಪಿಎಂಸಿ ಸದಸ್ಯರನ್ನಾಗಿ ಮಾಡಿದ್ದರು. ಕೆ ಎಸ್ ಅರ್ ಟಿಸಿ ನಿರ್ದೇಶಕರನ್ನಾಗಿ ಮಾಡಿದ್ದರು,ಮರಳು ಮಾರಾಟ ಪರವಾನಗಿ ಕೊಟ್ಟಿದ್ದರು. ಎಂಎಸ್ ಐಎಲ್ ಒಂದು ಶಾಪ್ ಪರವಾನಗಿ ಕೊಟ್ಟಿದ್ದರು. ಅದನ್ನು ಅವರು ಬಾಡಿಗೆಗೆ ಕೊಟ್ಟಿದ್ದಾರೆ.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವಾಗ ಈಶ್ವರ್ ಉಳ್ಳಾಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಇವರಿಗೆ ಅಧಿಕಾರ ಕೊಟ್ಟಿದ್ದರೂ, ಈಶ್ವರ ಉಳ್ಳಾಲ್ ಬೇಸರ ವ್ಯಕ್ತಪಡಿಸದೆ ಇಂದಿಗೂ ಪಕ್ಷಕ್ಕಾಗಿ ಅವಿರತ ದುಡಿಯುತ್ತಿದ್ದಾರೆ. ಸಂತೋಷ್ ಶೆಟ್ಟಿ ಅವರಿಗೆ ಪಕ್ಷ, ಮುಖಂಡರಿಂದ ನೋವಾಗಿದ್ದರೆ ಅವರುಪಕ್ಷದವೇದಿಕೆ, ಮುಖಂಡರ ಜತೆಗೆ ಮಾತನಾಡ ಬೇಕಿತ್ತು ಹೊರತು ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಭರಾಟೆಯಲ್ಲಿ ಈ ರೀತಿಯ ಆರೋಪ ಹೊರಿಸಬಾರದು ಎಂದರು.ಯು.ಟಿ. ಖಾದರ್ ಅವರದ್ದು ಕುಟುಂಬ ರಾಜಕಾರಣವಲ್ಲ. ಅವರ ತಮ್ಮ ಇಫ್ತಿಕಾರ್ ವೈಯಕ್ತಿಕ ವರ್ಚಸ್ಸಿನಿಂದ ವಿವಿಧ ಹುದ್ದೆ ಅಲಂಕರಿಸಿದ್ದಾರೆ. ಅವರು ಯಾವ ಕುಟುಂಬಸ್ಥರನ್ನು ಪದಾಧಿಕಾರಿಯಾಗಿ ನೇಮಿಸಿಲ್ಲ.
ಸಂತೋಷ್ ಶೆಟ್ರು ಬ್ಲಾಕ್ ಅಧ್ಯಕ್ಷರಾಗಿದ್ದ ಸಂದರ್ಭ ಕಾಂಗ್ರೆಸ್ ಪಕ್ಷಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಲಿ. ಅಸಭ್ಯ ಮಾತುಗಳನ್ನು ಆಡುವ ವ್ಯಕ್ತಿ ಪಕ್ಷ ತೊರೆದಿರುವುದು ಕಾಂಗ್ರೆಸ್ ಗೆ ಲಾಭವೇ ಹೊರತು ಯಾವುದೇ ನಷ್ಟ ಇಲ್ಲ ಎಂದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕರೀಂ, ಜಿಲ್ಲಾ ಮುಖಂಡ ಸುರೇಶ್ ಭಟ್ನಗರ, ಬ್ಲಾಕ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ದೀಪಕ್ ಪಿಲಾರ್, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಸುರೇಖಾ ಚಂದ್ರಹಾಸ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ದೇವಕಿ ಆರ್. ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
Ullal Congress leader Sadhashiv Ullal slams Santosh Shetty for making wrong allegations against UT Khader. The concrete road connecting to Santosh shetty was made by MLA Khader which Santosh has forgotten he added. Santosh shetty had alleged that Khader is the most corrupted man.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm